ಅನ್ಯ ಆಹಾರಗಳ ಮೇಲೆ ‘ಹಲಾಲ್‌’ ಸ್ಟಿಕ್ಕರ್‌ ಯಾಕಿರುತ್ತೆ ; ‘ಹಲಾಲ್‌’ ಮಾಂಸಕ್ಕೆ ಓ.ಕೆ, ಬೇರೆದ್ದಕ್ಕೆ ಯಾಕೆ?

halal cut

‘ಹಲಾಲ್‌’(Halal) ಮಾಂಸಕ್ಕೆ ಓ.ಕೆ, ಬೇರೆ ಆಹಾರಕ್ಕೆ ಯಾಕೆ? ಬೇರೆ ಆಹಾರಗಳ ಮೇಲೆ ‘ಹಲಾಲ್‌’ ಸ್ಟಿಕ್ಕರ್‌(Halal Sticker) ಯಾಕಿರುತ್ತೆ? `ಹಲಾಲ್‌’ ಮುಸ್ಲಿಂ(Muslim) ಆರ್ಥಿಕ ಏಕಾಧಿಪತ್ಯಕ್ಕೆ ಷಡ್ಯಂತ್ರವಾ? ಹೌದು, ಇಂಥಾ ನೇರವಾದ ಪ್ರಶ್ನೆ ಈಗ ಜನರನ್ನ ಕಾಡ್ತಾ ಇದೆ. ‘ಹಲಾಲ್‌’ ಮಾಂಸಗಳಿಗೆ ಓಕೆ. ಬೇರೆ ಆಹಾರಗಳಿಗೆ ಯಾಕೆ ‘ಹಲಾಲ್‌’ ಸ್ಟಿಕ್ಕರ್‌ ಹಾಕ್ತಿದ್ದಾರೆ? ಇದರ ಹಿಂದೆ ಏನಾದ್ರೂ ಮಸಲತ್ತು ಇದೆಯಾ?

ಇದು ಮುಸ್ಲಿಮರು ದೇಶದಲ್ಲಿ ಆರ್ಥಿಕ ಏಕಾಧಿಪತ್ಯ ಸಾಧಿಸಲು ಮಾಡುತ್ತಿರುವ ಷಡ್ಯಂತ್ರವಾ? ಇಂಥಾ ಹತ್ತಾರು ಪ್ರಶ್ನೆಗಳು ಹಲಾಲ್‌ ವಿವಾದದ ಬಳಿಕ ಹುಟ್ಟಿಕೊಂಡಿವೆ. ಅದ್ರಲ್ಲೂ ದಿ ಹಿಮಾಲಯ ಔಷಧಿ ಕಂಪನಿ(The Himalaya Pharmacy) ತನ್ನೆಲ್ಲಾ ಉತ್ಪನ್ನಗಳಲ್ಲಿ ಹಲಾಲ್ ನಿಯಮಗಳನ್ನು ಪಾಲಿಸಿದೆ ಅಂತ ಹೇಳುವ ಪ್ರಮಾಣಪತ್ರವನ್ನು ಹಾಕುತ್ತೆ ಅನ್ನೋ ಪೋಸ್ಟ್‌ ವೈರಲ್(Viral) ಆದ ಕಾರಣ, ಇದು ಭಾರೀ ಚರ್ಚೆಗೊಳಗಾಗಿರುವ ವಿಷಯವಾಗಿದೆ.

ಹಾಗಾದ್ರೆ ಈ ಹಲಾಲ್‌ ಅನ್ನೋ ಸ್ಟಿಕ್ಕರ್ ಹಿಂದಿರುವ ರಹಸ್ಯವೇನು ಅನ್ನೋದನ್ನ ತಿಳಿಯೋಣ. ವಿವಾದಕ್ಕೆ ಅಥವಾ ಅನುಮಾನಕ್ಕೆ ಗುರಿಮಾಡಿರುವ ಯಾವುದೇ ವಿಚಾರದ ಬಗ್ಗೆ ಸರಿಯಾಗಿ ತಿಳಿದು, ಅಧ್ಯಯನ ಮಾಡಿ ಜನರಿಗೆ ತಿಳಿಸಿ ಅವರಲ್ಲಿನ ತಪ್ಪು ಅಭಿಪ್ರಾಯವನ್ನು ಹೊಗಲಾಡಿಸುವುದು ಮಾಧ್ಯಮದ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಯಾವುದೇ ಪೂರ್ವಾಗ್ರಹ ಇಲ್ಲದೆ ಒಂದು ವಿಷಯದ ಬಗ್ಗೆ ಜನರಿಗೆ ಸತ್ಯ ತಿಳಿಸುವ ಪ್ರಯತ್ನವನ್ನು ವಿಜಯಟೈಮ್ಸ್‌(VijayaTimes) ಮಾಡುತ್ತಿದೆ.

