MSD : ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಸಮಚಿತ್ತ ಕಾಯ್ದುಕೊಳ್ಳುವ MS ಧೋನಿ ಉತ್ತರ ಹೀಗಿದೆ ನೋಡಿ

Cricket

Cricket : ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಎಂ.ಎಸ್ ಧೋನಿ(Why MSD Is the Coolest Captain?) ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ(International Cricket) ನಿವೃತ್ತರಾಗಿದ್ದರೂ ಜನರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಇಂದಿಗೂ ಧೋನಿ ಅವರ ಕ್ರೇಜ್ ಕಡಿಮೆಯಾಗಿಲ್ಲ, ಆಗುವುದೂ ಇಲ್ಲ.

ಏಕೆಂದರೆ ಅಂತಹ ಚಾಂಪಿಯನ್ ಆಟಗಾರ ಭಾರತ ಕ್ರಿಕೆಟ್‌ನಲ್ಲಿ ಹಿಂದೆಂದೂ ಬಂದಿಲ್ಲ. ನಾವು ಕಳೆದ 18 ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿಯವರ ಆಟವನ್ನು ನೋಡಿಕೊಂಡೇ ಬಂದಿದ್ದೇವೆ. ಧೋನಿ(Why MSD Is the Coolest Captain?) ಆಡಿರುವ ಒಂದೊಂದು ಪಂದ್ಯ ಇಂದಿಗೂ ಕೂಡ ಅವಿಸ್ಮರಣೀಯ.

ಇದನ್ನೂ ಓದಿ : https://vijayatimes.com/india-replys-to-pak-pm/

ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಲಿ, ಅಥವಾ ಪಂದ್ಯದಲ್ಲೇ ಸೋಲೇ ಸಿಗಲಿ, ಗೆಲುವೇ ಅನುಭವಿಸಲಿ, ಪ್ರತಿಷ್ಠಿತ ಟ್ರೋಫಿಯೇ ಗೆಲ್ಲಲಿ, ಧೋನಿಯ ಹಾವಭಾವದಲ್ಲಿ ಸ್ವಲ್ಪವೂ ವ್ಯತ್ಯಾಸ ಕಾಣುವುದಿಲ್ಲ. ತುಂಬಾ ಖುಷಿಯಾದರೆ ಮುಖದಲ್ಲಿ ಒಂದು ಸಣ್ಣ ನಗು ಬಿಟ್ಟರೆ, ಬಹು ಪಾಲು ಕಾಣಸಿಗುವುದು ಬರೀ ನಿರ್ಭಾವುಕ ಧೋನಿಯನ್ನು ಮಾತ್ರ.

ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲ, ಶ್ರೇಷ್ಠ ನಾಯಕ ಕೂಡ ಹೌದು. ಅಷ್ಟೇ ಅಲ್ಲ, ಮೈದಾನದಲ್ಲಿ ಒಬ್ಬ ಆಟಗಾರ ತನ್ನ ವರ್ತನೆ, ವರ್ಚಸ್ಸು ಮತ್ತು ಘನತೆ ಹಾಗೂ ಗೌರವವನ್ನು ಯಾವ ರೀತಿ ಉಳಿಸಿಕೊಳ್ಳಬೇಕು ಎಂಬುದನ್ನು ಧೋನಿಯಿಂದ ನೋಡಿ ಕಲಿಯುವುದು ಸಾಕಷ್ಟಿದೆ.


ಆಟ ಎಂದ ಮೇಲೆ ಸೋಲು -ಗೆಲುವು ಇರುವುದು ಸಹಜ. ಆದರೆ ಸೋತಾಗ ಸಿಟ್ಟು ಮಾಡಿಕೊಳ್ಳುವುದು, ಗೆದ್ದಾಗ ಸಂಭ್ರಮಿಸುವುದು ಧೋನಿಯ ಜಾಯಮಾನವಲ್ಲ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಧೋನಿಯ ಮನೋಭಾವನೆ ಕೂಡ ಅಭಿಮಾನಿಗಳಿಗೆ ಬಹಳಾನೇ ಇಷ್ಟವಾಗುತ್ತದೆ.

https://youtu.be/qA8iySF16NI


ಆದರೆ, ತಮ್ಮ ಸಮಚಿತ್ತ ಸ್ವಭಾವದ ಬಗ್ಗೆ ಧೋನಿ ಹೀಗೆ ಹೇಳುತ್ತಾರೆ. “ನಾನು ಕೂಡ ಎಲ್ಲರಂತೆಯೇ, ನನಗೂ ಕೋಪ ಬರುತ್ತದೆ. ಆದರೆ ಭಾವನೆಗಳ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದೇನೆ” ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


2019ರ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಜಾಹೀರಾತು ಕಾರ್ಯಕ್ರಮದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ‘ಇತರರಿಗಿಂತ ಹೆಚ್ಚು ಭಾವನೆಗಳ ಮೇಲೆ ನಿಯಂತ್ರಣ ಹೊಂದಿದ್ದೇನೆ. ನನಗೂ ಹತಾಶೆ, ಕೋಪ, ನಿರಾಸೆ ಮೂಡುತ್ತದೆ. ಆದರೆ ಇವುಗಳ್ಯಾವುದೂ ರಚನಾತ್ಮಕ ಭಾವನೆಗಳಲ್ಲ ಎಂಬುದು ಮುಖ್ಯವಾದ ಅಂಶ.

ಆ ವೇಳೆ ಭಾವನೆಗಿಂತ ಏನು ಮಾಡಬೇಕೆಂಬ ನಿರ್ಧಾರ ಮುಖ್ಯ. ಮುಂದೇನು ಮಾಡಬೇಕು? ಯಾರನ್ನು ಬಳಸಬಹುದು? ಎಂಬ ಇತ್ಯಾದಿ ಯೋಚನೆಗಳಿಂದ ಭಾವನೆಗಳನ್ನು ನಿಯಂತ್ರಿಸುತ್ತೇನೆ’ ಎಂದು ಧೋನಿ ತಿಳಿಸಿದರು.

ಹೀಗೆ ಸಮಚಿತ್ತದಿಂದ ಇರುವುದು ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು ಇಂದಿನ ಯುವಜನತೆ ಧೋನಿಯವರಿಂದ ಕಲಿಯಬೇಕಾದ ಮಹತ್ವದ ಪಾಠವಾಗಿದೆ.
Exit mobile version