ಬಾಲ್ಯ ವಿವಾಹವಾದ ಪತಿಯರ ಬಂಧನ : ಅಸ್ಸಾಂ ಸಿಎಂ ವಿರುದ್ಧ ಮಹಿಳೆಯರ ಬೃಹತ್ ಪ್ರತಿಭಟನೆ

Assam : ಅಸ್ಸಾಂ ಸರ್ಕಾರವು ಶುಕ್ರವಾರ 2,000 ಕ್ಕೂ ಹೆಚ್ಚು ಬಾಲ್ಯ ವಿವಾಹವಾದ(Child marriage) ಯುವಕರು ಹಾಗೂ ಪುರುಷರನ್ನು ಬಂಧಿಸುವ ಮುಖೇನ ಬಾಲ್ಯ ವಿವಾಹಗಳ ವಿರುದ್ಧ ಬೃಹತ್(women’s protest against CM) ಶಿಸ್ತುಕ್ರಮವನ್ನು ಪ್ರಾರಂಭಿಸಿದ ಅಸ್ಸಾಂ(Assam) ಸಿಎಂ ವಿರುದ್ಧ ಇದೀಗ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಸ್ಸಾಂ ಸರ್ಕಾರ ಬಾಲ್ಯವಿವಾಹಗಳ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸುತ್ತಿದ್ದಂತೆ ತಮ್ಮ ಪತಿ ಮತ್ತು ಪುತ್ರರ ಬಂಧನವನ್ನು ವಿರೋಧಿಸಿ

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸಿಎಂ ಹಿಮಂತ ಬಿಸ್ವಾ ಶರ್ಮ(Himanta Biswa Sarma) ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹಿಂದೆ ಹೇಳಿದಂತೆ ಬಾಲ್ಯವಿವಾಹವನ್ನು ತಡೆಗಟ್ಟಬೇಕು! ಹೀಗಾಗಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾದ ಯುವಕರು ಮತ್ತು ಪುರುಷರನ್ನು ಬಂಧಿಸುವ ಕೆಲಸವನ್ನು ನಾವು ಆರಂಭಿಸುತ್ತೇವೆ,

ಈ ದಿಟ್ಟ ಹೆಜ್ಜೆಯ ಮುಖಾಂತರ ಬಾಲ್ಯವಿವಾಹಕ್ಕೆ ಬ್ರೇಕ್‌ ಹಾಕಲಿದ್ದೇವೆ ಎಂದು ಸಿಎಂ ಶರ್ಮಾ ಹೇಳಿದ್ದರು.

ಅದರಂತೆಯೇ ತಮ್ಮ ರಾಜ್ಯದಲ್ಲಿ ಬಾಲ್ಯವಿವಾಹವಾದ 2000ಕ್ಕೂ ಹೆಚ್ಚು ಯುವಕರು ಮತ್ತು ಪುರುಷರನ್ನು ಬಂಧಿಸುವಲ್ಲಿ ಅಸ್ಸಾಂ ಸರ್ಕಾರ ಯಶಸ್ವಿಯಾಗಿದೆ.

ಇದನ್ನೂ ಓದಿ: ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್‌ ನಾಯಕರು

ಸಿಎಂ ಶರ್ಮಾ ಅವರು ಬಾಲ್ಯವಿವಾಹವಾದ ಯುವಕರು ಮತ್ತು ಪುರುಷರನ್ನು ಬಂಧಿಸಿದ ಬೆನ್ನಲ್ಲೇ ತಮ್ಮ ಪತಿಯರನ್ನು ಬಂಧಿಸಿದ್ದೇಕೆ? ಅವರನ್ನು ಮಾತ್ರ ಏಕೆ ಬಂಧಿಸಬೇಕು?

ನಾವು ಮತ್ತು ನಮ್ಮ ಮಕ್ಕಳು ಹೇಗೆ ಬದುಕುಳಿಯಬೇಕು? ನಮಗೆ ಆದಾಯದ ಮಾರ್ಗವಿಲ್ಲ ಎಂದು ಮಜುಲಿ ಜಿಲ್ಲೆಯ ನಿರೋದಾ ಡೋಲೆ(Niroda Dole) ಎಂಬ ಮಹಿಳೆ ಸುದ್ದಿಪತ್ರಿಕೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೆಸರು ಹೇಳಲಿಚ್ಛಿಸದ ಬಾರ್ಪೇಟಾ ಜಿಲ್ಲೆಯ ಮಹಿಳೆಯೊಬ್ಬರು, ತಮ್ಮ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ.

ಅವನು ತಪ್ಪು ಮಾಡಿದ್ದಾನೆ, ಅದಕ್ಕೆ ನನ್ನ ಗಂಡನನ್ನು ಏಕೆ ಬಂಧಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಮೋರಿಗಾಂವ್‌ನ ಮೊನೊವಾರಾ ಖಾತೂನ್ ಅವರು ಕೂಡ ಬಂಧನದ ಬಗ್ಗೆ ಮಾತನಾಡಿದ್ದು, ನನ್ನ ಸೊಸೆ (women’s protest against CM) ಮದುವೆಯಾದಾಗ 17 ವರ್ಷ. ಈಗ ಅವಳು 19 ಮತ್ತು ಐದು ತಿಂಗಳ ಗರ್ಭಿಣಿ!

ಈಗ ಆಕೆಯ ಪತಿಯನ್ನು ಬಂಧಿಸಿದ್ದೀರಾ, ಆಕೆಯನ್ನು ನೋಡಿಕೊಳ್ಳುವವರು ಯಾರು? ಎಂದು ಸಿಎಂ ಬಿಸ್ವಾ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ.

ಸದ್ಯದ ವರದಿಯ ಪ್ರಕಾರ, ಅಸ್ಸಾಂ ಸರ್ಕಾರ 2,000 ಮಂದಿಯನ್ನು ಬಂಧಿಸಿದ್ದು, 4,004 ಪ್ರಕರಣಗಳು ದಾಖಸಿಕೊಂಡಿದೆ. ಇದರ ಜೊತೆಗೆ 8,000 ಆರೋಪಿಗಳ ಪಟ್ಟಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಸಂಸ್ಥೆಗಳಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳನ್ನು ನಡೆಸಿದ 51 ಪುರೋಹಿತರು ಮತ್ತು ಕಾಜಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version