ಹೆಣ್ಣಿನ ಮಾನಸಿಕ ಆರೋಗ್ಯದ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ ; ತಪ್ಪದೇ ಓದಿ!

women

ಮಹಿಳೆಯರ ಜೀವನವು ಸ್ವಲ್ಪ ಮಟ್ಟಿಗೆ ಒತ್ತಡದ ಜೀವನ ಅಂದ್ರೆ ತಪ್ಪಾಗಲ್ಲ. ಕೆಲಸ ಮತ್ತು ಕುಟುಂಬ ಜೀವನದ ವಿಚಾರಕ್ಕೆ ಬಂದರೆ, ಪುರುಷರ ಜೀವನಕ್ಕಿಂತ ಹೆಚ್ಚು ಸವಾಲಿನಿಂದ ಕೂಡಿರುತ್ತದೆ. ಆಕೆಯು ಕಚೇರಿಯ ಕೆಲಸಗಳಿಂದ ಹಿಡಿದು ಮನೆಯ ಕೆಲಸದವರೆಗೆ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ಮಕ್ಕಳು, ಅತ್ತೆ-ಮಾವ ಮತ್ತು ಗಂಡನನ್ನು ನೋಡಿಕೊಳ್ಳುವ ಕೆಲಸವು ಸಹ ಆಕೆಯ ಮೇಲೆ ಇರುತ್ತದೆ. ಇದನ್ನೆಲ್ಲ ಸಾಧ್ಯವಾದಷ್ಟು ಆಕೆ ನಗುನಗುತ್ತಲೆ ಮಾಡುತ್ತಾಳೆ. ಆದ್ರೆ ಆಕೆಯೂ ಮನುಷ್ಯಳೇ ಅಲ್ವಾ?

ತಿಂಗಳ ಮುಟ್ಟಿನ ಸಮಯದಲ್ಲಿ ಆಗುವ ಹಾರ್ಮೋನ್ ಬದಲಾವಣೆ, ಗರ್ಭದಾರಣೆಯ ಸಮಯದಲ್ಲಿ, ಹೆರಿಗೆಯ ನಂತರ, ಮೆನೋಪಾಸ್ ಸಮಯದಲ್ಲಿ ಹೀಗೆ ಜೀವನಪೂರ್ತಿ ಒಂದಲ್ಲಾ ಒಂದು ರೀತಿ ಹಾರ್ಮೋನ್ ಅಸಮತೋಲನದಿಂದ ಬಳಲುವ ಹೆಣ್ಣುಮಕ್ಕಳು, ಇದರ ನಡುವೆಯೂ ಮನೆ, ಆಫೀಸ್ ಕೆಲಸ, ಮಕ್ಕಳು ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗೋದು ನಿಜವಾಗಲೂ ಹೆಣ್ಣಿನಿಂದ ಮಾತ್ರ ಸಾಧ್ಯ. ಅದಕ್ಕೆ ಅಲ್ವಾ ಹೇಳೋದು, “ಹೆಣ್ಮಕ್ಳೇ ಸ್ಟ್ರಾಂಗ್ ಗುರು” ಅಂತ.

ಆದರೆ ಆಕೆಯು ಸಹ ಮನುಷ್ಯಳಾಗಿರುವುದರಿಂದಾಗಿ, ಆಕೆಗೂ ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಈಕೆಗೆ ಬರುವ ಹಲವಾರು ಮಾನಸಿಕ ಸಮಸ್ಯೆಗಳಿಗೆ, ಈ ಪುರುಷ ಪ್ರಧಾನ ಸಮಾಜದಲ್ಲಿ ದೊರೆಯುವ ಕಡಿಮೆ ಆತ್ಮಗೌರವವೇ ಕಾರಣ. ಹಾಗಾದ್ರೆ ಮಹಿಳೆಯರು ಖಿನ್ನತೆ ಎಂಬ ರೋಗಕ್ಕೆ ಒಳಗಾಗಲು ಮುಖ್ಯವಾದ ಕಾರಣಗಳೇನು? ಒಂದು ಅಧ್ಯಯನದ ಪ್ರಕಾರ ಪ್ರತಿ ನಾಲ್ಕು ಜನ ಮಹಿಳೆಯರಲ್ಲಿ, ಒಬ್ಬರಿಗೆ ಖಿನ್ನತೆ ಇರುತ್ತದೆಯಂತೆ. ಇದು ಪುರುಷರಿಗಿಂತ ಹೆಚ್ಚು ಎಂಬುದು ಉಲ್ಲೇಖಾರ್ಹ. ಮಹಿಳೆಯರಿಗೆ ಖಿನ್ನತೆ ಬರಲು ಹಲವಾರು ಕಾರಣಗಳು ಇರುತ್ತವೆ.

