ಭಾರಿ ಸದ್ದು ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಯಾವಾಗ ?

Bengaluru: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಹೊಸ ಸಿನಿಮಾ ನಿರೀಕ್ಷೆಯಲ್ಲಿದ್ದು, ಇದಕ್ಕೆ ಡೈರೆಕ್ಟರ್ ಯಾರು? ಮತ್ತೆ ಈ ಸಿನಿಮಾಗೆ ಯಾವ ರೀತಿ ಹೊಸ ತರಹ ಹೆಸರು ಇಡ್ತಾರೆ ಅನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಇದೀಗ ಈ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಅವರ ಹೊಸ ಸಿನಿಮಾದ ಟೈಟಲ್ ‘ಟಾಕ್ಸಿಕ್’ (Toxic) ಹೆಸರು ಬಿಡುಗಡೆಯಾಗಿದ್ದು, ಈ ಸಿನಿಮಾವನ್ನು ಕೆವಿಎಸ್ ಪ್ರೊಡಕ್ಷನ್ (KVS Production) ಅವರು ನಿರ್ಮಾಣ ಮಾಡಲಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಬ್ಯಾಕ್ ಟು ಬ್ಯಾಕ್ ಪಾನ್ ಇಂಡಿಯಾ ಮೂವಿ ಆದಂತಹ ಕೆಜಿಎಫ್ (KGF) ಸಿನಿಮಾ ಸೂಪರ್ ಹಿಟ್ ಆದ ನಂತರ ಯಶ್ ಅವರ ಮುಂದಿನ ಚಿತ್ರ ಯಾವುದು ಅಂತ ಜನರಲ್ಲಿ ಹೆಚ್ಚು ಕುತೂಹಲ ಮೂಡಿಸಿತ್ತು. ಇದೀಗ ಈ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು, ಯಶ್ ಅವರ ಹೊಸ ಸಿನಿಮಾದ ಹೆಸರು ‘ಟಾಕ್ಸಿಕ್’ ಎಂದು ತಿಳಿದುಬಂದಿದೆ.

ಇದರೊಂದಿಗೆ ಸಿನಿಮಾದ ಫಸ್ಟ್ ಲುಕ್ ಟೀಸರ್ (First Look Teaser) ಅನ್ನು ಕೂಡ ರಿಲೀಸ್ ಮಾಡಲಾಗಿದ್ದು, ಟಾಕ್ಸಿಕ್ ಸಿನಿಮಾದ ಹೆಸರು ಮತ್ತು ಟೀಸರ್ ಬಿಡುಗಡೆ ಆದ ಬೆನ್ನಲ್ಲೇ ಸಿನಿಮಾ ಯಾವಾಗ ತೆರೆ ಮೇಲೆ ಬರಲಿದೆ ಎಂದು ಕೂಡ ಘೋಷಣೆ ಮಾಡಿದ್ದಾರೆ. ಹೌದು, ಈ ಸಿನಿಮಾ ಸದ್ಯಕ್ಕೆ ಎಲ್ಲರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ‘ಟಾಕ್ಸಿಕ್’ ಸಿನಿಮಾ 2025ರ ಏಪ್ರಿಲ್ 10 ರಂದು ಬೆಳ್ಳಿಪರದೆ ಮೇಲೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡಲು ಸಿದ್ಧವಾಗುತ್ತಿದೆ.

ಈ ಚಿತ್ರದ ನಿರ್ಮಾಪಕರು ಯಾರು?
ಬಹಳಷ್ಟು ದಿನಗಳಿಂದ ಯಶ್ ಅವರ ಹೊಸ ಸಿನಿಮಾವನ್ನು ಗೀತು ಮೋಹನರು (Geethu Mohan) ನಿರ್ದೇಶನ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದೀಗ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದ್ದು, ಮಲಯಾಳಂ (Malayalam) ಭಾಷೆಯಲ್ಲಿ ಖ್ಯಾತ ನಟಿಯೆಂದು ಹೆಸರು ಪಡೆದಿರುವ ಗೀತಾ ಮೋಹನ್ ದಾಸ್ ರವರು 1986ರಲ್ಲಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 2000ರಲ್ಲಿ ಹಲವಾರು ಚಲನಚಿತ್ರಗಳಲ್ಲಿ ಮಿಂಚಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಸಾಲು ಸಾಲಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಈ ಚಿತ್ರಕ್ಕೆ ಯಶ್ ಕೂಡ ನಿರ್ಮಾಪಕರಾಗಿದ್ದಾರ?
ಕೆವಿಎನ್ ಪ್ರೊಡಕ್ಷನ್ ವೆಂಕಟೇಶ್ ಕೆ ನಾರಾಯಣ್ (Venkatesh K Narayan) ಅವರು ಟಾಕ್ಸಿಕ್ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ಇದರ ಜೊತೆ ಮಾಸ್ಟರ್ ಮೈಂಡ್ ಕ್ರಿಯೇಶನ್ಸ್ ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸಿದೆ ಹಾಗಾಗಿ ಮಾಸ್ಟರ್ ಮೈಂಡ್ ಕ್ರಿಯೇಶನ್ಸ್ (Master Mind Creations) ಯಾರ ಬ್ಯಾನರ್? ಇದಕ್ಕೆಲ್ಲ ಉತ್ತರ ಯಶ್ ಅನ್ನುತ್ತಿದೆ ಮೂಲಗಳು. ಆದ್ದರಿಂದ ಟಾಕ್ಸಿಕ್ ಸಿನಿಮಾವನ್ನು ಮಾಸ್ಟರ್ ಮೈಂಡ್ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಯಶ್ ಅವರು ಕೂಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನೇಹಾ ಮಂಜುನಾಥ್

Exit mobile version