ಮೇಕೆ ದನಗಳಿಗೆ ಮಾತ್ರವಲ್ಲ, ಈ ಮಹಿಳೆಯರ ತಲೆಯಲ್ಲಿಯೂ ಬೆಳೆಯುತ್ತಿದೆ ಕೊಂಬು!

women have horns on their heads

ಸಾಮಾನ್ಯವಾಗಿ ದನದ ಕರುಗಳಿಗೆ, ಮೇಕೆಗಳಿಗೆ ಕೊಂಬುಗಳಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಇನ್ನೂ ಕೆಲವರಿಗೆ ‘ಅಹಂಕಾರ’ ದಿಂದ ಕೊಂಬು (horns) ಬರುವುದನ್ನೂ ನೋಡಿದ್ದೇವೆ.

ಆದರೆ, ಇಲ್ಲಿ ಒಬ್ಬ ಮಹಿಳೆಯ(Women) ತಲೆಯ(Head) ಮೇಲೆ ಕೊಂಬು ಬೆಳೆಯುತ್ತಿದೆ! ಹೌದು, ಇದು ಅಚ್ಚರಿಯಾದರೂ ಸತ್ಯ.


ಚೀನಾದಲ್ಲಿ ಓರ್ವ ಶತಾಯುಶಿ ಅಜ್ಜಿಯಿದ್ದಾಳೆ. ಆಕೆ ಕೇವಲ ಶತಾಯುಷಿಯಾಗಿದ್ದರೆ ಆಕೆಯ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ಆಕೆಯ ತಲೆಯ ಮೇಲೊಂದು ಕೊಂಬು ಮೂಡಿದ್ದು, ಜಗತ್ತನ್ನೇ ಅಚ್ಚರಿಯ ಅಲೆಯಲ್ಲಿ ತೇಲಿಸಿದೆ.

ಅಲ್ಲದೇ ಅದು ದಿನದಿಂದ ದಿನಕ್ಕೆ ಇನ್ನಷ್ಟು ಬೆಳೆಯುತ್ತಿದ್ದು ಆ ಅಜ್ಜಿಯನ್ನು ಸೂಪರ್ ಸ್ಟಾರ್ ಆಗಿ ಮಾಡಿಬಿಟ್ಟಿದೆ!

https://vijayatimes.com/shashi-tharoor-president/


ಚೀನಾದ (China) ಲಿನ್ಲೋ ಗ್ರಾಮದ ನಿವಾಸಿಯಾಗಿರುವ ಜಾಂಗ್ ರುಯಿಫಾಂಗ್ ಎಂಬ 101 ವರ್ಷದ ಅಜ್ಜಿಯ ಹಣೆಯ ಎಡಭಾಗದಲ್ಲಿ ಕೆಳ ವರ್ಷಗಳ ಹಿಂದೆ ಗಟ್ಟಿ ಮಚ್ಚೆ ಕಾಣಿಸಿಕೊಂಡಿತ್ತು. ದಿನಕಳೆದಂತೆ ನಿಧಾನವಾಗಿ ಬೆಳೆಯುತ್ತಾ ಹೋದ ಆ ಮಚ್ಚೆ ಕೋಡಿನಾಕಾರ ತಳೆದಿದೆ.

ಅದು ಈಗ ಒಂದು ವರ್ಷದ ಬಳಿಕ ಸುಮಾರು ಆರು ಸೆಂಟಿಮೀಟರ್ ಉದ್ದ ತಲುಪಿದೆ. ಅಜ್ಜಿಯ ಕುಟುಂಬದವರಿಗೆ ಕೊಂಬು ಒಂದು ರೀತಿಯಲ್ಲಿ ವರದಾನವಾಗಿ ಕಂಡುಬಂದಿದ್ದು ದೇವರು ನೀಡಿರುವ ವರಪ್ರಸಾದವೆಂಬಂತೆ ಸ್ವೀಕರಿಸಿದ್ದಾರೆ.

ಇದನ್ನು ತೆಗೆಸುವುದಾಗಲೀ ಯಾವುದೇ ತರಹದ ಚಿಕಿತ್ಸೆ ನೀಡುವುದಾಗಲೀ ಅವರು ಒಪ್ಪುತ್ತಿಲ್ಲ. ಇನ್ನು, ಈ ಕೊಂಬಿನಿಂದಾಗಿ ಆ ಅಜ್ಜಿಗೆ `ಗೋಟ್ ವುಮನ್’ (Goat Woman)ಎಂಬ ಅನ್ವರ್ಥನಾಮವೂ ಸಿಕ್ಕಿದೆಯಂತೆ.


ಕೇವಲ ಚೀನಾದಲ್ಲಿ ಮಾತ್ರವಲ್ಲ. ಭಾರತದಲ್ಲಿಯೂ(India) ಕೊಂಬನ್ನು ಹೊಂದಿರುವ ಮಹಿಳೆಯಿದ್ದಾರೆ. ಅದೂ ಕೂಡ ನಮ್ಮ ಕರ್ನಾಟಕದಲ್ಲೇ ಎಂದರೆ ಅಚ್ಚರಿಯಾಗೋದು ಖಂಡಿತ.

https://vijayatimes.com/shashi-tharoor-president/

ಚಾಮರಾಜನಗರ(Chamarajnagar) ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಗೆ ಸೇರಿದ ಹೊಸಪೋಡು ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮರವರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ಬಳಿಕ ಉದುರಿ ಬೀಳುತ್ತದೆಯಂತೆ,

ಮತ್ತೆ ಪುನಃ ಬೆಳೆಯುತ್ತದೆಯಂತೆ. ಈ ವಿಚಿತ್ರ ಘಟನೆ ನಿರಂತರವಾಗಿ ನಡೆಯುತ್ತಲೇ ಇದೆಯಂತೆ. ಹೌದು, ಹೊಸಪೋಡು ಕಾಲೋನಿಯಲ್ಲಿ ವಾಸವಿರುವ ಮಹಿಳೆಯ ತಲೆಮೇಲೆ ಕೊಂಬು ಕಾಣಿಸಿಕೊಂಡಿದ್ದು,

ಮಹಿಳೆ ಮತ್ತು ಕುಟುಂಬದವರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ತಲೆಯಲ್ಲಿ ಕೊಂಬು ಮೂಡುತ್ತಿದ್ದಾಗ ತಲೆ ನೋವು ಆರಂಭವಾಗುತ್ತದೆ. ಇವರಿಗೆ ಕೊಂಬು ತಲೆಯಲ್ಲಿ ಇರುವ ತನಕ ವಿಪರೀತ ತಲೆನೋವು(Pain) ಇರುತ್ತದೆಯಂತೆ.

ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬು ಬಳಿಕ ಉದುರಿ ಬೀಳುತ್ತದೆ. ಇವರಿಗಂತೂ ಇದೊಂದು ತಲೆನೋವಿನ ಕೊಂಬಾಗಿಬಿಟ್ಟಿದೆ. ತಲೆಯಲ್ಲಿ ಕೊಂಬು ಮೂಡಿರುವ ಇಂತಹ ಘಟನೆಗಳು,

ಒಂದು ರೀತಿಯಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ ಎಂದರೂ ತಪ್ಪಿಲ್ಲ.

ಪವಿತ್ರ

Exit mobile version