ಗರ್ಭಾವಧಿ, ಬಡತನ, ಒಂಟಿತನ ಮತ್ತು ಹಾರ್ಮೋನುಗಳ ಬದಲಾವಣೆಯಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗುತ್ತವೆ. ಈ ಫೋಬಿಯಾ ಅನ್ನೋದು ನಮ್ಮ ಮನಸ್ಸಿನಲ್ಲಿ ಕಂಡು ಬರುವ ವಿಚಿತ್ರ ಭಯಗಳಾಗಿರುತ್ತವೆ. ಫೋಬಿಯಾದಿಂದ ನರಳುವಂತಹವರು, ಕಿರಿಕಿರಿ, ತಳಮಳಕ್ಕೆ ಒಳಗಾಗುವುದು, ನೋವು ಮತ್ತು ತಿರಸ್ಕಾರಗೊಳಗಾಗುತ್ತಾರೆ. ಫೋಬಿಯಾ ಎಂಬುದು ಒಂದು ವಿಸ್ತ್ರುತ ಸ್ಥಿತಿಯಾಗಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಇರುತ್ತದೆ. ಎಲ್ಲಾ ವಿಷಯಗಳಿಗೆ ಸ್ವಲ್ಪ ಮಟ್ಟಿಗೆ ಹೆಚ್ಚು ತಲೆಕೆಡಿಸಿಕೊಳ್ಳೋ ಮಹಿಳೆಯರು ಇಂತಹ ಮಾನಸಿಕ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಾರೆ.

ಮಹಿಳೆಯರ ಮೇಲೆ ಭಾರತದಲ್ಲಿ ಸುಲಭವಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಉಂಟಾಗುತ್ತಲೇ ಇರುತ್ತದೆ. ಇದರ ಪರಿಣಾಮದಿಂದ ಅವರು ಹೊರಗೆ ಬರಲು ಸಾಧ್ಯವಾಗದೆ ನರಳುತ್ತಾರೆ. ಅಪಘಾತವಾದ ನಂತರ ಸುಧಾರಿಸಿಕೊಂಡರು ಸಹ, ಅದರ ಆಘಾತದಿಂದ ಅವರು ಜರ್ಜರಿತಗೊಂಡಿರುತ್ತಾರೆ. ಕೆಲವೊಂದು ಫೋಬಿಯಾಗಳು, ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಮತ್ತು ಖಿನ್ನತೆಗಳು ಅವರನ್ನು ಈ ಅವಧಿಯಲ್ಲಿ ಹಿಂಡಿ ಹಿಪ್ಪೆ ಮಾಡುತ್ತದೆ.

ಒಂದು ಅಧ್ಯಯನದ ಪ್ರಕಾರ ಗರ್ಭಪಾತಗಳು ಮಹಿಳೆಯರಲ್ಲಿ, ಹೃದಯಾಘಾತವನ್ನುಂಟು ಮಾಡುವ ಸಾಧ್ಯತೆಯನ್ನು ದುಪ್ಪಟ್ಟು ಮಾಡುತ್ತದೆಯಂತೆ. ಒಂದು ಅಧ್ಯಯನದ ಪ್ರಕಾರ ಹತ್ತರಲ್ಲಿ ಒಬ್ಬ ಮಹಿಳೆಯಲ್ಲಿ ಈ ಕಾರಣದಿಂದಾಗಿ ಮಾನಸಿಕ ಸಮಸ್ಯೆ ಕಂಡು ಬರುತ್ತದೆಯಂತೆ. ಕಾರಣಗಳೇನೇ ಇರಲಿ, ಸಕಾಲದಲ್ಲಿ ಚಿಕಿತ್ಸೆ ದೊರಕಿದರೆ ಎಂತಹ ಕಾಯಿಲೆಯೂ ಗುಣವಾಗುತ್ತದೆ. ಹಾಗೇ ಚಿಕಿತ್ಸೆಯ ಜೊತೆಗೆ ಮನೆಯವರ ಪ್ರೀತಿ ಕಾಳಜಿ ಬೆಂಬಲ ಇದ್ದರೆ, ಇನ್ನೂ ವೇಗವಾಗಿ ಸುಧಾರಿಸಿಕೊಳ್ಳೋಕೆ ಸಾಧ್ಯವಾಗುತ್ತದೆ.

Exit mobile version