ಇಂಟೆಲಿಜೆನ್ಸ್ ಬ್ಯುರೊದಲ್ಲಿ 226 ಹುದ್ದೆಗಳ ನೇಮಕ: UG, PG ಪಾಸಾದವರು ಅರ್ಜಿ ಸಲ್ಲಿಸಬಹುದು

ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಇಂಟೆಲಿಜೆನ್ಸ್ ಬ್ಯುರೊ (Intelligence Bureau)ದಲ್ಲಿ ಖಾಲಿ ಇರುವ 226 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (Assistant Central Intelligence Bureau) ಮತ್ತು ಟೆಕ್ ಎಕ್ಸಾಮ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಕೇಂದ್ರ ಗೃಹ ಸಚಿವಾಲಯ
ನೇಮಕಾತಿ ಇಲಾಖೆ : ಗುಪ್ತಚರ ಮಂಡಳಿ
ಹುದ್ದೆಗಳು : ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಮತ್ತು ಟೆಕ್ ಎಕ್ಸಾಮ್ (Tech Exam)
ಒಟ್ಟು ಹುದ್ದೆಗಳ ಸಂಖ್ಯೆ : 226

ಹುದ್ದೆಗಳ ವಿವರ
ಕಂಪ್ಯೂಟರ್ ಸೈನ್ಸ್ : 79
ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ : 147

ಶೈಕ್ಷಣಿಕ ಅರ್ಹತೆಗಳು : BE / B.Tech / PG ಪದವಿಗಳನ್ನು ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.

ವೇತನ ಶ್ರೇಣಿ : ರೂ.44,900- 1,42,400.

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ :
GM, OBC ಕೆಟಗರಿ ಅಭ್ಯರ್ಥಿಗಳಿಗೆ ರೂ.200.
SC/ST/PWD ಅಭ್ಯರ್ಥಿಗಳಿಗೆ ರೂ.100.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ : ಗೇಟ್ ಅಂಕಗಳು ಮತ್ತು ಸಂದರ್ಶನದ ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 23-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 12-01-2024

Exit mobile version