ಉತ್ತರ ಪ್ರದೇಶ ಮೊದಲ ಹಂತದಲ್ಲಿ ಶೇ 60% ಮತದಾನ!

vote

ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ಶೇ.60% ರಷ್ಟು ಮತದಾನವಾಗಿದೆ. ಪಶ್ಚಿಮ ಉತ್ತರ ಪ್ರದೇಶದ ಜಾಟ್ ಪ್ರಾಬಲ್ಯ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಇವಿಎಂಗಳಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿ ಬಿಡಿ ರಾಮ್ ತಿವಾರಿ ಮಾತನಾಡಿ ತಾಂತ್ರಿಕ ದೋಷಗಳು ಎದುರಾದ ಪ್ರದೇಶಗಳಲ್ಲಿ ಇವಿಎಂ ಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.


ಆಗ್ರಾ 60.33%, ಅಲಿಗಢ 60.49%,ಗೌತಮ್ ಬುದ್ಧ ನಗರ 56.73%, ಗಾಜಿಯಾಬಾದ್ 54.77%, ಹಾಪುರ್ 60.50%, ಮಥುರಾ 63.28%, ಮೀರತ್ 60.91%, ಮುಜಫರ್ನಗರ 65.34%, ಶಾಮ್ಲಿ 69.42%, ಬಾಗ್ಪತ್, 61.35%, ಬುಲಂದ್‌ಶಹರ್ 60.52%. ಪಶ್ಚಿಮ ಉತ್ತರ ಪ್ರದೇಶ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಈ ಪೈಕಿ ಮುಜಾಫರ ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಶೇ.62.14 ಹಾಗೂ ಶಾಮ್ಲಿ ಜಿಲ್ಲೆಯಲ್ಲಿ ಶೇ.61.78 ಮತದಾನ ನಡೆದಿದೆ.


2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ, ಈ ಕ್ಷೇತ್ರಗಳಲ್ಲಿ 63.47 ರಷ್ಟು ಮತದಾನವಾಗಿತ್ತು.ಈ ಪ್ರದೇಶದ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿದ್ದರೆ, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ತಲಾ ಎರಡು ಸ್ಥಾನಗಳನ್ನು ಪಡೆದಿದ್ದವು ಮತ್ತು 2017 ರ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ ಒಂದು ಸ್ಥಾನವನ್ನು ಗೆದ್ದಿತ್ತು.

Exit mobile version