ಆಂಧ್ರಪ್ರದೇಶ : ರೈಲು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ ವಿದ್ಯಾರ್ಥಿ ಸಾವು

Visakhapatnam : ಆಂಧ್ರಪ್ರದೇಶದ ವಿಶಾಖಪಟ್ಟಣಂನ ದುವ್ವಾಡ (Visakhapatnam student dies) ರೈಲು ನಿಲ್ದಾಣದಲ್ಲಿ ಈ ಘಟನೆ ಗುರುವಾರ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ರೈಲಿನಿಂದ ಇಳಿಯಲು ಹೋದಾಗ ಆಯಾತಪ್ಪಿ ರೈಲು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡ ವಿದ್ಯಾರ್ಥಿನಿ ಆ ಜೋರಾಗಿ ಚಿರಾಡಿದ್ದಾಳೆ ತಕ್ಷಣ ರೈಲಿನಲ್ಲಿದ್ದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ಕೂಡಲೇ ನಿಲ್ಲಿಸಿ, ಯುವತಿಯ ರಕ್ಷಣೆಗೆ ಸಹಾಯ ಕೋರಿದ್ದಾರೆ.

ರೈಲ್ವೆ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ವಿದ್ಯಾರ್ಥಿನಿಯನ್ನು (Visakhapatnam student dies) ಹೊರತೆಗೆಯುವಲ್ಲಿ ಯಶಸ್ವಿಯಾದರು, ಯುವತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ವಿದ್ಯಾರ್ಥಿನಿಯ ಸೊಂಟದ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ : https://vijayatimes.com/hardik-patel-vs-jigneshmevani/

ಆದ್ರೆ, ಗಂಭೀರ ಗಾಯಗಳಾದ ಪರಿಣಾಮ, ಯುವತಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

https://youtu.be/gO5O-5rvVaA

ಆಂಧ್ರಪ್ರದೇಶದ ವಿಶಾಖಪಟ್ಟಣಂನ ದುವ್ವಾಡ (Duvvada) ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿರುವ ಬಗ್ಗೆ ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದೆ.

https://fb.watch/hhq97qzdI-/ ಗುಜರಾತ್ ನಲ್ಲಿ ಅಧಿಕಾರ ಗದ್ದುಗೇರಿದ ಬಿಜೆಪಿ . ಹಿಮಾಚಲದಲ್ಲಿ “ಕೈ”ಗೆ ಬಹುಮತ.

ವಿದ್ಯಾರ್ಥಿನಿ ಗುಂಟೂರು ರಾಯಘಡ ಪ್ಯಾಸೆಂಜರ್‌ನಿಂದ ಕೆಳಗೆ ಇಳಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿ ಶಶಿಕಲಾ ಅವರನ್ನು ರೈಲ್ವೆ ಸಿಬ್ಬಂದಿ ಕಿಮ್ಸ್ (kims) ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು.

ಬುಧವಾರದಿಂದ ಗುರುವಾರದವರೆಗು ಐಸಿಯುನಲ್ಲಿ(ICU) ತುರ್ತು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಗುರುವಾರ ಡಿಸೆಂಬರ್ 8 ರಂದು ಕೊನೆಯುಸಿರೆಳೆದಿದ್ದಾರೆ

Exit mobile version