ತಮಿಳುನಾಡು : ತಮಿಳುನಾಡಿನಲ್ಲಿ(Tamilnadu) ಮಹಿಳೆಯೊಬ್ಬರು ತನ್ನ ಪತಿಗೆ ಅನೈತಿಕ ಸಂಬಂಧ(Affair) ಹೊಂದಿದ್ದಾರೆ ಎಂಬ ಬಹುದಿನದ ಶಂಕೆಯಿಂದ ಆತನ ಗುಪ್ತಾಂಗದ ಮೇಲೆ ಬಿಸಿ ನೀರು ಸುರಿದಿದ್ದಾಳೆ. ಸುಟ್ಟ ಗಾಯಗಳೊಂದಿಗೆ ನರಳಾಡಿದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುದುಪಟ್ಟು ಮೂಲದ ತಂಗರಾಜ್ (32) ಏಳು ವರ್ಷಗಳ ಹಿಂದೆ 29 ವರ್ಷದ ಪ್ರಿಯಾಳನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಂಗರಾಜ್ ಮೊಬೈಲ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ತಂಗರಾಜ್ ತನ್ನ ಕೆಲಸದ ಸ್ಥಳದಲ್ಲಿ ಯಾವುದೋ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪ್ರಿಯಾ ಹಲವು ದಿನಗಳಿಂದ ಶಂಕಿಸಿದ್ದಾರೆ ಎನ್ನಲಾಗಿದೆ.
ದಂಪತಿಗಳು ಸದಾ ಮನೆಯಲ್ಲಿ ಹಲವಾರು ವಿಚಾರಗಳಿಗಾಗಿ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳಿರುವುದು ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಅನುಸಾರ, ಮಂಗಳವಾರ ಪತ್ನಿ ಜತೆ ಮಾತಿನ ಚಕಮಕಿ ನಡೆಸಿ ತಂಗರಾಜ್ ಮಲಗಿದ್ದರು. ಆದರೆ ತನ್ನ ಅಸಮಾಧಾನ ಇನ್ನೂ ಬಗೆಹರಿಯದ ಕಾರಣ ಪತ್ನಿ ಪ್ರಿಯಾ, ಕುದಿಯುವ ನೀರನ್ನು ತಯಾರಿಸಿ, ತಂಗರಾಜ್ ಅವರ ಗುಪ್ತಾಂಗದ ಮೇಲೆ ಏಕಾಏಕಿ ಸುರಿದಿದ್ದಾರೆ.

ತಂಗರಾಜ್ ನೋವಿನಿಂದ ಜೋರಾಗಿ ಚೀರಾಡಿದ ಹಿನ್ನೆಲೆ, ನೆರೆಹೊರೆಯವರು ಗಾಬರಿಗೊಂಡು ಮನೆಯೊಳಗೆ ಪ್ರವೇಶಿಸಿ ಆತನನ್ನು ರಕ್ಷಿಸಿ, ವಾಲಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ಚಿಕಿತ್ಸೆ ನೀಡಿದ ವೈದ್ಯರು, ಅವರ ಗುಪ್ತಾಂಗಕ್ಕೆ 50% ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಕಾವೇರಿಪಾಕ್ಕಂ ಪೊಲೀಸರು ಇದೀಗ ಪ್ರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ), 324 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಮತ್ತು 506 (ii) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬುದು ವರದಿಯಿಂದ ತಿಳಿದಿಬಂದಿದೆ.