ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ

ನವದೆಹಲಿ,ಡಿ.19: ಲಾಕ್‌ಡೌನ್‌ನಿಂದ ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಆನ್‍ಲೈನ್‌ ಕ್ಲಾಸ್‌ಗಳನ್ನು ನಡೆಸಿಕೊಂಡು ಬರುತ್ತಿದೆ. ಆದರೆ ಬಹಳ ವಿದ್ಯಾರ್ಥಿಗಳ ಹತ್ತಿರ ಸ್ಮಾರ್ಟ್ ಫೋನ್ ಇಲ್ಲದ ಕಾರಣ ಆನ್‍ಲೈನ್ ಕ್ಲಾಸಸ್‍ಗಳಲ್ಲಿ ಭಾಗಿಯಾಗಲು ತೊಂದರೆಗಳಾಗುತ್ತಿತ್ತು. ಇದನ್ನು ಗಮನಿಸಿದ ಹಲವು ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿಹಾರಗಳನ್ನು ಕಂಡುಕೊಂಡಿವೆ. ಅಂತೆಯೇ ಪಂಜಾಬ್ ಸರ್ಕಾರವು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸಿದೆ.

ಈ ಯೋಜನೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌, ಸರ್ಕಾರಿ ಶಾಲೆ 12ನೇ ತರಗತಿ ಮಕ್ಕಳಿಗೆ ಆನ್‍ಲೈನ್ ಕ್ಲಾಸಗಳಲ್ಲಿ ಭಾಗಿಯಾಗಲು ಅನುಕೂಲವಾಗಲು ಈ ಯೋಜನೆಯನ್ನು ರೂಪಿಸಿದೆ. 1,75,443 ಸ್ಮಾರ್ಟ್ ಫೋನ್‍ಗಳನ್ನು ವಿತರಿಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ ಮೊದಲ ಹಂತದಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಾಗಿದೆ.

Exit mobile version