ಅತ್ಯಂತ ಅಪರೂಪದ `ಚಿನ್ನದ ರಕ್ತ’ದ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಮಾಹಿತಿ

RARE

ವಿಶ್ವದ ಅತ್ಯಂತ ಅಪರೂಪದ ರಕ್ತದ(Blood) ಪ್ರಕಾರವೆಂದರೆ ಅದುವೇ ಚಿನ್ನದ ರಕ್ತ. ವಿಜ್ಞಾನಿಗಳ(Scientists) ಪ್ರಕಾರ, ಈ ರಕ್ತವು ಪ್ರಪಂಚದಲ್ಲಿ 50ಕ್ಕಿಂತ ಕಡಿಮೆ ಜನರಲ್ಲಿ ಕಂಡುಬರುತ್ತದೆ.

Bigthink.com ವರದಿಯ ಪ್ರಕಾರ, ಚಿನ್ನದ ರಕ್ತವು(Golden Blood) ಇಡೀ ವಿಶ್ವದಲ್ಲಿ ಕೇವಲ 43 ಜನರಲ್ಲಿ ಮಾತ್ರ ಇದೆ.

ಇದು ಮೊದಲ ಬಾರಿಗೆ 1961 ರಲ್ಲಿ ಬಹಿರಂಗವಾಯಿತು, ಆಸ್ಟ್ರೇಲಿಯಾದ ಗರ್ಭಿಣಿ ಮಹಿಳೆಯ ರಕ್ತವನ್ನು ಪರೀಕ್ಷಿಸಿದಾಗ ಗೋಲ್ಡನ್ ರಕ್ತವಿದೆ ಎಂದು ತಿಳಿಯಿತು.

Rh ಅಂಶವು ಶೂನ್ಯವಾಗಿರುವ ಜನರ ದೇಹದಲ್ಲಿ ಚಿನ್ನದ ರಕ್ತವು ಇರುತ್ತದೆ. ಇಂತಹ ಜನರು ತಮ್ಮ Rh ವ್ಯವಸ್ಥೆಯಲ್ಲಿ 61 ಸಂಭಾವ್ಯ ಪ್ರತಿಜನಕಗಳನ್ನು ಎಂದರೆ ಆಂಟಿಜೆನ್ಸ್ ಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಈ ರಕ್ತದ ಗುಂಪನ್ನು ಹೊಂದಿರುವ ಜನರಿಗೆ ಅಪಾಯಕಾರಿ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚು. ಚಿನ್ನದ ರಕ್ತದ ಗುಂಪು ಅಥವಾ Rh ಶೂನ್ಯ ರಕ್ತದ ಗುಂಪಿನ ಕೆಂಪು ರಕ್ತ ಕಣಗಳಲ್ಲಿ ಯಾವುದೇ Rh ಆಂಟಿಜೆನ್ ಗಳು ಇರುವುದಿಲ್ಲ.

ಚಿನ್ನದ ರಕ್ತದ ಗುಂಪಿನವರನ್ನು ಆತಂಕಗೊಳಿಸುವ ವಿಷಯವೆಂದರೆ, ಈ ಜನರು ರಕ್ತ ವರ್ಗಾವಣೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ RH ಶೂನ್ಯ ಗುಂಪಿನ ರಕ್ತವನ್ನು ದಾನ ಮಾಡುವುದು ಮತ್ತು ಸ್ವೀಕರಿಸುವುದು ಕಷ್ಟ. Rh ಹೊಂದಿರುವ ವ್ಯಕ್ತಿಗೆ ರಕ್ತದ ಅಗತ್ಯವಿದ್ದಾಗ, ಅವನು ಅಥವಾ ಅವಳು ಪ್ರಪಂಚದಾದ್ಯಂತ ಅತೀ ಕಡಿಮೆ ಸಂಖ್ಯೆಯಲ್ಲಿರುವ Rh ನಲ್ ದಾನಿಗಳ ಸಣ್ಣ ಜಾಲವನ್ನು ಅವಲಂಬಿಸಬೇಕಾಗುತ್ತದೆ.
https://vijayatimes.com/siddaramaiah-attacks-bjp-with-a-issue/

ವರದಿಯ ಪ್ರಕಾರ, ವಿಶ್ವಾದ್ಯಂತ ಈ ರಕ್ತದ ಗುಂಪಿನ ಸಕ್ರಿಯ ದಾನಿಗಳ ಸಂಖ್ಯೆ ಕೇವಲ 9 ಮಾತ್ರ. ಈ ಕಾರಣಕ್ಕಾಗಿಯೇ ಇದು ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ರಕ್ತದ ಗುಂಪು, ಹಾಗಾಗಿಯೇ ಇದನ್ನು ಅತ್ಯಂತ ಅಮೂಲ್ಯವಾದ ‘ಗೋಲ್ಡನ್ ಬ್ಲಡ್’ ಎಂದು ಹೆಸರಿಸಲಾಗಿದೆ.
Exit mobile version