‘ಹಲಾಲ್‌’ ಸ್ಟಿಕ್ಕರ್‌ ಹಿಂದಿನ ರಹಸ್ಯ ಏನು? ‘ಹಲಾಲ್‌’ ಅಂದ್ರೆ ನಿಷಿದ್ಧವಲ್ಲದ ಎಂದರ್ಥ. ಹಿಂದೂ ಪದ್ಧತಿಯಲ್ಲಿ ಹೇಗೆ ಕೆಲವೊಂದು ಆಚರಣೆಗಳು, ಆಹಾರ ಸೇವನೆಗಳು ನಿಷಿದ್ಧವೊ ಅದೇ ರೀತಿ ಇಸ್ಲಾಂನಲ್ಲೂ ಕೆಲ ಆಹಾರ ಸೇವನೆ ನಿಷೇಧಕ್ಕೋಳಗಾಗಿವೆ. ಯಾವ ಆಹಾರ ಸೇವನೆಗೆ ಯೋಗ್ಯವೋ, ನಿಷೇಧಿಸಲ್ಪಟ್ಟಿಲ್ಲವೋ ಅದನ್ನು ಹಲಾಲ್‌ ಅಂತ ಹೇಳಿ ಅದಕ್ಕೆ ಸ್ಟಿಕ್ಕರ್ ಹಾಕಲಾಗುತ್ತೆ. ಹಾಗಾದ್ರೆ ಯಾವ ಆಹಾರಕ್ಕೆಲ್ಲಾ ಹಲಾಲ್‌ ಅಂತ ಸ್ಟಿಕ್ಕರ್ ಹಾಕ್ತಾರೆ? ಅಕ್ಕಿ, ಪಾಸ್ತಾ ಹಲಾಲ್‌ ಆಹಾರ. ಅದೇ ಮದ್ಯ, ಹಂದಿಯ ಕೊಬ್ಬು ಮಿಕ್ಸ್‌ ಮಾಡಿ ತಯಾರಿಸಿದ ಬೇಳೆ ಕಾಳುಯುಕ್ತ ಆಹಾರ ನಿಷಿದ್ಧ ಅಂದ್ರೆ ಅದು ಹಲಾಲ್ ಅಲ್ಲ.

ಇನ್ನು ವೆನಿಲ್ಲಾಯುಕ್ತ ಆಹಾರವನ್ನು ನಿಷೇಧಿಸಲಾಗಿದೆ.
ಯಾವ ತರಕಾರಿ ಹಲಾಲ್ ಅಂತ ನೋಡೋದಾದ್ರೆ, ಎಲ್ಲಾ ಹಣ್ಣು, ತರಕಾರಿಗಳು ಹಲಾಲ್‌. ನೈಸರ್ಗಿಕವಾಗಿ ತಯಾರಿಸಲಾಗಿರುವ ಬೆಣ್ಣೆ, ಖಾದ್ಯ ಎಣ್ಣೆ ಮತ್ತು ನೀರಿನಿಂದ ತಯಾರಿಸಲಾಗಿರುವ ಹಣ್ಣು ತರಕಾರಿಯ ಖಾದ್ಯಗಳು ಹಲಾಲ್‌. ಎಲ್ಲಾ ಹಣ್ಣಿನ ರಸಗಳು ಹಲಾಲ್‌. ಆದ್ರೆ ಮದ್ಯ, ಹಂದಿ ಅಥವಾ ಇಸ್ಲಾಂ ಪದ್ಧತಿಯಾಗಿರುವ ಝಬಿಹಾ ಪದ್ಧತಿಯಲ್ಲಿ ವಧಿಸದ ಪ್ರಾಣಿಯ ಕೊಬ್ಬು, ಜೆಲೆಟಿನ್‌, ಕೊಬ್ಬಿರೋ ಮಾಂಸದ ತುಂಡುಗಳು ಇರುವ ಮತ್ತು ಅದರೊಂದಿಗೆ ತಯಾರಿಸಿರುವ ಹಣ್ಣು ತರಕಾರಿಯ ಆಹಾರಗಳು ನಿಷಿದ್ಧ. ಅದು ತಿನ್ನಲು ಯೋಗ್ಯವಲ್ಲ.

