ಕೂದಲಿನ ಬೆಳವಣಿಗೆಯ ಸಮಸ್ಯೆ ಇದೀಯಾ? ಹಾಗಾದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ!

ಕೂದಲಿನ ಬೆಳವಣಿಗೆಗೆ ವಿಟಮಿನ್‌ಗಳು (Vitamins) ಪ್ರಮುಖವಾದ ಅಂಶವಾಗಿದ್ದು, ಅವು ನಮ್ಮ ನೆತ್ತಿಯನ್ನು ಪೋಷಿಸಲು, ಕೂದಲಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೂದಲ ಕಿರುಚೀಲಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಕೂದಲಿನ ಬೆಳವಣಿಗೆಯನ್ನು (Hair Growth) ಹೆಚ್ಚಿಸಲು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಹಾಗಾಗಿ ಕೂದಲಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೆಲವು ಜೀವಸತ್ವಗಳ ಮಾಹಿತಿ ಇಲ್ಲಿದೆ.

ವಿಟಮಿನ್ ಕೆ:
ವಿಟಮಿನ್ ಕೆ (Vitamin K) ನೆತ್ತಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಎಲೆಕೋಸು, ಮೊಟ್ಟೆ, ಹಾಲು, ಪಾಲಕ್, ಕೋಸುಗಡ್ಡೆ (Cabbage, Eggs, Milk, Spinach, Broccoli) ಮತ್ತು ಕೇಲ್ ಮುಂತಾದ ಆಹಾರಗಳಲ್ಲಿ ವಿಟಮಿನ್ ಕೆ ಹೆಚ್ಚಾಗಿರೋದ್ರಿಂದ ಇವುಗಳನ್ನು ಸೇವಿಸಿದರೆ ಉತ್ತಮ.

ವಿಟಮಿನ್ ಡಿ:
ವಿಟಮಿನ್ ಡಿ (Vitamin D) ಯಲ್ಲಿ ಸಮೃದ್ಧವಾಗಿರುವ ಆಹಾರಗಳಾದ ಬಲವರ್ಧಿತ ಹಾಲು, ಧಾನ್ಯಗಳು ಮತ್ತು ಕೊಬ್ಬಿನ ಮೀನುಗಳು ಕೂದಲ ಕಿರುಚೀಲಗಳನ್ನು ಉತ್ತೇಜಿಸುವ ಮೂಲಕ ನೆತ್ತಿಯನ್ನು ಪೋಷಿಸುತ್ತವೆ. ಈ ಮೂಲಕ ಕೂದಲಿನ ಬೆಳವಣಿಗೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಬಿ:
ವಿಟಮಿನ್ ಬಿ (Vitamin B) ಕೂದಲಿನ ಬೆಳವಣಿಗೆಗೆ ಉತ್ತಮವಾಗಿದ್ದು, ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಡೈರಿ, ಸಸ್ಯ ಆಧಾರಿತ ಹಾಲು, ಅಣಬೆಗಳು, ಚಿಕನ್, ದ್ವಿದಳ ಧಾನ್ಯಗಳು (Mushrooms, chicken, legumes) ಮತ್ತು ಕ್ರೂಸಿಫೆರಸ್ ತರಕಾರಿಗಳು ವಿಟಮಿನ್ ಬಿ ಯ ಉತ್ತಮ ಮೂಲಗಳಾಗಿವೆ.

ವಿಟಮಿನ್ ಎ:
ವಿಟಮಿನ್ ಎ (Vitamin A) ಕೊಬ್ಬಿನಲ್ಲಿ ಕರಗುವ ಸೂಕ್ಷ್ಮ ಪೋಷಕಾಂಶವಾಗಿದ್ದು, ಕೂದಲಿನ ಬೆಳವಣಿಗೆಗೆ ಪ್ರಮುಖವಾಗಿದೆ. ಮೊಟ್ಟೆ, ಸೀಗಡಿ, ಮೀನು, ಸಿಹಿ ಗೆಣಸು, ಕ್ಯಾರೆಟ್, (Egg, shrimp, fish, sweet potato, carrot) ಕುಂಬಳಕಾಯಿ, ಪಾಲಕ್ ಮತ್ತು ಮಾವಿನಹಣ್ಣುಗಳಂತಹ ಆಹಾರಗಳು ವಿಟಮಿನ್ ಎಯ ಅತ್ಯುತ್ತಮ ಮೂಲಗಳಾಗಿವೆ.

ವಿಟಮಿನ್ ಇ:
ಇನ್ನು ವಿಟಮಿನ್ ಇ (Vitamin E) ನಿಮ್ಮ ಕೂದಲಿಗೆ ಮುಖ್ಯವಾದ ಅಂಶವಾಗಿದ್ದು, ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ನೆತ್ತಿಯನ್ನು ಪೋಷಿಸುತ್ತದೆ, ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಸ್ಯಜನ್ಯ ಎಣ್ಣೆಗಳು, ಎಲೆಗಳ ಹಸಿರು ತರಕಾರಿಗಳು, ಧಾನ್ಯಗಳು ಮತ್ತು ಬೀಜಗಳಲ್ಲಿ ವಿಟಮಿನ್ ಇ ತುಂಬಿರುತ್ತದೆ.

ಹಾಗಾಗಿ ಇನ್ನುಮುಂದೆ ನಿಮ್ಮ ಕೂದಲ ಪೋಷಣೆಗೆ ಹಾಗೂ ಉತ್ತಮವಾದ ಕೇಶರಾಶಿಗೆ ಈ ವಿಟಮಿನ್ಸ್ ಅಂಶವಿರುವ ತರಕಾರಿಗಳನ್ನು ಸೇವಿಸಿ ಕೂದಲ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ…

ಶ್ರೀಕಾಂತ್ ಕೆ

Exit mobile version