ಅಮೆರಿಕದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ 22 ಮಂದಿ ಬಲಿ: ಬಂದೂಕುಧಾರಿಗಾಗಿ ಮುಂದುವರೆದ ಹುಡುಕಾಟ

America: ಅಮೆರಿಕದ ಮೈನ್‌ನ ಲೆವಿಸ್ಟನ್ (Lewiston, Maine) ನಗರದಲ್ಲಿ ಬುಧವಾರ ನಡೆದ (US Mass Shooting – 22 Dead) ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು

ಸಾವನ್ನಪ್ಪಿದ್ದು, ಆತಂಕಕಾರಿ ಸಂಗತಿಯೆಂದರೆ ಬಂಧೂಕುದಾರಿಗಾಗಿ ಹುಡುಕಾಟ ಮುಂದುವರಿದಿದೆ. ಆತ ಇನ್ನೂ ಭದ್ರತಾ ಪಡೆಗಳ ಕೈಗೆ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಅಮೆರಿಕದಲ್ಲಿ ಮೇ 2022ರ ಬಳಿಕ ನಡೆದ ಅತ್ಯಂತ ಭೀಕರ (US Mass Shooting – 22 Dead) ಸಾಮೂಹಿಕ ಗುಂಡಿನ ದಾಳಿಯಾಗಿದೆ.

ಈ ಘಟನೆಯಲ್ಲಿ 50-60 ಜನರು ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್‌ (CNN) ವರದಿ ಮಾಡಿದ್ದು, ಇದರಲ್ಲಿ ಗುಂಡಿನ ದಾಳಿಯಿಂದಾಗಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಇನ್ನೂ

ಸ್ಪಷ್ಟವಾಗಿಲ್ಲ. ಈ ಗುಂಡಿನ ದಾಳಿಯನ್ನು 40 ವರ್ಷದ ರಾಬರ್ಟ್ ಕಾರ್ಡ್ ನಡೆಸಿರಬಹುದು ಎಂದು ಲೆವಿಸ್ಟನ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದು, ರಾಬರ್ಟ್‌ ಕಾರ್ಡ್

(Robert Card) ಶಸ್ತ್ರಸಜ್ಜಿತನಾಗಿರಬಹುದು ಹಾಗೂ ಅಪಾಯಕಾರಿ ಎಂದು ಪರಿಗಣಿಸಬೇಕು ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಎಬಿಸಿ ನ್ಯೂಸ್ (ABC News) ವರದಿ ಪ್ರಕಾರ, ಸ್ಥಳೀಯ ಬಾರ್ ಮತ್ತು ವಾಲ್‌ಮಾರ್ಟ್ (Walmart) ವಿತರಣಾ ಕೇಂದ್ರವಾಗಿರುವ ಬೌಲಿಂಗ್ ಅಲ್ಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.

ತನಿಖಾಧಿಕಾರಿಗಳು ಇನ್ನೂ ಕೃತ್ಯ ನಡೆದ ಸ್ಥಳದಲ್ಲಿದ್ದು ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಇಬ್ಬರು ಭದ್ರತಾ ಅಧಿಕಾರಿಗಳು ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್‌ ಪ್ರೆಸ್‌’ಗೆ ತಿಳಿಸಿದ್ದಾರೆ.

ಈ ವೇಳೆ ಸೆಮಿ ಆಟೋಮ್ಯಾಟಿಕ್ ರೈಫಲ್ (Semi Automatic Riffle) ಎಂದು ತೋರುತ್ತಿರುವ ಬಂಧೂಕನ್ನು ಹಿಡಿದಿರುವ ಶಂಕಿತನ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಬುಧವಾರ

ಮುಂಜಾನೆ ಲೆವಿಸ್ಟನ್ ಪೊಲೀಸರು ನಗರದಲ್ಲಿ ಕನಿಷ್ಠ ಗುಂಡಿನ ದಾಳಿಯ ಘಟನೆಗಳನ್ನು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದರು.

ಸಕ್ರಿಯವಾಗಿರಬಹುದಾದ ಶೂಟರ್‌ (Shooter) ಬಗ್ಗೆ ಜನರಿಗೆ ಮೈನೆ ಸ್ಟೇಟ್‌ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. “ನಾವು ಜನರಿಗೆ ಒಂದು ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಆಗ್ರಹಿಸುತ್ತೇವೆ.

ದಯವಿಟ್ಟು ನಿಮ್ಮ ಮನೆಯೊಳಗೆ ಬಾಗಿಲು ಹಾಕಿಕೊಂಡು ಇರಿ. ಪ್ರಸ್ತುತ ಹಲವು ಸ್ಥಳಗಳಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ,” ಎಂದು ಪೊಲೀಸರು ಹೇಳಿದ್ದಾರೆ.

ಅಧ್ಯಕ್ಷ ಜೋ ಬಿಡೆನ್ (Joe Biden), ಮೈನೆ ಗವರ್ನರ್ ಜಾನೆಟ್ ಮಿಲ್ಸ್ ಹಾಗೂ ಇಬ್ಬರು ಸೆನೆಟರ್‌ಗಳು ಮತ್ತು ಸ್ಥಳೀಯ ಕಾಂಗ್ರೆಸ್ ಸದಸ್ಯರಿಗೆ ಕರೆ ಮಾಡಿ ವಿವರಗಳನ್ನು ಪಡೆದುಕೊಂಡಿದ್ದಾರೆ

ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ನಿನ್ನ ಮಗನನ್ನು ಕೊಂದೆ ಎಂದ ಹಮಾಸ್ ಉಗ್ರ: ದೇವರು ಒಳ್ಳೇದು ಮಾಡಲಿ ಎಂದ ಇಸ್ರೇಲ್ ಪ್ರಜೆ!

Exit mobile version