ಸಿನಿಪ್ರಿಯರ ಅಚ್ಚುಮೆಚ್ಚಿನ ‘PVR’ ಪೂರ್ಣ ಹೆಸರು ಏನು ಗೊತ್ತಾ? ಇಲ್ಲಿದೆ ಮಾಹಿತಿ

PVR

ಪಿವಿಆರ್(PVR) ಎಂದರೆ ಸಿನಿಮಾ(Cinema) ವೀಕ್ಷಿಸುವ ಚಿತ್ರಮಂದಿರ ತಾಣ ಎಂಬುದನ್ನು ಹೊರತುಪಡಿಸಿದರೆ ಅದರ ಸಂಪೂರ್ಣ ಅರ್ಥ ಹಾಗೂ ಈ ಹೆಸರು ಯಾಕೆ ಬಂದಿದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.

ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಅಚ್ಚುಮೆಚ್ಚು ಈ ಪಿವಿಆರ್. ವೀಕೆಂಡ್ ಬಂತು ಎಂದರೆ ಸಿನಿಪ್ರಿಯರಿಗೆ ಮೊದಲು ನೆನಪಾಗೋದೇ ಪಿವಿಆರ್ ಸಿನಿಮಾಸ್(PVR Cinemas). ಇದರ ಪೂರ್ಣ ಹೆಸರು ಪ್ರಿಯ ವಿಲೇಜ್ ರೋಡ್ ಶೋ(Priya Village Roadshow) ಲಿಮಿಟೆಡ್, ಇದು ಭಾರತದ ಪ್ರಖ್ಯಾತ ಸಿನಿಮಂದಿರಗಳಲ್ಲಿ ಒಂದು.

ಪಿವಿಆರ್‌ನ ಪ್ರಧಾನ ಕಛೇರಿಯು ಹರಿಯಾಣದ(Haryana) ಗುರ್‌ಗಾಂವ್‌ನಲ್ಲಿದೆ(Gurugau). 1997 ರಲ್ಲಿ ನವದೆಹಲಿಯ(NewDelhi) ಸಾಕೇತ್‌ನಲ್ಲಿ ಮೊದಲ ಮಲ್ಟಿಪ್ಲೆಕ್ಸ್(Multiplex) ಸಿನಿಮಾ ಥಿಯೇಟರ್‌ನ್ನು ನಿರ್ಮಾಣ ಮಾಡುವ ಮೂಲಕ ದೇಶದಲ್ಲಿ ಮಲ್ಟಿಪ್ಲೆಕ್ಸ್‌ ಸಿನಿಮಾ ಥಿಯೇಟರ್‌ಗಳ ಕ್ರಾಂತಿಯನ್ನು ಪ್ರಾರಂಭಿಸಿದ್ದು, ಇದೇ ಪಿವಿಆರ್‌. ಈ ಥಿಯೇಟರ್‌ಗಳು ಎಲ್ಲರಿಗೂ ಅಚ್ಚುಮೆಚ್ಚಾಗಲು ಕಾರಣವೇನು ಎಂದ್ರೆ ಅಲ್ಲಿನ ಉತ್ತಮ ಗುಣಮಟ್ಟದ ಕಂಫರ್ಟ್ ಎನಿಸುವ ವಾತಾವರಣ, ನವೀಕರಣಗೊಂಡ ತಾಂತ್ರಿಕ ವ್ಯವಸ್ಥೆಗಳು, ಬೆಸ್ಟ್ ಎನಿಸುವಂತ ಸೇವಾ ವ್ಯವಸ್ಥೆ.


ಇದರ ಇತಿಹಾಸದ ಬಗ್ಗೆ ನೋಡುವುದಾದರೆ, ದೆಹಲಿಯ ವಸಂತ್‌ ವಿಹಾರ್‌ನಲ್ಲಿ ಮೊದಲು ಪ್ರಿಯಾ ಸಿನಿಮಾಸ್‌ ಎಂಬ ಹೆಸರಿನಲ್ಲಿದ್ದ ಕಂಪನಿಯನ್ನು 1978 ರಲ್ಲಿ ಅಜಯ್‌ ಬಿಜ್ಲಿಯವರು ಖರೀದಿಸಿದರು. ಇನ್ನು ಅಜಯ್‌ ಬಿಜ್ಲಿಯವರು ಭಾರತದ ಪ್ರಭಾವಶಾಲಿ ಉದ್ಯಮಿಗಳಲ್ಲಿ ಒಬ್ಬರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲದ ವಿಷಯ. 1988 ರಲ್ಲಿ ಬಿಜ್ಲಿಯವರು ವ್ಯವಹಾರ ನಿರ್ವಹಣೆಯನ್ನು ಸ್ವತಃ ಕೈಗೆತ್ತಿಕೊಂಡ ಬಳಿಕ ಮತ್ತಷ್ಟು ಯಶಸ್ಸು ಕಂಡರು. ಈ ಯಶಸ್ಸಿನಿಂದ ಪ್ರೆರೇಪಿತರಾಗಿ ಪಿವಿಆರ್‌ ಸಿನಿಮಾ ಸ್ಥಾಪನೆ ಮಾಡಿದರು.

