ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

winter

ಚಳಿಗಾಲ ಬಂತೆಂದರೆ ಸಂಜೆ ಅಗುವುದರೊಳಗೆ ಮನೆ ಸೇರಿದರೆ ಸಾಕಪ್ಪ ಅನ್ನುವವರು ಕೆಲವರಿದ್ದಾರೆ, ಇನ್ನೂ ಕೆಲವರು ಆ ಚಳಿಯನ್ನೇ ಆಸ್ವಾದಿಸುವವರೂ ಇದ್ದಾರೆ. ಚಳಿಗಾಲದಲ್ಲೊಂದು ಬೆಚ್ಚಗೊಂದು ಕಾಫಿ ಸಿಕ್ಕರೆ ಸಾಕು!ಮುಂಜಾನೆಯ  ಕ್ಷಣ ಕುದಿಯೋ ನೀರನ್ನ ನೋಡಿದರೆ ಸಾಕು ಅನ್ನೋವಷ್ಟು ವಿಪರೀತ ಚಳಿ, ಬಿಸಿಏರಿಸೊ ಪಾನೀಯ, ಬೆಚ್ಚಗಿನ ಅನುಭವಕ್ಕಾಗಿ ದಪ್ಪಗಿನ ಉಡುಪು ಧರಿಸಬೇಕೆಂಬ ಧಾವಂತ ಹೀಗೆಲ್ಲ ಅನ್ನಿಸುವುದರೊಂದಿಗೆ ಬಹುತೇಕರಿಗೆ ಈ ಚಳಿ ಕಿರಿ ಕಿರಿಯು ಆಗುತ್ತದೆ, ಇನ್ನು ಕೆಲವರು ಆ ಕ್ಷಣದ ಚಳಿಯ ತೀವ್ರತೆ ಅರಿತು ಹಿಂದೆಂದು ಕಂಡೇ ಇಲ್ಲ ಈ ತರಹದ ಚಳಿ ಅಬ್ಬಬ್ಬ ಎನ್ನುವವರು ಕೂಡ ಇದ್ದಾರೆ.

ಈ ಚಳಿಗಾಲ!! ಕೆಲ ರೋಗಗಳನ್ನ ತನ್ನತ್ತ ಸೆಳೆಯುದುಂಟು ,ಸೋಂಕು ಕೂಡ ಬಲು ಬೇಗ ನಮ್ಮನ್ನ ಅಪ್ಪಳಿಸುವುದು ಕೂಡ ಈ ಚಳಿಗಾಳದಲ್ಲೇ, ಅನೇಕ ಅಲರ್ಜಿಗಳು ಕೂಡ ಬರೋ ಸಾಧ್ಯತೆ ಇರುತ್ತದೆ ಇನ್ನು ಹಿರಿಯರ ಪಾಲಿಗಂತೂ, ಈ ಚಳಿಗಾಲ ಅವರಲ್ಲಿರೋ ಸಣ್ಣ ಪುಟ್ಟ ಕಾಯಿಲೆಗಳನ್ನ ಮತ್ತಷ್ಟು ಕ್ರಿಯಾಶೀಲವಾಗಿಸಿ ಆ ಸೊಂಕನ್ನ ವಿಸ್ತರಿಸಿ ಬಿಡುತ್ತದೆ.

ಚಳಿಗಾಲದಲ್ಲಿ ಹಸಿವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚೇ ಇರುತ್ತೆ ಹಾಗಾಗಿ ಜನ ಹೆಚ್ಚು ಭಕ್ಷ್ಯ ಪ್ರಿಯರಾಗ್ತಾರೆ ಅದರಲ್ಲೂ ಕ್ರಿಸ್ಪಿ ಕಾರವಾದ ಮಸಾಲ ಪದಾರ್ಥಗಳನ್ನು ಸಾಮಾನ್ಯವಾಗಿ ಮೆಚ್ಚುಕೊಳ್ಳುತ್ತಾರೆ.  ಇಂತಹ ಸಂಧರ್ಭದಲ್ಲೇ ವೈರಾಣು ಮನುಷ್ಯ ದೇಹ ಸೇರಲು ಹಪ ಹಪಿಸುತ್ತಿರುತ್ತದೆ ಜನರು ಮಾತ್ರ ಈ ಕಾಲದಲ್ಲಿ ಸೋಮಾರಿ ಪ್ರಿಯರಾಗಿರುತ್ತಾರೆ. ನವಂಬರ್ ಬಳಿಕ ಉಷ್ಣತೆ ಕಡಿಮೆಯಾಗಿ ಶೀತ ಗಾಳಿ ಬೀಸಲು ಆರಂಭವಾಗಿದ್ದು!! ಇದು ಚಳಿಗಾಲ ಬರುತ್ತೆ ಅನ್ನುವುದರ ಸೂಚನೆಯಾಗಿದೆ.

ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಮತ್ತು ಈ ಟಿಪ್ಸ್ ಪಾಲಿಸಿ.

1)ತಣ್ಣಗಿನ ಆಹಾರದಿಂದ ಅರ್ಥಾತ್ ನಿಮ್ಮ ದೇಹದ ಉಷ್ಣತೆಗಿಂತ ಕಡಿಮೆ ಉಷ್ಣತೆ ಇರುವ ಆಹಾರಗಳಿಂದ ದೂರವಿರಿ.

2)ಊಟದ ಬಳಿಕ ನಡೆಯೋ ಅಭ್ಯಾಸವನ್ನ ಮಾಡಿ

3)ತೇವಾಂಶದ ಕಡೆ ಗಮನ ನೀಡಿ

4)ಬೆಚ್ಚಗಿನ ಪಾನೀಯಗಳನ್ನು ಸೇವಿಸಿ

 5) ಕುಂಬಳ ಕಾಯಿ ಬಟಾಟೆ ಗಳಂತಹ ಆಹಾರಗಳ ಸೇವನೆ ಒಳಿತು

6)ವಿಟಮಿನ್ ಡ್

ಚಳಿಗಾಲದಲ್ಲಿ ಸೂರ್ಯನ ಬೆಳಕಿನಲ್ಲಿ ವಿಟಮಿನ್ D ಪ್ರಾಮಾಣ ಕಡಿಮೆ ಇರುವುದರಿಂದ ವಿಟಮಿನ್ D ಹೆಚ್ಚಾಗಿರೋ ಆಹಾರವನ್ನ ಸೇವಿಸಿ ವಿಟಮಿನ್ ಕೊರತೆ ನೀಗಿಸಬಹುದು.

7)ನೀರು

ಚಳಿಗಾಲದಲ್ಲಿ ಹೆಚ್ಚಿನ ನೀರು ಕುಡಿಯೋ ಅಭ್ಯಾಸ ಒಳ್ಳೆಯದು ಕಾರಣ ಚಳಿಗಾಲದಲ್ಲಿ ತ್ವಚೇ ದೇಹ ಒಣಗುತ್ತದೆ ದೇಹದಲ್ಲಿ ನೀರಿನ ಪ್ರಾಮಾಣ ಸರಿಯಾದ ಕ್ರಮದಲ್ಲಿ ಇರಬೇಕು ಹಾಗಾಗಿ ನೀರು ಹೆಚ್ಚು ಕುಡಿಯಿರಿ.

8)ಸೂರ್ಯನ ಬೆಳಕು

ಚಳಿ ಹೆಚ್ಚಿರೋ ಸಂಧರ್ಭಗಳಲ್ಲಿ ಸೂರ್ಯನ ಕಿರಣಗಳ ತೀವ್ರತೆ ಕಡಿಮೆ ಇರುತ್ತದೆ!ಹಾಗಾಗಿ ಮುನ್ನಚ್ಚರಿಕೆ ವಹಿಸುವುದರ ಜೊತೆಗೆ ಸನ್ಸ್ಕ್ರೀನ್ ಬಳಸುವುದು ಉತ್ತಮ.

9)ಆರೋಗ್ಯ ವರ್ಧಕ ಪ್ರಿಯರಾಗಿ.

ಯಾವಾಗಲು ನಿಮ್ಮ ಯೋಚನೆಯನ್ನ ಮತ್ತು ಮನಸ್ಸಿನ ಸ್ಥಿತಿಯನ್ನು ಜೊತೆಗೆ ಶಕ್ತಿಯನ್ನು ಉನ್ನತ ಮಟ್ಟದಲ್ಲಿರಿಸಿ, ಚಳಿಗಾಲದಲ್ಲಿ ವಾತಾವರಣ ತುಂಬಾ ಕಳೆಗುಂದಿರುತ್ತದೆ.

Exit mobile version