ಮುಖ್ಯವಾಗಿ ಹೇಳೋದಾದ್ರೆ ಹಂದಿಯ ಮಾಂಸ, ಕೊಬ್ಬು ಹಾಗೂ ಹಂದಿಯ ಇತರ ಉತ್ಪನ್ನಗಳಿಂದ ತಯಾರಿಸಲಾಗಿರುವ ಯಾವುದೇ ವಸ್ತು, ಆಹಾರ ವಸ್ತುಗಳು ಮುಸ್ಲಿಂರಿಗೆ ನಿಷಿದ್ಧ. ಇನ್ನು ಇಸ್ಲಾಂ ಪದ್ಧತಿಯಾಗಿರುವ ಝಬಿಹಾದ ಮೂಲಕ ಯಾವ ಪ್ರಾಣಿ, ಪಕ್ಷಿಯನ್ನು ಕೊಲ್ಲಲ್ವೋ ಅಂಥಾ ಮಾಂಸವಾಗಲಿ, ಮಾಂಸದ ಉಪಉತ್ಪನ್ನವಾಗಲಿ ಹಲಾಲ್‌ ಅಲ್ಲ. ಇನ್ನು ಯಾವುದೇ ಸ್ವರೂಪ ಮದ್ಯ ಹಾಗೂ ಮದ್ಯವನ್ನೊಳಗೊಂಡ ಅಥವಾ ಮದ್ಯ ಹಾಕಿರುವ ಆಹಾರ ಪದಾರ್ಥಗಳು, ಉತ್ಪನ್ನಗಳು ಹಲಾಲ್ ಅಲ್ಲ. ಅವುಗಳ ಬಳಕೆ ನಿಷೇಧಲಾಗಿದೆ.

ಇನ್ನು ನೈಸರ್ಗಿಕವಲ್ಲದ ರೂಪದಲ್ಲಿ ತಯಾರಿಸಲಾಗಿರುವ ಹಾಲಿನ ಉತ್ಪನ್ನಗಳು ಮತ್ತು ಅವುಗಳಿಂದ ತಯಾರಿಸಲಾಗುವ ಆಹಾರ ಪದಾರ್ಥಗಳು ಮತ್ತು ಇತರೆ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ.
ಒಟ್ಟಾರೆಯಾಗಿ ಹೇಳುವುದಿದ್ರೆ ಹೇಗೆ ನಾವು ಬೆಳ್ಳುಳ್ಳಿ, ಈರುಳ್ಳಿ ತಿನ್ನದ ಜೈನರ ಆಹಾರವನ್ನು ಪ್ರತ್ಯೇಕಿಸುತ್ತೇವೆಯೋ. ಅಥವಾ ಆಹಾರ ಪದಾರ್ಥದ ಪೊಟ್ಟಣದ ಮೇಲೆ ಹಸಿರು ಸ್ಟಿಕ್ಕರ್ ಇದ್ರೆ ಪ್ಯೂರ್‌ ಸಸ್ಯಾಹಾರಿ ಹಾಗೂ ಕೆಂಪು ಸ್ಟಿಕ್ಕರ್ ಇದ್ರೆ ಮಾಂಸಹಾರಿ ಪದಾರ್ಥ ಅಂತ ನಿರ್ಧರಿಸಿ ಅದನ್ನ ಖರೀದಿಸ್ತೀವೋ ಅದೇ ರೀತಿ ಮುಸ್ಲಿಂರು ಈ ನಿಷೇಧ ಆಗಿರುವ ಮತ್ತು ನಿಷೇಧವಲ್ಲದ ಅಂದ್ರೆ ಹಲಾಲ್‌ ಅಂತ ಸ್ಟಿಕ್ಕರ್ ಇರುವ ಆಹಾರ ಪದಾರ್ಥವನ್ನು ಯಾವುದೇ ಹಿಂಜರಿಕೆ ಇಲ್ಲದೆ ಖರೀದಿಸ್ತಾರೆ ಅಷ್ಟೇ.

ಅತ್ಯಂತ ಸರಳವಾಗಿ ಹೇಳೋದಾದ್ರೆ ಇದೊಂದು ಆಹಾರ ಪದ್ಧತಿಯಷ್ಟೇ. ಅವರವರ ಸಂಸ್ಕೃತಿ, ಸಂಸ್ಕಾರಕ್ಕೆ ತಕ್ಕ ಹಾಗೆ ಅವರವರು ತಮ್ಮ ಆಹಾರವನ್ನು ಆಯ್ದುಕೊಳ್ಳುವ ಎಲ್ಲಾ ಹಕ್ಕು ಪ್ರತಿಯೊಬ್ಬ ಜೀವಿಗೂ ಇದೆ. ಹಿಂದೂಗಳು ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು, ಮುಸ್ಲಿಂರು ಹೀಗೆ ಪ್ರತಿ ಧರ್ಮದವರು ಅವರದ್ದೇ ರೀತಿಯ ಆಹಾರ ಕ್ರಮಗಳನ್ನು ಹೊಂದಿದ್ದಾರೆ. ಇದರಲ್ಲಿ ರಾಜಕೀಯ ಮಾಡ್ತಿರೋದು ನಿಜವಾಗ್ಲೂ ಖೇದಕರ ವಿಚಾರ.

Exit mobile version