ಚಂದ್ರಯಾನ- 3 : ಚಂದಿರನ ಅಂಗಳಕ್ಕೆ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಸಮಯ ಬಹಿರಂಗ, ಲ್ಯಾಂಡಿಂಗ್‌ ಪ್ರಕ್ರಿಯೆ ವೀಕ್ಷಿಸುವುದು ಹೇಗೆ?

Bengaluru : ಚಂದ್ರಯಾನ-3 (Chandrayaan-3)ಯಶಸ್ಸಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿದೆ. ಚಂದಮಾಮನ ಅಂಟಾರ್ಕ್ಟಿಕ್(Vikram Lander Landing Process) ಭಾಗದಲ್ಲಿ ಇಳಿಯುವ

ಇಸ್ರೋ ಕನಸು ನನಸಾಗಿದೆ. ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್(Vikram Lander) ಚಂದ್ರನಲ್ಲಿ ಇಳಿಯುವ ವಿವರಗಳನ್ನು ಇಸ್ರೋ (Isro)ಬಿಡುಗಡೆ ಮಾಡಿದೆ. ಆ ಮೂಲಕ ಭಾರತೀಯರೆಲ್ಲರೂ

ಎದುರು (Vikram Lander Landing Process) ನೋಡುವಂತಾಗಿದೆ.

ಹೌದು, ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇದೀಗ ಚಂದ್ರನನ್ನು ಸಮೀಪಿಸುತ್ತಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೇವಲ 25 ಕಿಲೋಮೀಟರ್ ದೂರದಲ್ಲಿದೆ ಎಂದು ಇಸ್ರೋ ಹೇಳಿದೆ.

ಈ ಮೂಲಕ ಚಂದ್ರಯಾನ-3ರ ಯಶಸ್ಸಿನ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ. ಇಸ್ರೋ ಪ್ರಕಾರ, ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್ (Landing) ಪ್ರಕ್ರಿಯೆಯು ಆಗಸ್ಟ್ 23 ರಂದು ಪೂರ್ಣಗೊಳ್ಳಲಿದೆ.

ಹಾಗಾದರೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರುತ್ತದೆ? ಚಂದ್ರಯಾನ-3 ಇತ್ತೀಚಿನ ಅಪ್‌ಡೇಟ್ (Update) ಏನೆಂದು ತಿಳಿಯಲು ಈ ಲೇಖನವನ್ನು ಓದಿ.

ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಶಕ್ತಿ ಯೋಜನೆ ಕೊನೆಗೊಳ್ಳುತ್ತಿದೆ ಎಂಬ ಸುದ್ದಿ : ಯೋಜನೆ ಕೊನೆಯಾಗುತ್ತಾ, ಸರ್ಕಾರ ಏನು ಹೇಳುತ್ತೆ?

ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್ ಲ್ಯಾಂಡರ್ ಉಡಾವಣೆಯ ಎರಡನೇ ಮತ್ತು ಅಂತಿಮ ನಿಧಾನಗತಿಯ

ಹಂತವು ಯಶಸ್ವಿಯಾಗಿದೆ, ವಿಕ್ರಮ್‌ ಲ್ಯಾಂಡರ್‌ 25 X 134 ಕಿಮೀ ಮೇಲ್ಮೈಯಲ್ಲಿನ ಕಕ್ಷೆಗೆ ತರಲಾಗಿದೆ. ಇದು ಇಸ್ರೋ ಚಂದ್ರನ ಮೇಲಿನ ಸಾಫ್ಟ್‌ ಲ್ಯಾಂಡಿಂಗ್‌(Soft Landing) ಮಾಡಲು

ಉದ್ದೇಶಿಸಿರುವ ಜಾಗಕ್ಕೆ ಹತ್ತಿರದಲ್ಲಿದೆ ಎನ್ನಲಾಗಿದೆ.

ಸದ್ಯ ವಿಕ್ರಮ್ ಲ್ಯಾಂಡರ್ ಚಂದಮಾಮದ ಅಂಗಳಕ್ಕೆ ಬರುತ್ತಿದ್ದು, ಈ ಬೃಹತ್ ಪ್ರಯತ್ನ ಯಶಸ್ವಿಯಾಗುವ ವಿಶ್ವಾಸ ಇಸ್ರೋ ಹೊಂದಿದೆ. ಇದಲ್ಲದೆ, ಚಂದ್ರಯಾನ-2 ಅಸಮರ್ಪಕ ಕಾರ್ಯವನ್ನು

