ಉತ್ತರ ಪ್ರದೇಶ ಚುನಾವಣೆ : ಇವಿಎಂ ಜೊತೆ ವಿವಿಪ್ಯಾಟ್ ಬಳಕೆ!

uttarpradesh

ದೇಶವೇ ಕುತೂಹಲದಿಂದ ನೋಡುತ್ತಿರುವ ಉತ್ತರ ಪ್ರದೇಶ ಚುನಾವಣಾ ಸಮೀಪಿಸುತ್ತಿದ್ದಂತೆ, ಚುನಾವಣೆಗೆ ಚುನಾವಣಾ ಆಯೋಗ ಕೂಡ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಚುನಾವಣೆ ಸೋತ ಬಳಿಕ ರಾಜಕೀಯ ಪಕ್ಷಗಳು ಇವಿಎಂ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಲು ಚುನಾವಣಾ ಆಯೋಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ಜೊತೆಗೆ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ ಮೆಷಿನ್ ಅನ್ನು ಬಳಸಲಿದೆ. ಉತ್ತರ ಪ್ರದೇಶದ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಅಳವಡಿಸುವುದು ಇದೇ ಮೊದಲು. ಈ ಹಂತದ ಮೂಲಕ ಮತದಾರರು ತಮ್ಮ ಮತವು ತಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ.


ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲಾ ಇವಿಎಂ ಯಂತ್ರಗಳನ್ನು ವಿವಿಪ್ಯಾಟ್ಗೆ ಜೋಡಿಸಲಾಗುತ್ತದೆ. ಈ ಕ್ರಮವು ಮತದಾರರಲ್ಲಿ ಇವಿಎಂಗಳ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಆಗ್ರಾ ಡಿಎಂ ಪ್ರಭು ಎನ್ ಸಿಂಗ್ ಹೇಳಿದ್ದಾರೆ. ಇವಿಎಂನಲ್ಲಿ ಮತ ಚಲಾಯಿಸಿದ ನಂತರ ವಿವಿಪ್ಯಾಟ್ಗಳು ಕಾಗದವನ್ನು ಮುದ್ರಿಸುತ್ತವೆ ಎಂದು ಅವರು ಹೇಳಿದರು.


ನಿಖರ ಮಾಹಿತಿ :


ವಿವಿಪ್ಯಾಟ್ ವಿದ್ಯುನ್ಮಾನ ಮತಯಂತ್ರಕ್ಕೆ ಜೋಡಿಸಿರುವ ಪ್ರಿಂಟರ್ನಂತೆ ಕಾರ್ಯ ನಿರ್ವಹಿಸುವ ಸರಳ ಸಾಧನವಾಗಿದೆ. ಮತದಾರರು ಮತದಾನದ ವೇಳೆ ತಾವು ಯಾವ ಅಭ್ಯರ್ಥಿಗೆ ಅಥವಾ ಚಿಹ್ನೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದನ್ನು ಈ ಸಾಧನ ಪ್ರದರ್ಶಿಸುತ್ತದೆ. ಮತದಾರರು ಇವಿಎಂನಲ್ಲಿರುವ ಮತದಾನದ ಬಟನ್ ಒತ್ತಿದ ತಕ್ಷಣ ವಿವಿಪ್ಯಾಟ್ಗೆ ಇದರ ಸಂದೇಶ ರವಾನೆಯಾಗಿ ಸ್ವಯಂಚಾಲಿತವಾಗಿ ಮತದಾನ ಮಾಡಿದ ಚಿಹ್ನೆಯ ಮತ್ತಿತರೆ ವಿವರವುಳ್ಳ ಪೇಪರ್ ಚೀಟಿಯೊಂದು ಮುದ್ರಿತವಾಗಿ ಪ್ರದರ್ಶನಗೊಳ್ಳುತ್ತದೆ.

ಈ ಚೀಟಿ 7 ಸೆಕೆಂಡ್ಗಳ ಕಾಲ ಮತದಾರರಿಗೆ ಕಾಣಿಸಿಕೊಂಡ ಬಳಿಕ ಕಟ್ ಆಗಿ ಸೀಲ್ ಮಾಡಿರುವ ಬಾಕ್ಸ್ನಲ್ಲಿ ಬೀಳುತ್ತದೆ. ಈ ಮೂಲಕ ನೀವು ಮತ ಹಾಕಿರುವ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಆ ಮತ ಹೋಗಿದೆಯೇ ಎಂಬುದನ್ನು ಆ ಸಮಯದಲ್ಲಿ ಖಚಿತಪಡಿಸಿಕೊಳ್ಳಬಹುದು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10 ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

Exit mobile version