ಫಿಫಾ ವಿಶ್ವಕಪ್ : ಮೊರಾಕೊ ವಿರುದ್ದ ಬೆಲ್ಜಿಯಂಗೆ ಸೋಲು ; ಬ್ರಸೆಲ್ಸ್‌ನಲ್ಲಿ ಹಿಂಸಾಚಾರ!

Doha : ಕತಾರ್‌ನಲ್ಲಿ(Qatar) ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ(Fifa Worldcup 2022) ಅಚ್ಚರಿ ಎಂಬಂತೆ ಬೆಲ್ಜಿಯಂ ವಿರುದ್ದ ಮೊರಾಕ್ಕೊ 2-0 ಗೋಲುಗಳಿಂದ ಗೆಲುವು ಸಾಧಿಸಿದ ನಂತರ,

ಬೆಲ್ಜಿಯಂ ಅಭಿಮಾನಿಗಳು ಬೆಲ್ಜಿಯಂ ರಾಜಧಾನಿ  ಬ್ರಸೆಲ್ಸ್‌ನಲ್ಲಿ ತೀವ್ರ ಹಿಂಸಾಚಾರ(Voilence) ನಡೆಸಿದ್ದಾರೆ.

ಮೊರಾಕ್ಕೊ ತಂಡದ ರೊಮೈನ್ ಸೈಸ್ ಮತ್ತು ಜಕಾರಿಯಾ ಅಬೌಖ್ಲಾಲ್ ಅವರ ಗೋಲುಗಳ ನಂತರ ಮೊರೊಕ್ಕೊ ಬೆಲ್ಜಿಯಂ ವಿರುದ್ಧ 2-0 ಗೋಲುಗಳಿಂದ ಎಫ್ ಗುಂಪಿನ ಪಂದ್ಯದಲ್ಲಿ ಜಯಗಳಿಸಿತು.

ಈ ಸೋಲಿನೊಂದಿಗೆ ಬೆಲ್ಜಿಯಂ ಗುಂಪು ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮೊರಾಕೊ ಮತ್ತು ಕ್ರೊಯೇಷಿಯಾಕ್ಕಿಂತ ಒಂದು ಅಂಕ ಹಿಂದೆ ಬಿದ್ದಿದೆ.

ಹೀಗಾಗಿ ಬೆಲ್ಜಿಯಂ ಅಭಿಮಾನಿಗಳು(Belgium Fans) ರಸ್ತೆಯಲ್ಲಿ ಬೆಂಕಿ ಹಚ್ಚಿದರು ಮತ್ತು ಪೊಲೀಸರ ಮೇಲೆ ಸಣ್ಣ ಪ್ರಮಾಣದ ಕ್ಷಿಪಣಿಗಳನ್ನು ಎಸೆದರು ಎಂದು ವರದಿಯಾಗಿದೆ.

ಗಲಭೆಕೋರರನ್ನು ಚದುರಿಸಲು ಸುಮಾರು 100ಕ್ಕೂ ಹೆಚ್ಚು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. 

ಇದನ್ನೂ ಓದಿ : https://vijayatimes.com/unknown-facts-of-bhimkund/

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೆಲ್ಜಿಯಂ ನಗರದ ಪೊಲೀಸ್‌ ಮುಖ್ಯಸ್ಥರು ತಿಳಿಸಿದ್ದಾರೆ. ಇನ್ನು ಈ ಹಿಂಸಾಚಾರವನ್ನು ಯಾರು ಶುರು ಮಾಡಿದರು,

ಯಾರು ಬೆಂಕಿ ಹಚ್ಚಿದರು ಎಂಬುದು ನಮಗೆ ತಿಳಿದಿಲ್ಲ ಎಂದು ಸ್ಥಳೀಯ ನಿವಾಸಿ ಅಬ್ದೆಲ್ಲಾ ನಡಿ ಹೇಳಿದ್ದು ಸಾಮಾನ್ಯವಾಗಿ, ಒಮ್ಮೆ ಪಂದ್ಯವನ್ನು ಗೆಲ್ಲುವುದು, ಮತ್ತೊಮ್ಮೆ ಸೋಲುವುದು ಸಾಮಾನ್ಯ.

ಇದಕ್ಕೆಲ್ಲಾ ಈ ರೀತಿಯಾಗಿ ಪ್ರತಿಕ್ರಿಯಿಸಬಾರದು ಎಂದಿದ್ದಾರೆ. ಹಿಂಸಾಚಾರದ ಹಿನ್ನಲೆಯಲ್ಲಿ ಹಲವಾರು ಮೆಟ್ರೋ ನಿಲ್ದಾಣಗಳು, ಬಸ್ ಮತ್ತು ಟ್ರಾಮ್ ಮಾರ್ಗಗಳನ್ನು ಮುಚ್ಚಲಾಯಿತು. ಹಿಂಸಾಚಾರಕ್ಕೆ ಕಾರಣವೇನು ಎಂಬುದು ಅಸ್ಪಷ್ಟವಾಗಿದೆ ಮತ್ತು ಅಧಿಕಾರಿಗಳು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇದೇ ರೀತಿಯ ಗಲಭೆಗಳು ನೆದರ್ಲ್ಯಾಂಡ್ಸ್‌ನಲ್ಲಿಯೂ ನಡೆದಿವೆ. ಈ ವೇಳೆ ಬಂದರು ನಗರವಾದ ರೋಟರ್‌ಡ್ಯಾಮ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಂದರು ನಗರವಾದ ರೋಟರ್‌ಡ್ಯಾಮ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ನೆದರ್‌ಲ್ಯಾಂಡ್‌ನ(Netharland) ಪೊಲೀಸರು ತಿಳಿಸಿದ್ದಾರೆ.

https://youtu.be/F91wdGXU0Ic ಕೆಂಗೇರಿ ಮುಖ್ಯ ರಸ್ತಯೇ ಈಗ ಕಸ ಎಸೆಯೋ ಸ್ಥಳ!

500 ಫುಟ್‌ಬಾಲ್ ಅಭಿಮಾನಿಗಳ ಗುಂಪು ಹಿಂಸಾಚಾರ ನಡೆಸಿ, ಪೊಲೀಸರನ್ನು ಪಟಾಕಿ ಮತ್ತು ಗಾಜಿನಿಂದ ಹೊಡೆದರು ಎನ್ನಲಾಗಿದೆ. ಬ್ರಸೆಲ್ಸ್ ಮೇಯರ್ ಫಿಲಿಪ್ ಕ್ಲೋಸ್ ಅವರು, ನಗರ ಕೇಂದ್ರದಿಂದ ದೂರವಿರಲು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಅವರು ಅಭಿಮಾನಿಗಳಲ್ಲ, ಅವರು ಗಲಭೆಕೋರರು ಎಂದು ಹೇಳಿದ್ದಾರೆ.

Exit mobile version