ಈ ಕಂಪನಿಯು 1995 ರಲ್ಲಿ 60:40 ಅನುಪಾತದೊಂದಿಗೆ ಪ್ರಿಯಾ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಲೇಜ್ ರೋಡ್‌ಶೋ ಲಿಮಿಟೆಡ್ ನಡುವೆ ಜಂಟಿ ಉದ್ಯಮ ಒಪ್ಪಂದವನ್ನು ಮಾಡಿಕೊಂಡಿತು. ಪಿವಿಆರ್‌ ಸಿನಿಮಾಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಬಿಜ್ಲಿ ಇದ್ದರೆ, ಬಿಜ್ಲಿ ಅವರ ಸಹೋದರ ಸಂಜೀವ್ ಕುಮಾರ್ ಬಿಜ್ಲಿ ಪಿವಿಆರ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯು ಪಿವಿಆರ್‌ ಅಡಿಯಲ್ಲಿ ಪ್ರೊ-ಆಕ್ಟಿವ್ ಸಿಎಸ್‌ಆರ್‌ ವಿಂಗ್ ಅನ್ನು ಸಹ ನಿರ್ವಹಿಸುತ್ತದೆ. ಮೊದಲ ಪಿವಿಆರ್‌ ಗೋಲ್ಡ್ ಸ್ಕ್ರೀನ್ ಅನ್ನು ಬೆಂಗಳೂರಿನ ಫೋರಂ ಮಾಲ್‌ನಲ್ಲಿ ಸ್ಥಾಪಿಸಲಾಗಿದೆ.

ಪಿವಿಆರ್‌ ಗೋಲ್ಡ್ ಸ್ಕ್ರೀನ್ : ಪಿವಿಆರ್‌ನ ಮೊದಲ ಗೋಲ್ಡ್ ಸ್ಕ್ರೀನ್ ಅನ್ನು 2007 ರಲ್ಲಿ ಇಂದೋರ್‌ನಲ್ಲಿ ಪ್ರಾರಂಭಿಸಲಾಯಿತು.
ಪಿವಿಆರ್‌ ಸೂಪರ್‌ಪ್ಲೆಕ್ಸ್ : 2014 ರಲ್ಲಿ ಪಿವಿಆರ್‌ ಸಿನಿಮಾಸ್ ನೋಯ್ಡಾದಲ್ಲಿ ಸೂಪರ್‌ಪ್ಲೆಕ್ಸ್ ಫಾರ್ಮಾಟ್‌ನ್ನು ಪ್ರಾರಂಭಿಸಿರು. ಚಿತ್ರಮಂದಿರವು ಐಮ್ಯಾಕ್ಸ್‌ , 4ಡಿಎಕ್ಸ್‌, ಗೋಲ್ಡ್ ಕ್ಲಾಸ್, ಪ್ಲೇಹೌಸ್ ಮತ್ತು ಮುಖ್ಯವಾಹಿನಿಯ ಆಡಿಟೋರಿಯಂಗಳೊಂದಿಗೆ 15 ಸ್ಕ್ರೀನ್‌ಗಳನ್ನು ಹೊಂದಿದೆ. ಪಿವಿಆರ್ ಸಿನಿಮಾಸ್ ಈ ಹೊಸ ಯೋಜನೆಗೆ ರೂ. 48 ಕೋಟಿ ಹೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ.


ಪಿವಿಆರ್‌ ಪ್ಲೇಹೌಸ್ : ಪಿವಿಆರ್‌ ಪ್ಲೇಹೌಸ್ ಮಕ್ಕಳ ಚಲನಚಿತ್ರಗಳು, ಅನಿಮೇಟೆಡ್ ವಿಷಯವನ್ನು ಪ್ರದರ್ಶಿಸುವ ವಿಶೇಷ 49 ಆಸನಗಳ ಥಿಯೇಟರ್‌ ಆಗಿದೆ. ಕಸ್ಟಮೈಸ್ ಮಾಡಿದ 3D ಗ್ಲಾಸ್‌ಗಳ ಜೊತೆಗೆ, ಇದು ಬೀನ್ ಬ್ಯಾಗ್‌ಗಳು, ರಬ್ಬರೀಕೃತ ಆಸನಗಳನ್ನು ಹೊಂದಿದೆ.

ಈ ಪ್ಲೇಹೌಸ್ ಸದ್ಯಕ್ಕೆ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಇಂದೋರ್ ಮತ್ತು ಹೈದರಾಬಾದ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಎಲ್ಲಾ ನಗರಗಳಲ್ಲೂ ಪಿವಿಆರ್ ತನ್ನ ಕಬಂಧ ಬಾಹುಗಳನ್ನು ಚಾಚುವುದರಲ್ಲಿ ಯಾವುದೇ ಅನುಮಾನವಿಲ್ಲ.
Exit mobile version