ಟಾಟಾ IPL 2022 ; ಧೋನಿ ನಾಯಕತ್ವದಲ್ಲಿ CSK ಪ್ಲೇ ಆಫ್ ಎಂಟ್ರಿಯಾಗಲು ಸಾಧ್ಯತೆಯಿದೆಯಾ?

MS Dhoni

ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಈ ಹಿಂದೆ 4 ಐಪಿಎಲ್(IPL) ಟ್ರೋಫಿಗಳನ್ನು ಗೆದ್ದು ಬೀಗಿದ ಸಂಭ್ರಮ ಈ ಆವೃತ್ತಿಯಲ್ಲಿ ಕಣ್ಮರೆಯಾಗಿದೆ.

ಹಾಲಿ ಚಾಂಪಿಯನ್‌ಗಳು ತಮ್ಮ ಮೊದಲ 11 ಪಂದ್ಯಗಳಿಂದ ಕೇವಲ 4 ಗೆಲುವುಗಳನ್ನು ಗೆಲ್ಲುವ ಮೂಲಕ ಈ ಬಾರಿಯ 10 ತಂಡಗಳ IPL 2022 ಅಂಕಗಳ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿ ನೆಲೆಯೂರಿದೆ. CSK ಪ್ರಸ್ತುತ 4ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಿಂತ 8 ಅಂಕಗಳ ಹಿಂದಿದೆ. ಆದ್ರೆ, 4 ಬಾರಿಯ ಚಾಂಪಿಯನ್ನರು ಇನ್ನೂ ಪ್ಲೇಆಫ್ ರೇಸ್‌ನಿಂದ ಹೊರಬಂದಿಲ್ಲ ಎಂಬುದು ಕೊಂಚ ಅಶ್ಚರ್ಯಮಯವೇ. ಮೇ 10ರ ಹೊತ್ತಿಗೆ, ಈ ಸೀಸನ್ 56 ನೇ ಪಂದ್ಯದ ನಂತರ, 10 ತಂಡಗಳಲ್ಲಿ 9 ತಂಡಗಳು ಇನ್ನೂ ಟಾಪ್ 4 ರಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಲಿವೆ.

5 ಬಾರಿಯ ಚಾಂಪಿಯನ್ನರು ತಮ್ಮ ಮೊದಲ 11 ರಲ್ಲಿ 9 ರಲ್ಲಿ ಸೋತಿರುವುದರಿಂದ ಮುಂಬೈ ಇಂಡಿಯನ್ಸ್ ಮಾತ್ರ ಪ್ಲೇಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಗಿದೆ. CSK ತನ್ನ ಮೊದಲ 8 ಪಂದ್ಯಗಳಲ್ಲಿ ಸೋತ 6 ಪಂದ್ಯಗಳ ನಂತರ ರವೀಂದ್ರ ಜಡೇಜಾ ನಾಯಕತ್ವವನ್ನು ತ್ಯಜಿಸಿ, ಎಂ.ಎಸ್ ಧೋನಿ(MS Dhoni) ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಧೋನಿ ಅವರ ನಾಯಕತ್ವ 7ನೇ ಪಂದ್ಯದಿಂದ ಪುನಾರಂಭವಾಯಿತು. 4 ಬಾರಿ ಟ್ರೋಫಿ ಪಡೆದಿರುವ CSK ಈ ಆವೃತ್ತಿಯಲ್ಲಿ ಪ್ಲೇ ಆಫ್ ಎಂಟ್ರಿ ಕೊಡಬೇಕೆಂದರೆ ತಮಗಿರುವ ಮುಂದಿನ 3 ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಿದೆ.

CSK ತಂಡ ಟಾಟಾ ಐಪಿಎಲ್ 2022 ಪ್ಲೇಆಫ್‌ಗಳಿಗೆ ಅವಕಾಶ ಪಡೆಯಲು, ತಮ್ಮ ಉಳಿದಿರುವ ಎಲ್ಲಾ 3 ಪಂದ್ಯಗಳನ್ನು ಬಹುತೇಕ ರನ್ ರೇಟ್ ಪಡೆಯುವ ಮೂಲಕ ಗೆಲ್ಲಬೇಕಾಗಿದೆ. CSK ತಂಡದ ಉಳಿದ ಪಂದ್ಯಗಳ ಪಟ್ಟಿ ಹೀಗಿದೆ. ಮೇ 12 ರಂದು ವಾಂಖೆಡೆ ಸ್ಟೇಡಿಯಂನಲ್ಲಿ MI ವಿರುದ್ಧ ಸೆಣಸಾಡಲಿದೆ, ಮೇ 15 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪೈಪೋಟಿ, ಮೇ 20 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ RR ವಿರುದ್ಧ ಪೈಪೋಟಿ.

14 ಅಂಕಗಳೊಂದಿಗೆ 4 ನೇ ಸ್ಥಾನಕ್ಕೆ ಟೈ ಆದರೆ ಮಾತ್ರ CSK ಪ್ಲೇ ಆಫ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ಸಿಎಸ್ಕೆ ತಂಡದ ಅಭಿಮಾನಿಗಳು ಈ ಬಾರಿಯೂ ಕೂಡ ಧೋನಿ ನಾಯಕತ್ವದಲ್ಲಿ ಕಪ್ ಗೆಲ್ಲುವ ನಿರೀಕ್ಷೆಯನ್ನು ಹೊರಹಾಕಿದ್ದಾರೆ. ಕಳೆದ ಭಾನುವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 91 ರನ್ ಗಳಿಸಿದ ನಂತರ, CSK ಯ ನಿವ್ವಳ ರನ್ ರೇಟ್ ಪ್ರಮುಖ ವರ್ಧಕವನ್ನು ಪಡೆದುಕೊಂಡಿತು ಮತ್ತು ಅದು +0.028 ಗರಿಷ್ಠವಾಗಿದೆ.

ಇದೇ ರೀತಿ ಮುಂದಿನ ಪಂದ್ಯಗಳಲ್ಲೂ ರನ್ ರೇಟ್ ಪಡೆಯಬೇಕಿದೆ. ಚೆನೈ ತಂಡ ಆ ಗುರಿ ತಲುಪಿದರೆ ಪ್ಲೇ ಆಫ್ ಎಂಟ್ರಿಯಾಗಲು ಎಲ್ಲಾ ಸಾಧ್ಯತೆಗಳಿವೆ ಎಂಬುದು ಲೆಕ್ಕಾಚಾರ.

Exit mobile version