Bengaluru: ಬೆಳಗಾವಿ (Woman Assault Case-HC Advice) ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ (Woman Stripped and Assaulted) ನಡೆಸಿದ್ದ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಅಲ್ಲಿದ್ದ ಜನರು ನೆರವಿಗೆ ಧಾವಿಸದೆ ಮೂಕಪ್ರೇಕ್ಷಕರಂತೆ ನಿಂತುಕೊಂಡಿದ್ದ ಕಾರಣ
ಪ್ರತಿಯೊಬ್ಬರಿಂದಲೂ ದಂಡ ಸಂಗ್ರಹಿಸಿ ಸಂತ್ರಸ್ತ ಮಹಿಳೆಗೆ (Woman Assault Case-HC Advice) ನೀಡುವಂತೆ ಸಲಹೆ ನೀಡಿದೆ.

ಸ್ವಯಂ ಪ್ರೇರಿತವಾಗಿ ಈ ಘಟನೆಗೆ ಸಂಬಂಧಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಹೈಕೋರ್ಟ್ (High Court) ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮತ್ತು ನ್ಯಾ.
ಕೃಷ್ಣ ದೀಕ್ಷಿತ್ (Prasanna B Varale and Krishna Dixit) ಅವರಿದ್ದ ವಿಭಾಗೀಯ ಪೀಠ, ಹಲ್ಲೆಯಾಗುತ್ತಿದ್ದರೂ ಸುಮ್ಮನೇ ನಿಂತ ಜನರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದೆ.
ಆ ಸಂಧರ್ಭದ ವೇಳೆ ಯಾವುದೇ ಸಹಾಯಕ್ಕೆ ಬಾರದ ಗ್ರಾಮದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡಲು ಸಲಹೆ ನೀಡಿದ ಪೀಠ, ಇಂತಹ ವರ್ತನೆಗೆ ಬ್ರಿಟಿಷರು ಪುಂಡಕಂದಾಯ ಎಂಬ ತೆರಿಗೆ
ವಿಧಿಸುತ್ತಿದ್ದರು. ವಿಲಿಯಮ್ ಬೆಂಟಿಂಕ್ ಕಾಲದಲ್ಲೇ ಇಂತಹ ನೀತಿ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಹಿಂದೆ ನಡೆದ ವಿಚಾರಣೆ ವೇಳೆ, ಮಹಾಭಾರತದಲ್ಲಿ ವಸ್ತ್ರಾಪಹರಣದ ವೇಳೆ ದ್ರೌಪದಿಯ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ (Shri Krishna) ಧಾವಿಸಿದಂತೆ, ಈಗಿನ ಕಾಲದಲ್ಲಿ ಯಾರು ಕೂಡ ಬರುತ್ತಿಲ್ಲ
ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇಂದಿನ ಜಗತ್ತಿನಲ್ಲಿ ದುರ್ಯೋಧನರು (Duryodhana) ಅಥವಾ ದುಶ್ಯಾಸನರು ಬಂದರೆ ಯಾವ ಕೃಷ್ಣನೂ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿದ್ದ ವಿಭಾಗೀಯ
ಪೀಠ, ತನಿಖೆಯ ವಿವರಗಳಿಗೆ ಅತೃಪ್ತಿ ವ್ಯಕ್ತಪಡಿಸಿ ಹೆಚ್ಚುವರಿ ಸ್ಥಿತಿ ವರದಿಯನ್ನು ಕೋರಿತ್ತು.

ಪ್ರಕರಣ?
ಪ್ರೀತಿಸುತ್ತಿದ್ದ ಜೋಡಿಯೊಂದು ಓಡಿ ಹೋಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಯುವತಿಯ ಕುಟುಂಬುಸ್ಥರು ವಂಟಮೂರಿ ಗ್ರಾಮದಲ್ಲಿ (Vantamuri Village) ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ
ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ತಡವಾಗಿ ಸ್ಥಳಕ್ಕೆ ಆಗಮಿಸಿದ್ದ ಪಿಎಸ್ಐ (PSI) ಅಮಾನತುಗೊಂಡಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ಒಪ್ಪಿಸುವಂತೆ ಒತ್ತಾಯಗಳು ಕೇಳಿಬಂದ ಬೆನ್ನಲ್ಲೇ ಈ ಕೇಸನ್ನು ಎಲ್ಲಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದರು. ಅದರಂತೆ ರಾಜ್ಯ ಸರ್ಕಾರವು ನಿನ್ನೆ (ಡಿ.17) ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ.
ಇದನ್ನು ಓದಿ: ಹೊಂದಾಣಿಕೆ ಸಮಸ್ಯೆಯಿಂದಾಗಿ ಯುರೋಪ್ನಲ್ಲಿ ಇಸ್ಲಾಂಗೆ ಸ್ಥಾನವಿಲ್ಲ : ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಭವ್ಯಶ್ರೀ ಆರ್ ಜೆ