ವಾಷಿಂಗ್ಟನ್‌ ನಲ್ಲಿ ಶಾಲಾ, ಕಾಲೇಜಿ ಸಿಬ್ಬಂದಿಗೆ ಲಸಿಕೆ ಕಡ್ಡಾಯ: ಇಲ್ಲದಿದ್ದರೆ, ಕೆಲಸದಿಂದ ವಜಾ

FILE PHOTO: A woman holds a small bottle labelled with a "Coronavirus COVID-19 Vaccine" sticker and a medical syringe in this illustration taken October 30, 2020. REUTERS/Dado Ruvic/File Photo

ವಾಷಿಂಗ್ಟನ್‌: ರಾಜ್ಯದ ಎಲ್ಲ ಶಾಲೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಕ್ರೀಡಾ ತರಬೇತುದಾರರು ಮತ್ತು ಬಸ್‌ ಚಾಲಕರು, ಸ್ವಯಂ ಸೇವಕರು ಕಡ್ಡಾಯವಾಗಿ ‌ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪಡೆದಿರಬೇಕು ಎಂಬ ನಿಯಮವನ್ನು ಸರ್ಕಾರ ತನ್ನ ಹೊಸ ನೀತಿಯಲ್ಲಿ ಸೇರಿಸಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌‘ ವರದಿ ಮಾಡಿದೆ.

ರಾಜ್ಯಪಾಲ ಜಾಯ್‌ ಇನ್ಸ್‌ಲೀ ಅವರು ಬುಧವಾರ ಪ್ರಕಟಿಸಿದ ಹೊಸ ನೀತಿಯ ಪ್ರಕಾರ, ಶಾಲೆಗಳಲ್ಲಿ ಉದ್ಯೋಗ ಮಾಡುವವರೆಲ್ಲರೂ ಕಡ್ಡಾಯ ಹಾಗೂ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಖಾಸಗಿ, ಸರ್ಕಾರಿ ಅಥವಾ ಯಾವುದೇ ದತ್ತಿ ಶಿಕ್ಷಣ ಸಂಸ್ಥೆಯಾಗಿರಬಹುದು, ಅಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸೂಚಿಸಲಾಗಿದೆ.

‘12 ವರ್ಷದೊಳಗಿನ ಮಕ್ಕಳು ಇನ್ನೂ ಲಸಿಕೆ ಪಡೆಯಲು ಅರ್ಹರಾಗಿಲ್ಲ‘ ಎಂದು ನೆನಪಿಸಿದ ಜಾಯ್‌, ‘ನೀವು ಲಸಿಕೆ ಪಡೆಯುತ್ತೀರೆಂದರೆ, ಲಸಿಕೆ ಪಡೆಯದ ನಿಮ್ಮ ಮಗುವನ್ನು ನೀವು ರಕ್ಷಿಸುತ್ತೀರಿ‘ ಎಂದು ಹೇಳಿದರು.

ಹೊಸ ನೀತಿಯ ಪ್ರಕಾರ ಅಕ್ಟೋಬರ್ 18ರೊಳಗೆ ಶಾಲಾ ಸಿಬ್ಬಂದಿ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರಬೇಕು. ಇಲ್ಲದಿದ್ದರೆ, ಅಂಥವರು ಸೇವೆಯಿಂದಲೇ ವಜಾಗೊಳ್ಳುವಂತಹ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.

Exit mobile version