ನ.15ರೊಳಗೆ ರಸ್ತೆಯನ್ನು ಗುಂಡಿ ಮುಕ್ತಗೊಳಿಸಬೇಕು ; PWD ಅಧಿಕಾರಿಗಳ ರಜೆ ರದ್ದುಗೊಳಿಸಿದ ಸಿಎಂ ಯೋಗಿ!

Uttar Pradesh : ನವೆಂಬರ್ 15 ರೊಳಗೆ ಉತ್ತರ ಪ್ರದೇಶ ರಾಜ್ಯದ ರಸ್ತೆಗಳನ್ನು ಗುಂಡಿ ಮುಕ್ತ(PotHoles) ಮಾಡುವಂತೆ ಉತ್ತರ ಪ್ರದೇಶದ(Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(UP CM Orders PWD Officers) ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಗುಂಡಿ ಬಿದ್ದಿರುವ ಅನೇಕ ರಸ್ತೆಗಳ ಸ್ಥಿತಿ-ಗತಿಯನ್ನು ಪರಿಶೀಲಿಸಿ, ಮಾಹಿತಿ ಪಡೆದು ಕೂಡಲೇ ಎಲ್ಲಾ ಪಿಡಬ್ಲ್ಯೂಡಿ(UP CM Orders PWD Officers) ಅಧಿಕಾರಿಗಳ ರಜೆಯನ್ನು ಮುಂದಿನ ತಿಂಗಳು ರದ್ದುಗೊಳಿಸುವಂತೆ ಆದೇಶ ನೀಡಿದ್ದಾರೆ.

https://vijayatimes.com/jamshed-j-irani-is-no-more/

ಯಾವುದೇ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮುಂದಿನ ತಿಂಗಳು ರಜೆ ಮಂಜೂರು ಮಾಡಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಮೂಲಕ ಸೂಚಿಸಿದೆ.

ಎಲ್ಲ ಮುಖ್ಯ ಎಂಜಿನಿಯರ್‌ಗಳಿಗೆ ನೀಡಿರುವ ಸೂಚನೆಯಲ್ಲಿ ಈ ವಿಷಯವನ್ನು ಪ್ರತ್ಯೇಕವಾಗಿ ತಿಳಿಸಲಾಗಿದೆ.

ಯಾವುದೇ ಪಿಡಬ್ಲ್ಯುಡಿ ಅಧಿಕಾರಿಗೆ ಅನಿವಾರ್ಯ ಸಂದರ್ಭಗಳಲ್ಲಿ ರಜೆ ಅಗತ್ಯವಿದ್ದರೆ, ಅವರ ಪ್ರಕರಣಗಳನ್ನು ಅನುಮೋದನೆಗಾಗಿ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ.

https://fb.watch/gwwCgtaPlf/ Kannada Rajyotsava : ಕರ್ನಾಟಕದ ಬಗ್ಗೆ, ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿ ದಿನ ರಾಜ್ಯ ಸರ್ಕಾರಕ್ಕೆ ಪ್ರಗತಿ ವರದಿ ಕಳುಹಿಸುವಂತೆ ಎಲ್ಲ ಜಿಲ್ಲೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಾದೇಶಿಕ ಮುಖ್ಯ ಇಂಜಿನಿಯರ್‌ಗಳು ಕಾಮಗಾರಿಯ ಪ್ರಗತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರತಿದಿನ ವರದಿ ನೀಡಬೇಕು.

ಸಿಎಂ ಯೋಗಿ ಅವರು ನೀಡಿರುವ ಗಡುವಿನೊಳಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಕೆಲಸ ಅಂತ್ಯಗೊಳಿಸಿರುವುದರ ಬಗ್ಗೆ ಸೂಕ್ತವಾಗಿ ವಿವರಣೆ ನೀಡಬೇಕು.

10 ದಿನಗಳಲ್ಲಿ ಎಲ್ಲಾ ವಲಯಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಲು ಕೇಂದ್ರ ಕಚೇರಿ ಮಟ್ಟದಿಂದ ಹಲವಾರು ತಂಡಗಳನ್ನು ರಚಿಸಿ, ನಕ್ಷೆಯ ಅನುಸಾರ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ.

ಗುಂಡಿ ಮುಕ್ತ ರಸ್ತೆಗಳು ನಾಗರಿಕರ ಹಕ್ಕು ಮತ್ತು ಅದನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕು ಎಂದು ಸಿಎಂ ಯೋಗಿ ಈ ಹಿಂದೆ ಒತ್ತಿ ಹೇಳಿದ್ದರು, ಸದ್ಯ ಇದೀಗ ಅಧಿಕಾರಿಗಳಿಗೆ ಖಡಕ್ ಆದೇಶ ಹೊರಡಿಸಿದ್ದಾರೆ.

Exit mobile version