ಸರಿಪಡಿಸುವ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ದೊಡ್ಡ ಸವಾಲನ್ನು ಇಸ್ರೋ ಎದುರಿಸುತ್ತಿದೆ. ಅದರಂತೆ, ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 6:04 ಕ್ಕೆ ಚಂದ್ರನ ಮೇಲೆ ಇಳಿಯುವ

ನಿರೀಕ್ಷೆಯಿದೆ. ಇಸ್ರೋ ತನ್ನ ಟ್ವಿಟರ್ (Twitter) ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಚಂದ್ರಯಾನ- 3ರ ನೌಕೆ ಲ್ಯಾಂಡ್‌ ಆಗುವುದನ್ನು ವೀಕ್ಷಿಸುವುದು ಹೇಗೆ?

ಚಂದ್ರಯಾನ- 3 ತರ ನೌಕೆ ಚಂದ್ರನ ಅಂಗಳದಲ್ಲಿ ಆಗಸ್ಟ್(August) 23ರ ಸಂಜೆ 6:04 ಗಂಟೆಗೆ ಇಳಿಯಲಿದೆ. ಸಂಜೆ 5.45 ರಿಂದ ಈ ಪ್ರಕ್ರಿಯೆ ಶುರುವಾಗಲಿದೆ. ನೀವು ಕೂಡ ಚಂದ್ರಯಾನ- 3

ಲ್ಯಾಂಡಿಂಗ್‌ ಪ್ರಕ್ರಿಯೆ ಲೈವ್‌ (Live)ಆಗಿ ಸಂಜೆ 5:27 ರಿಂದ ನೋಡಬಹುದಾಗಿದೆ. ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್(Youtube channel), ಇಸ್ರೋದ ಅಧಿಕೃತ ವೆಬ್‌ಸೈಟ್

https://isro.gov.in, ಇಸ್ರೋದ ಅಧಿಕೃತ ಫೇಸ್‌ಬುಕ್ ಚಾನೆಲ್ (Facebook channel) ಮೂಲಕ ಲೈವ್‌ ಆಗಿ ನೋಡಬಹುದಾಗಿದೆ.

ಚಂದ್ರಯಾನ- 3 ರ ಲ್ಯಾಂಡಿಂಗ್‌ ಸಂಜೆ ಸಮಯದಲ್ಲಿಯೇ ಆಗುತ್ತಿರುವುದು ಏಕೆ?

ಚಂದ್ರಯಾನ-3 ರಾತ್ರಿ ಚಂದ್ರನ ಅಂಗಳದಲ್ಲಿ ಇಳಿಯಲು ಒಂದು ಕಾರಣವಿದೆ. ಏಕೆಂದರೆ ಲ್ಯಾಂಡರ್ ಇಳಿಯುವುದಕ್ಕೆ ಉದ್ದೇಶಿಸಿರುವ ಸ್ಥಳದಲ್ಲಿ ಸೂರ್ಯೋದಯ ಆಗುವವರೆಗೂ ಕಾಯಬೇಕಿದೆ

ಎಂದು ಇಸ್ರೋ ಇದೆ. ಚಂದ್ರನ ಧ್ರುವಗಳ ಮೇಲೆ ಸೂರ್ಯನು ಉದಯಿಸಿದರೆ ಅದು ನಮಗೆ ರಾತ್ರಿಯ ಸಮಯ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ : ಡಾಕ್ಟರ್‌ ಎಡವಟ್ಟು: ಆಪರೇಷನ್‌ ನಂತರ ಗರ್ಭಿಣಿ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ ವೈದ್ಯರು !

ರಷ್ಯಾದ (Russia) ಲೂನಾ 25 ಮಿಷನ್ ಭಾರತಕ್ಕಿಂತ ಮುಂಚಿತವಾಗಿ ಚಂದ್ರನ ದಕ್ಷಿಣ ಧ್ರುವವನ್ನು ತಲುಪಬೇಕಿತ್ತು, ಆದರೆ ವಿಫಲವಾಯಿತು. ಅದು ಚಂದ್ರನ ಮೇಲೆ ಮೃದುವಾಗಿ ಇಳಿಯಲಿಲ್ಲ,

ಆದರೆ ಚಂದ್ರನ ಅಂಗಳಕ್ಕೆ ಅಪ್ಪಳಿಸಿತು ಎಂದು ವರದಿಯಾಗಿದೆ. ಆದ್ದರಿಂದ, ಭಾರತದ ಚಂದ್ರಯಾನ-3 ಮಿಷನ್ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತವಾಗಲಿದೆ.

ರಶ್ಮಿತಾ ಅನೀಶ್

Exit mobile version