ಚುನಾವಣೋತ್ತರ ಬಿಜೆಪಿ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಸಿದ್ದವಾಯ್ತು ರಾಹುಲ್ ಅಂಡ್ ಟೀಮ್!

congress

ಪಂಚರಾಜ್ಯಗಳ(Five States) ಚುನಾವಣೆಯ(Election) ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರಪ್ರದೇಶ(UttarPradesh), ಉತ್ತರಾಖಂಡ(Uttarkhand), ಮಣಿಪುರ(Manipur), ಗೋವಾ(Goa) ಮತ್ತು ಪಂಜಾಬ್(Punjab) ರಾಜ್ಯಗಳ ವಿಧಾನಸಭೆಗೆ(VidhanaSabha) ನಡೆದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೇ ಗುರುವಾರದಂದು ಐದು ರಾಜ್ಯಗಳ ಮತ ಎಣಿಕೆ(Vote Counting) ನಡೆಯಲಿದೆ. ಇನ್ನು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರದಲ್ಲಿ ಮುಳುಗಿವೆ. ಇನ್ನು ಬಹುತೇಕ ಸಮೀಕ್ಷೆಗಳ(Poll) ಪ್ರಕಾರ ಗೋವಾ ಮತ್ತು ಮಣಿಪುರದಲ್ಲಿ(Manipur) ಅತಂತ್ರ ಫಲಿತಾಂಶ ಬರುವ ಸಾಧ್ಯತೆಗಳಿವೆ.

ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಈ ರಾಜ್ಯಗಳ ಬಗ್ಗೆ ವಿಶೇಷ ತಂತ್ರಗಳನ್ನು ರೂಪಿಸುತ್ತಿವೆ. 2017ರಲ್ಲಿ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದರು, ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿತ್ತು. ಅದಕ್ಕೆ ಮುಖ್ಯ ಕಾರಣ, ಫಲಿತಾಂಶದ ನಂತರ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಅನುಸರಿಸಿದ ವಿಳಂಬ ನೀತಿ. ಕಾಂಗ್ರೆಸ್ ನಾಯಕರ ವಿಳಂಬ ನೀತಿಯನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ, ಅನೇಕ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಿತ್ತು. ಹೀಗಾಗಿ 2017ರಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫಲಿತಾಂಶಕ್ಕೂ ಮುನ್ನವೇ ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಇನ್ನು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬಿಜೆಪಿಯ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲು ಐದು ತಂಡಗಳನ್ನು ಸಿದ್ದಪಡಿಸಿ ಐದು ರಾಜ್ಯಗಳಿಗೆ ಕಳುಹಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಗೋವಾ ಮತ್ತು ಮಣಿಪುರ ರಾಜ್ಯಗಳ ಮೇಲೆ ವಿಶೇಷ ಗಮನ ಕೇಂದ್ರಿಕರಿಸಿದ್ದಾರೆ. ಅತಂತ್ರ ಫಲಿತಾಂಶ ಬರುವ ಸೂಚನೆಗಳು ಇರುವುದರಿಂದ ಈಗಾಗಲೇ ಗೆಲ್ಲುವ ಸಾಧ್ಯತೆ ಇರುವ ಪಕ್ಷೇತರ ಅಭ್ಯರ್ಥಿಗಳ ಜೊತೆ ಮತ್ತು ಸಣ್ಣಸಣ್ಣ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸುವಂತೆ, ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ವೀಕ್ಷಕರಿಗೆ ತಿಳಿಸಿದ್ದು, ಅತಂತ್ರ ಫಲಿತಾಂಶ ಬಂದರೆ ಕೂಡಲೇ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಕರೆತರುವ ವ್ಯವಸ್ಥೆಯನ್ನು ಮೊದಲೇ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಉತ್ತರಪ್ರದೇಶದಲ್ಲಿ ಯೋಗಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಉತ್ತರಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದೇ ಹೇಳಿವೆ. ಇನ್ನು ಉತ್ತರಾಖಂಡದಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಆದರೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಎಎಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಎಎಪಿ ಸ್ವತಂತ್ರವಾಗಿ ಪಂಜಾಬ್‍ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸೂಚನೆಯನ್ನು ಕೆಲ ಸಮೀಕ್ಷೆಗಳು ನೀಡಿವೆ. ಇನ್ನು ಮಣಿಪುರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗುವ ಸಾಧ್ಯತೆಗಳಿವೆ. ಸಮೀಕ್ಷೆಗಳ ಪ್ರಕಾರ ಪಂಚರಾಜ್ಯಗಳ ಫಲಿತಾಂಶ ಬಿಜೆಪಿಗೆ ನೆಮ್ಮದಿಯ ಜೊತೆಗೆ ಹೊಸ ಉತ್ಸಾಹ ನೀಡಿದರೆ, ಕಾಂಗ್ರೆಸ್‍ನ್ನು ಮತ್ತಷ್ಟು ಕುಗ್ಗಿಸುವ ಸಾಧ್ಯತೆಗಳಿವೆ. ಈಗಾಗಲೇ ಉತ್ತರಭಾರತದ ರಾಜಸ್ಥಾನ ಹೊರತುಪಡಿಸಿ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಮೂಲ ನೆಲೆಯನ್ನೇ ಕಳೆದುಕೊಂಡಿದೆ. ಪಂಚರಾಜ್ಯಗಳ ಫಲಿತಾಂಶದ ನಂತರ ಕಾಂಗ್ರೆಸ್‍ನ ಶಕ್ತಿ ಮತ್ತಷ್ಟು ಕುಗ್ಗಲಿದೆ.

Exit mobile version