ಹಾನಿಗೊಳಗಾಗಿದ್ದ ಮನೆಗೆ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಅವರಿಂದ ಸಹಾಯಧನ

ಚಿಕ್ಕಮಗಳೂರು ಅ 9 ಕಾಫಿನಾಡು ಈ ಬಾರಿಯ ಮಳೆಗಾಲಕ್ಕೆ ನಲುಗಿ ಹೋಗಿತ್ತು, ಕೆಲವಷ್ಟು ಕುಟುಂಬಗಳು ಮನೆ, ಜಾನುವಾರು ಇತ್ಯಾದಿಗಳನ್ನು ಮಳೆಯಿಂದಾಗಿ ಕಳೆದುಕೊಂಡಿತ್ತು.

ಈ ಬಾರಿಯ ಮಳೆಗಾಲದಲ್ಲಿ ಗಾಳಿ ಹಾಗೂ ಮಳೆಯಿಂದಾಗಿ ಹಾನಿಗೊಳಗಾಗಿದ್ದ  ಮನೆಗೆ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಅವರು ಸಹಾಯಧನ ನೀಡಿದ್ದಾರೆ.

ಮೂಡಿಗೆರೆ ಕಸಬಾ ವಲಯದ ಹೆಸ್ಗಲ್ ಗ್ರಾಮದ ಬಿಳಗುಳ ನಿವಾಸಿ ಶ್ರೀಮತಿ ಕಲಾವತಿಯವರ ಮನೆ ಕುಸಿದು ಬಿದ್ದು ಹಾನಿಗೊಳಗಾಗಿತ್ತು . ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ ಅವರು ಯೋಜನಾಧಿಕಾರಿ ಗಮನಕ್ಕೆ ತಂದು ಅವರ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಿಗೆ ಮನವಿಯನ್ನು  ಕೂಡ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಪೂಜ್ಯ ಖಾವಂದರು 15,000 ರೂಪಾಯಿ ಸಹಾಯಧನವನ್ನು ಸಂತ್ರಸ್ತ ಕುಟುಂಬಕ್ಕೆ ಮಂಜೂರು ಮಾಡಿದ್ದಾರೆ. ಈ ಚೆಕ್ಕನ್ನು ತಾಲೂಕು ಯೋಜನಾಧಿಕಾರಿಗಳಾದ ಶಿವಾನಂದ ಪಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಪ್ರವೀಣ್ ಪೂಜಾರಿ , ಮೇಲ್ವಿಚಾರಕರಾದ ವಿಘ್ನೇಶ್ ,ಸೇವಾಪ್ರತಿನಿಧಿಗಳಾದ ಶ್ರೀಮತಿ ಕಾಮಾಕ್ಷಿ ಇವರ ಉಪಸ್ಥಿತಿಯಲ್ಲಿ ಕುಟುಂಬಕ್ಕೆ ವಿತರಿಸಲಾಯಿತು

Exit mobile version