ಇನ್ನೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ಮೆಟಾ ಮಾಲೀಕತ್ವದ ವಾಟ್ಸಾಪ್

ಮೆಟಾ (Meta) ಮಾಲೀಕತ್ವದ ಮತ್ತೊಂದು ಹೊಸ ಫೀಚರ್ ಅನ್ನು ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಆ ಫೀಚರ್ ಬಗ್ಗೆ ತಿಳಿಯಬೇಕೆಂದಿದ್ದರೆ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೋಟ್ಯಂತರ ಜನರು ವಾಟ್ಸಾಪ್‌ ಅನ್ನು ಬಳಸುತ್ತಿದ್ದು, ಎಷ್ಟೇ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿದ್ದರೂ (Messaging Platform) ವಾಟ್ಸಾಪ್ ಬಳಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಹಾಗಾಗಿ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಸಲುವಾಗಿ ವಾಟ್ಸಾಪ್ ಕೂಡಾ ಸದಾ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತ ಕಾರ್ಯನಿರ್ವಹಿಸುತ್ತದೆ.

ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಮೆಟಾ ಮಾಲಿಕತ್ವದ ಈ ಮೆಸೇಜಿಂಗ್ ಅಪ್ಲಿಕೇಷನ್ (Messaging Application) ಹೊಸ ಮೆನುವಿನ ಕೆಲಸದಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಆಡಿಯೋ ಮತ್ತು ವಿಡಿಯೋ ಮೆಸೇಜ್ ಮೋಡ್‌ನ (Mode) ನಡುವೆ ಬದಲಾಯಿಸಲು ಸುಲಭಗೊಳಿಸುವ ರೀತಿಯ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ.

ವಾಟ್ಸಾಪ್ ಆಡಿಯೋ (Audio) ಮತ್ತು ವಿಡಿಯೋ ಸಂದೇಶದ ಮೋಡ್‌ ನಡುವೆ ತ್ವರಿತ ಬದಲಾವಣೆಗೆ ಹೊಸ ಮೆನುವನ್ನು WABteaInfo ಪ್ರಕಾರ ಹೊರತರುತ್ತಿದ್ದು, ಈ ವೈಶಿಷ್ಟ್ಯವು ಸದ್ಯ ಆಂಡ್ರಾಯ್ಡ್‌ (Android) ಬೀಟಾ ಪರೀಕ್ಷಕರಿಗೆ ಮತ್ತು ಬೀಟಾ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ. ಹೊಸ ವೈಶಿಷ್ಟ್ಯದ ಎಕ್ಸಸ್ ಪಡೆಯಲು ಬಳಕೆದಾರರು ನವೀಕರಿಸಿದ ಆವೃತ್ತಿ 2.23.22.5 ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

ವಾಯ್ಸ್‌ ನೋಟ್ (Voice Note) ಮತ್ತು ತ್ವರಿತ ವಿಡಿಯೋ ಸಂದೇಶಗಳ ನಡುವೆ ಆಯ್ಕೆ ಮಾಡಲು ಹೊಸ ಮೆನುವನ್ನು ಕೆಲ ಬೀಟಾ ಪರೀಕ್ಷಕರು ಪ್ರಯೋಗಿಸಬಹುದಾಗಿದ್ದು, ಇತ್ತೀಚಿನ ನವೀಕರಣಗಳೊಂದಿಗೆ ತ್ವರಿತ ವಿಡಿಯೋ ಸಂದೇಶಗಳನ್ನು ನಿರ್ವಹಿಸಲು ವಾಟ್ಸಾಪ್ ಸಹ ಟಾಗಲ್ ಅನ್ನು ತೆಗೆದು ಹಾಕುತ್ತಿದೆ ಎಂದು ನಮೂದಿಸುವುದು ಮುಖ್ಯವಾಗುತ್ತದೆ.

ಈ ವೈಶಿಷ್ಟ್ಯ ಯಾವಾಗಲೂ ಡಿಫಾಲ್ಟ್‌ ಆಗಿ (Default) ಎನೇಬಲ್ ಆಗುತ್ತದೆ ಮತ್ತು ಬಳಕೆದಾರರು ಮೆನುವನ್ನು ಬಳಸುವಾಗ ವಿಭಿನ್ನ ಮೋಡ್‌ಗೆ ಬದಲಾಯಿಸಬಹುದು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿರುವುದಲ್ಲದೆ ವಾಯ್ಸ್‌ ನೋಟ್ ಅಥವಾ ಇನ್‌ಸ್ಟೆಂಟ್ ವಿಡಿಯೋ ಮೆಸೇಜ್ (Instant Video Message) ಮೋಡ್‌ ಅನ್ನು ಹೊಸ ಮೆನು ಬಳಕೆದಾರರಿಗೆ ತಮ್ಮ ಪ್ರಸ್ತುತ ಪರಿಸ್ಥಿತಿಗೆ ಸೂಕ್ತವಾದ ಆಯ್ಕೆ ಮಾಡಲು ನೆರವು ಮಾಡಿಕೊಡುತ್ತದೆ.

ಭವ್ಯಶ್ರೀ ಆರ್.ಜೆ

Exit mobile version