ಉತ್ತರ ಪ್ರದೇಶ ಚುನಾವಣೆ : ಸಮಾಜವಾದಿ ಪಕ್ಷಕ್ಕೆ ಮತ್ತೆ ಆಘಾತ.!

ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜವಾದಿ ಪಕ್ಷಕ್ಕೆ ಮತ್ತೆ ಆಘಾತವಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಎಸ್ಪಿಯ ಮತ್ತೆರಡು ವಿಕೆಟ್ಗಳು ಉರುಳಿದ್ದು, ಇದೀಗ ಸಮಾಜವಾದಿ ಪಕ್ಷದ ಬಂಡಾಯ ಶಾಸಕ ಇಕ್ರಮ್ ಖುರೇಷಿ ಕಾಂಗ್ರೆಸ್ ಸೇರಿದ್ದಾರೆ. ಜೊತೆಗೆ ಪಕ್ಷದ ಇನ್ನೊಬ್ಬ ಬಂಡಾಯ ಶಾಸಕ ಹಾಜಿ ರಿಜ್ವಾನ್ ಕೂಡ ಬಿಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ. ಕುಂದರ್ಕಿಯಿಂದ ಎಸ್ಪಿ ಶಾಸಕರಾಗಿದ್ದ ಹಾಜಿ ರಿಜ್ವಾನ್ ಅವರನ್ನು ಬಿಎಸ್ಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ.

ದೇಹತ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಜಿ ಇಕ್ರಮ್ ಖುರೇಷಿಗೆ ಕಾಂಗ್ರೆಸ್ ಟಿಕೆಟ್ ನೀಡಬಹುದು. ಆದರೆ ಇನ್ನೂ ಘೋಷಣೆ ಮಾಡಿಲ್ಲ. ಚುನಾವಣೆ ಸಮಿಪಿಸುತ್ತಿದ್ದಂತೆ ರಾಜಕಾರಣಿಗಳ ಪಕ್ಷಾಂತರ ಪರ್ವ ಮುಂದುವರಿಯುತ್ತಲೇ ಇದೆ. ರಾಜಕಾರಣಿಗಳಿಗೆ ಅವರ ಮತದಾರರಿಗಿಂತ ಅವರ ವೈಯಕ್ತಿಕವೇ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಅಪರ್ಣಾ ಯಾದವ್ ಕೂಡ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.


ಫೆಬ್ರವರಿ 10ಕ್ಕೆ ಮೊದಲ ಹಂತದ ಚುನಾವಣೆ :

ಫೆಬ್ರವರಿ 10 ರಂದು ಪಶ್ಚಿಮ ಯುಪಿಯ 11 ಜಿಲ್ಲೆಗಳ 58 ಸ್ಥಾನಗಳಲ್ಲಿ ಮತದಾನ ಆರಂಭವಾಗಲಿದೆ. ಇದಾದ ನಂತರ ಎರಡನೇ ಹಂತದಲ್ಲಿ ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅದೇ ಸಮಯದಲ್ಲಿ ಮೂರನೇ ಹಂತದಲ್ಲಿ 59, ನಾಲ್ಕನೇ ಹಂತದಲ್ಲಿ 60, ಐದನೇ ಹಂತದಲ್ಲಿ 60, ಆರನೇ ಹಂತದಲ್ಲಿ 57 ಮತ್ತು ಏಳನೇ ಹಂತದಲ್ಲಿ 54 ಸ್ಥಾನಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 10 ರಂದು ಮೊದಲ ಹಂತದ ಮತದಾನ, ಫೆಬ್ರವರಿ 14 ರಂದು ಎರಡನೇ ಹಂತ, ಫೆಬ್ರವರಿ 20 ರಂದು ಮೂರನೇ ಹಂತ, ಫೆಬ್ರವರಿ 23 ರಂದು ನಾಲ್ಕನೇ ಹಂತ, ಫೆಬ್ರವರಿ 27 ರಂದು ಐದನೇ ಹಂತ, ಮಾರ್ಚ್ 3 ರಂದು ಆರನೇ ಹಂತ ಮತ್ತು ಮಾರ್ಚ್ 7 ರಂದು ಏಳನೇ ಹಂತ 7. ಮಾರ್ಚ್ 10 ರಂದು ಯುಪಿ ಚುನಾವಣೆಯ ಫಲಿತಾಂಶಗಳು ಬರಲಿವೆ.

Exit mobile version