ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು KFD ಯಲ್ಲಿ ಆನೆ ಮತ್ತು ಕಾವಾಡಿಗ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 29 ರೊಳಗಾಗಿ ಅರ್ಜಿ ಸಲ್ಲಿಸಲು(vacancy in forest department) ಅವಕಾಶವಿದೆ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ದಾಖಲೆಗಳು, ವಯೋಮಿತಿ, ವೇತನ ಶ್ರೇಣಿಯ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಂತರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ.

ಇಲಾಖೆ ಹೆಸರು: ಕರ್ನಾಟಕ ಅರಣ್ಯ ಇಲಾಖೆ
ಖಾಲಿ ಹುದ್ದೆಗಳು: 19
ಹುದ್ದೆಯ ಹೆಸರು: ಆನೆ ಕಾವಾಡಿಗ
ಅರ್ಜಿ ಸಲ್ಲಿಸುವ ವಿಧಾನ: ಆಫ್ಲೈನ್
ಹುದ್ದೆಯ ಸ್ಥಳಗಳ ವಿವರ :
ಚಾಮರಾಜನಗರ : 6
ಶಿವಮೊಗ್ಗ : 4
ಕೊಡಗು : 4
ಮೈಸೂರು. : 5
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು ಮತ್ತು ಆನೆ ನಿರ್ವಹಣೆಯಲ್ಲಿ ಕಡ್ಡಾಯವಾಗಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 35 ವರ್ಷಗಳಿರಬೇಕು.
2ಎ 2ಬಿ 3ಎ 3ಬಿ ಓಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳು
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳ ಕಾಲ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ವೇತನ ಶ್ರೇಣಿ: ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,600/- ರಿಂದ 32,600/- ರೂ ಗಳ ವರೆಗೆ ವೇತನ ನೀಡಲಾಗುತ್ತದೆ.
ನೇಮಕಾತಿ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ನಿಯಮಾನುಸಾರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ: ಕೊಡಗು ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ ‘ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ’, ಕೊಡಗು ವೃತ್ತ, ಅರಣ್ಯ ಭವನ, ಮೈಸೂರು ರಸ್ತೆ, ಮಡಿಕೇರಿ – 571201, ಕೊಡಗು.
ಶಿವಮೊಗ್ಗ ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ವೃತ್ತ, ಶಿವಮೊಗ್ಗ.ಹೊಳೆಹೊನ್ನೂರು ರಸ್ತೆ, ಸರ್ಕಾರಿ ಶ್ರೀಗಂಧ ಕೋಠಿ ಆವರಣ, ವಿದ್ಯಾನಗರ, ಶಿವಮೊಗ್ಗ -577203.
ಚಾಮರಾಜನಗರ ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಚಾಮರಾಜ ವೃತ್ತ, ಸುಲ್ತಾನ್ ಷರೀಫ್ ವೃತ್ತ, ಸತ್ಯಮಂಗಲ ರಸ್ತೆ, ಚಾಮರಾಜನಗರ – 571313.
ಮೈಸೂರು ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಮೈಸೂರು ವೃತ್ತ, ಅರಣ್ಯ ಭವನ, ಅಶೋಕಪುರಂ, ಮೈಸೂರು – 570008
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: ಮಾರ್ಚ್ 30 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 29 2023
ಅರಣ್ಯ ವೃತ್ತಾವಾರು ಆನೆ ಕಾವಾಡಿ ಹುದ್ದೆಗಳ ಅಧಿಸೂಚನೆಗೆ ವೆಬ್ಸೈಟ್ ವಿಳಾಸ https://kfdrecruitment.in/ ಕ್ಕೆ ಭೇಟಿ ನೀಡಿ.
ಅಮರೇಶ