ಈ ಅಪ್ಲಿಕೇಷನ್ ಬಳಸುತ್ತಿದ್ದರೆ ಹುಷಾರ್: ಗೂಗಲ್ ಪೇ ಬಳಕೆದಾರರಿಗೆ ಎಚ್ಚರಿಕೆ

ಇಂದು ಸೈಬರ್ (Cyber) ಭದ್ರತೆ ಎಷ್ಟೇ ಬಲಿಷ್ಠವಾಗಿದ್ದರೂ ಬಳಕೆದಾರರು ಮಾಡುವ ಸಣ್ಣಪುಟ್ಟ ತಪ್ಪುಗಳು (Warning for Google Pay users) ಅಪರಾಧಿಗಳಿಗೆ ವರದಾನವಾಗಿ

ಪರಿಣಮಿಸುತ್ತದೆ. ಈ ಹಿನ್ನಲೆಯಲ್ಲಿ ವಿಶ್ವದ ಅತ್ಯುತ್ತಮ UPI ಆ್ಯಪ್​ಗಳಲ್ಲಿ ಒಂದಾದ ಗೂಗಲ್ ಪೇ (Google Pay) ತನ್ನ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ.

ದೇಶದಾದ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ (Applications) ಯುಪಿಐ ಪಾವತಿಯು ಒಂದಾಗಿದ್ದು, ಭಾರತದಲ್ಲಿನ ಷೇರುಮಾರುಕಟ್ಟೆಗೆ ಸಂಬಂಧಿಸಿದಂತೆ ಈ ಅಪ್ಲಿಕೇಶನ್ ಟಾಪ್

ಫೈವ್ ಯುಪಿಐ ಐದನೇ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಎಲ್ಲರೂ ಫೋನ್ ಸಂಖ್ಯೆಯನ್ನು ನಮೋದಿಸಿ ಕ್ಯೂಆರ್ ಕೋಡ್ ಸ್ಕ್ಯಾನ್ (QR Code Scan) ಮಾಡಿ ಇದರ ನಡುವೆ

ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ.ಇದರ ಮೂಲಕ ಸುಲಭವಾಗಿ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಸೈಬರ್ ಭದ್ರತೆ ಎಷ್ಟೇ ಬಲಿಷ್ಠವಾಗಿದ್ದರೂ ಬಳಕೆದಾರರು ಮಾಡುವ ಸಣ್ಣಪುಟ್ಟ

ತಪ್ಪುಗಳು ಅಪರಾಧಿಗಳಿಗೆ ವರದಾನವಾಗಿ ಪರಿಣಮಿಸುತ್ತದೆ. ಹಾಗಾಗಿ ವಿಶ್ವದ ಅತ್ಯುತ್ತಮ UPI ಆ್ಯಪ್​ಗಳಲ್ಲಿ ಒಂದಾದ ಗೂಗಲ್ ಪೇ ತನ್ನ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ.

ಗೂಗಲ್ ಪೇ ಯುಪಿಐ ಪಾವತಿ ಸಮಯದಲ್ಲಿ ಕೆಲವು ಆ್ಯಪ್‌ಗಳನ್ನು ಬಳಸಬಾರದು ಎಂದು ಹೇಳಿದೆ. ಈ ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿದ್ದರೆ, ಬ್ಯಾಂಕ್ (Bank) ಖಾತೆಗಳನ್ನು ಸುಲಭವಾಗಿ ಹ್ಯಾಕ್

(Hack) ಮಾಡುವ ಅಪಾಯವಿದ್ದು, ವಹಿವಾಟುಗಳಿಗಾಗಿ ಗೂಗಲ್ ಪೇ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಅಪ್ಲಿಕೇಶನ್‌ಗಳಲ್ಲಿ UPI ಒಂದಾಗಿದ್ದು ಅದಕ್ಕಾಗಿಯೇ ಇದು ಜನಪ್ರಿಯವಾಗಿದೆ.

ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವಂಚನೆಯನ್ನು ತಡೆಯುವ ಕೆಲಸ ಮಾಡುತ್ತಿದೆ. ನೈಜ ಸಮಯದಲ್ಲಿ ಮೋಸದ ವಹಿವಾಟುಗಳನ್ನು

ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ತಮ್ಮ ಫೋನ್‌ಗಳಲ್ಲಿ (Phone) ಸ್ಕ್ರೀನ್ ಹಂಚಿಕೆ (ಸ್ಕ್ರೀನ್ ಶೇರಿಂಗ್) ಅಪ್ಲಿಕೇಶನ್ ಅನ್ನು ಬಳಸುವಾಗ ಗೂಗಲ್ ಪೇ ಬಳಸಬಾರದು ಎಂದು ಎಚ್ಚರಿಕೆ

ಸಂದೇಶವನ್ನು (Warning for Google Pay users) ಕಳುಹಿಸಿದೆ.

ಗೂಗಲ್ ಪೇ ಅನ್ನು ಬಳಸುವಾಗ ನೀವು ಯಾವುದೇ ಸಂದರ್ಭಗಳಲ್ಲಿ AnyDesk, TeamViewer ನಂತಹ ಯಾವುದೇ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್ ಅನ್ನು ಬಳಸಬಾರದು ಎಂದು ಎಚ್ಚರಿಕೆ ಸಂದೇಶ

ತಿಳಿಸಿದೆ. ಕಛೇರಿ ಕೆಲಸದ ಸಂಧರ್ಭದಲ್ಲಿ ರಿಮೋರ್ಟ್ ಕಂಟ್ರೊಲ್ (Remote Control) ತೆಗೆದುಕೊಳ್ಳಲು ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳ ಉಪಯುಕ್ತ ವಾಗುವುದಲ್ಲದೆ ಬ್ಯಾಂಕಿಂಗ್ ವಹಿವಾಟು

ಮಾಡುವಾಗ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆ, ಇದ್ದು ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಗೂಗಲ್ ಮೊದಲೆತಿಸಿದ್ದು, ಆದರೆ ಇನ್ನೂ ಕೆಲವು ಕಂಪನಿಗಳು ಇದರಿಂದ ಬಳಕೆದಾರರನ್ನು

ಮೋಸಗೊಳಿಸಬಹುದು.

ಈಗಾಗಲೇ ಈ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ (Download) ಮಾಡಿದ್ದರೆ, ಗೂಗಲ್ ಪೇ ಅನ್ನು ಬಳಸುವ ಮೊದಲು ಅವುಗಳನ್ನು ಕ್ಲೋಸ್ ಮಾಡಲಾಗಿದೆಯೆ ಎಂದು

ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ಗೂಗಲ್ ಪೇ ಯಾವುದೇ ಕಾರಣಕ್ಕೂ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third Party Application) ಅನ್ನು ಡೌನ್‌ಲೋಡ್ ಮಾಡಲು ಅಥವಾ ಇನ್‌ಸ್ಟಾಲ್

ಮಾಡಲು ನಿಮ್ಮನ್ನು ಕೇಳುವುದಿಲ್ಲ.

ಹಾಗಾಗಿ ಗೂಗಲ್ ಪೇನ ಪ್ರತಿನಿಧಿಯಾಗಿರುವ ಯಾರಾದರೂ ನಿಮ್ಮನ್ನು ಫೋನ್ ಮೂಲಕ ಸಂಪರ್ಕಿಸಲು ಅಥವಾ ನೇರವಾಗಿ ಈ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು

ಸಲಹೆ ತಕ್ಷಣವೇ ಅವುಗಳನ್ನು ಅನ್‌ಇನ್‌ಸ್ಟಾಲ್ (Uninstall) ಮಾಡಿ,” ಎಂದು ಗೂಗಲ್ ಪೇ ಹೇಳಿದೆ. ಆದ್ದರಿಂದ ಸಾಮಾನ್ಯರಿಗೆ ಮತ್ತು ಬುದ್ದಿ ಶಾಲಿಗಳಿಗೆ ಸಾಮಾಜಿಕ ಜಾಲತಾಣ ಬಳಸುವುದರಲ್ಲಿ

ಮತ್ತು ವ್ಯವಹಾರ ಮಾಡಬೇಕಾದರೆ ನಮ್ಮ ಜಾಗರೂಕತೆಯಲ್ಲಿ ಇರಬೇಕು.

ಇದನ್ನು ಓದಿ: ಬೆಂಗಳೂರು ಕಂಬಳ ಊಳಿಗಮಾನ್ಯ ಪದ್ಧತಿಯ ಮುಂದುವರಿಕೆಯಂತೆ ಎದ್ದು ಕಾಣುತ್ತದೆ – ನಟ ಚೇತನ್ ಟೀಕೆ

Exit mobile version