ಬೇರೆಯವರ ರೀತಿ ಛೀ, ಥೂ ಅಂತ ಅನಿಸಿಕೊಂಡಿಲ್ಲ! ಮತ್ತೊಂದು ತಪ್ಪು ಮಾಡಿಲ್ಲ : ಸಚಿವ ವಿ.ಸೋಮಣ್ಣ

Bengaluru : ಬೇರೆಯವರ ರೀತಿ ಛೀ, ಥೂ ಅಂತ ಅನಿಸಿಕೊಂಡಿಲ್ಲ, ಮತ್ತೊಂದು ತಪ್ಪು ಮಾಡಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವಾಗ ಸಚಿವ ವಿ.ಸೋಮಣ್ಣ (V Somanna statement) ಅವರು ಈ ರೀತಿ ಹೇಳಿದ್ದಾರೆ.

ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನಾವಳಿಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ. ಈ ಪೈಕಿ ಮುನ್ನೆಲೆಗೆ ಬಂದ ಪ್ರಶ್ನೆ,

ನೀವು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್‌ (DK Sivakumar) ಅವರೊಟ್ಟಿಗೆ ಚರ್ಚೆ ಮಾಡಿದ್ದೀರ ಎಂದು ಹೇಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿ‌.ಸೋಮಣ್ಣ ಅವರು,

ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನನ್ನ ಒಳ್ಳೆ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೀನಿ(V Somanna statement) ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, ರಾಜಕಾರಣದಲ್ಲಿ ಇವೆಲ್ಲ ತೀರ ಸಾಮಾನ್ಯ.

ಇದನ್ನೂ ಓದಿ : https://vijayatimes.com/rajinikanth-and-sanjusamson-meet/

ನಾನು ಚಿಂಚೋಳಿ, ಅಶೋಕ ಕಲ್ಯಾಣಿ, ಸಿಂಧಗಿ, ಕಡೂರು, ಕೊಪ್ಪಳ, ಚನ್ನಪಟ್ಟಣಯಿಂದ ಹಿಡಿದು ಎಲ್ಲಾ ಕಡೆ ಕೆಲಸ ಮಾಡಿದ್ದೀನಿ. ಯಾವುದೋ ಒಂದು ಸೋತಿದ್ದು ಬಿಟ್ಟರೇ ಬಾಕಿ ಎಲ್ಲವನ್ನು ಪಾರ್ಟಿ ಅಲ್ಲಿ ಗೆಲ್ಲಿಸಿಕೊಂಡು ಬಂದಿದ್ದೀನಿ.

ತುಮಕೂರು ಲೋಕಸಭಾ ಕ್ಷೇತ್ರ ಯಾರು ಹೋಗಲಿಲ್ಲ, ಪಾರ್ಟಿ ನಮ್ಮನ್ನು ಕರೆಸಿ, ಏನು ಮಾಡಲು ಹೇಳಿತೋ ಅದನ್ನು ನಾನು ಮಾಡಿದ್ದೀನಿ ಅಷ್ಟೇ.

ನಾನು ಖುಷಿಯಾಗಿರ್ತೀನೋ, ಬಿಡ್ತಿವೋ ಇದು ರಾಜಕಾರಣ. ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ.

ಹಾಗಂತ ನಾನೇನೂ ಸನ್ಯಾಸಿ ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ (BJP) ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ.

ಇಲ್ಲ ಅಂದ್ರೆ ಇಲ್ಲ. ದಿನ ಬೆಳಗ್ಗೆ ಆಯ್ತು ಅಂದ್ರೆ ನನ್ನ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ.

ಒಂದು ಪಕ್ಷದಲ್ಲಿ ಇದ್ದುಕೊಂಡು ನಾನು ಏನು ಹೇಳೋದು ಬೇಡ ಅಂದ್ರೆ ಏನು ಮಾಡಬೇಕು ನಾನು? ನಾನು ಸನ್ಯಾಸಿ ಅಲ್ಲ! ಏನು ಹೇಳಬೇಕೋ,

ಎಲ್ಲಿ ಹೇಳಬೇಕೋ, ಅದನ್ನು ಹೇಳಿದ್ದೀನಿ. ಬಿಜೆಪಿಯ ಬಗ್ಗೆ ನಾವು ಎಲ್ಲಿಯೂ ಮಾತನಾಡಿಲ್ಲ. ಮಾತನಾಡಿರುವವರು ಯಾರೋ, ನೀವು ಅವರನ್ನೇ ಕೇಳಿ ಎಂದು ನಾನು ಹೇಳ್ತೀನಿ.

ಇದನ್ನೂ ಓದಿ : https://vijayatimes.com/eshwarappa-statement-on-azan/

ನಾನು ಬೆಂಗಳೂರಿಗೆ ಬಂದು 56 ವರ್ಷ ಆಯ್ತು. 45 ವರ್ಷ ರಾಜಕೀಯ ಮಾಡುತ್ತಿದ್ದೇನೆ, ಅನೇಕ ತೊಡರುಗಳನ್ನು ನೋಡಿದ್ದೇನೆ, ಸ್ವತಂತ್ರವಾಗಿ ಬೆಂಗಳೂರಿನಲ್ಲಿ ನಿಂತಿದ್ದೇನೆ.

ಕೆಲಸ ಮಾಡುವ ಜನರನ್ನು ಜನರು ಗೌರವಿಸುತ್ತಾರೆ ಎಂಬುದಕ್ಕೆ ಸೋಮಣ್ಣ ಕೂಡ ಉದಾಹರಣೆ. ಒಬ್ಬ ರಾಜಕಾರಣಿ ಆದವರಿಗೆ ಒಂದು ಕಮ್ಮಿಂಟ್‌ಮೆಂಟ್‌ ಇರಬೇಕು.

ಬದ್ಧತೆ ಇರಬೇಕು, ಆ ಬದ್ಧತೆ ಇಲ್ಲ ಎಂದರೆ ಏನು ಮಾಡಲು ಸಾಧ್ಯವಿಲ್ಲ! ನಾನು ತುಂಬ ಗೌರವವಾಗಿ ನಡೆದುಕೊಂಡು ಬಂದಿದ್ದೇನೆ.

ಬೇರೆಯವರ ರೀತಿ ಛೀ, ಥೂ ಅಂತ ಅನಿಸಿಕೊಂಡಿಲ್ಲ! ಮತ್ತೊಂದು ತಪ್ಪು ಮಾಡಿಲ್ಲ. ಬೀದಿಗಳಿಗೆ ಹೋಗ್ತೀನಿ, ಜನರ ಕಷ್ಟಗಳನ್ನು ಕೇಳ್ತೀನಿ. ನನ್ನ ಕ್ಷೇತ್ರಗಳಲ್ಲಿ ಎರಡು ಗಂಟೆ ಸುತ್ತಾಡಿ ತಿಳಿದುಕೊಳ್ಳಿ ಎಂದು ಹೇಳಿದರು

Exit mobile version