ನನ್ನಿಂದ ತಪ್ಪಾಗಿದೆ ಕ್ಷಮಿಸಿ ; ಕ್ಷಮೆಯಾಚಿಸಿದ ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್!

will smith

ಲಾಸ್ ಏಂಜಲೀಸ್(Los Angels), ಮಾರ್ಚ್ 27 ರಂದು ಭಾನುವಾರ ರಾತ್ರಿ ನಡೆದ ಆಸ್ಕರ್(Oscar) ಪ್ರಶಸ್ತಿ ಸಮಾರಂಭದಲ್ಲಿ ವೇದಿಯ ಮೇಲೆ ಉಪಸ್ಥಿತರಿದ್ದ ಹಾಸ್ಯನಟ ರಾಕ್(Chris Rock) ಅವರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ವಿಲ್ ಸ್ಮಿತ್(Will Smith) ಸೋಮವಾರ ಸಂಜೆ ಎಲ್ಲರ ಮುಂದೆ ಕ್ಷಮೆಯಾಚಿಸಿದ್ದಾರೆ. ಉದ್ಯಮದ ಉನ್ನತ ಪ್ರಶಸ್ತಿಗಳ ಸಮಾರಂಭದಲ್ಲಿ ಕಪಾಳಕ್ಕೆ ಹೊಡೆಯುವುದು ಎಷ್ಟು ಸರಿ? ಒಬ್ಬ ಆಸ್ಕರ್ ವಿಜೇತ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ! ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಘಟನೆಗಾಗಿ ಸ್ಮಿತ್ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಚಲನಚಿತ್ರ ಅಕಾಡೆಮಿ ಹೇಳಿದ ನಂತರ ಕ್ಷಮೆಯಾಚಿಸಿದ್ದಾರೆ.

ಸ್ಮಿತ್, ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದು, ದೂರದರ್ಶನದ ಸಮಾರಂಭದಲ್ಲಿ ಕ್ರಿಸ್ ರಾಕ್ ಅವರ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದು ಎಂದು ಹೇಳಿದರು. ಮೊದಲು ಕ್ರಿಸ್ ಅವರ ತಪ್ಪಿನ ಕುರಿತು ಮಾತನಾಡಿದ ವಿಲ್, ಬಳಿಕ ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನನ್ನಿಂದ ತಪ್ಪಾಗಿದೆ ಕ್ಷಮೆಯಿರಲಿ ಎಂದು ಪರೋಕ್ಷವಾಗಿ ಕೇಳಿದ್ದಾರೆ.

ಹಾಸ್ಯನಟ ರಾಕ್, ಸ್ಮಿತ್‌ ಅವರ ಹೆಂಡತಿಯ ಕುರಿತು ತಮಾಷೆ ಮಾಡಿದ ನಂತರ ಸ್ಮಿತ್ ವೇದಿಕೆಯ ಮೇಲೆ ಹೋಗಿ ನೇರವಾಗಿ ರಾಕ್‌ ಅವರ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ನಡೆದು ಒಂದು ಗಂಟೆಯ ನಂತರ, ಸ್ಮಿತ್ ಅವರು “ಕಿಂಗ್ ರಿಚರ್ಡ್” ನಲ್ಲಿ ಟೆನ್ನಿಸ್ ತಾರೆಗಳಾದ ವೀನಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ತಂದೆಯ ಪಾತ್ರದಲ್ಲಿ ಮಿಂಚಿದ್ದ ಪ್ರಭಾವ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡರು.

Exit mobile version