ಉತ್ತರ ಪ್ರದೇಶ ಚುನಾವಣೆ 50 ಮಹಿಳೆಯರು ಕಾಂಗ್ರೆಸ್‌ನಿಂದ ಸ್ಪರ್ಧೆ

priyanka gandhi

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು ಇದರಲ್ಲಿ 50 ಮಂದಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಗಮನಾರ್ಹ ಸಂಗತಿ ಎಂದರೆ ಅಭ್ಯರ್ಥಿಗಳ ಪೈಕಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಮತ್ತು ಸೋನ್‌ಭದ್ರಾದಲ್ಲಿನ ಉಂಭ ಗ್ರಾಮದಲ್ಲಿ ಭೂಮಿಗಾಗಿ ಗೊಂಡ ಆದಿವಾಸಿಗಳ ಕಾನೂನು ಹೋರಾಟವನ್ನು ಮುನ್ನಡೆಸಿದ್ದ ರಾಮರಾಜ್ ಗೊಂಡ್ ಹೆಸರು ಇದೆ.

ಕಳೆದ ನವೆಂಬರ್‌ನಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಶಹಜಹಾನ್‌ಪುರದಲ್ಲಿ ಭೇಟಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಂದ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಮತ್ತು ಸಿಎಎ ವಿಚಾರವಾಗಿ ಜೈಲಿನಲ್ಲಿದ್ದ ಕಾಂಗ್ರೆಸ್ ನಾಯಕ ಸದಾಫ್ ಜಾಫರ್ ಕೂಡ ಸೇರಿದ್ದಾರೆ.

 “ಒಟ್ಟು 125 ಅಭ್ಯರ್ಥಿಗಳಲ್ಲಿ50 ಮಹಿಳಾ ಅಭ್ಯರ್ಥಿಗಳಿಗೆ ಮತ್ತು 40 ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಐತಿಹಾಸಿಕ ನಿರ್ಧಾರದಿಂದ ಉತ್ತರ ಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯವನ್ನು ತರಲು ನಾವು ಆಶಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Exit mobile version