U19 ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ: ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಭಾರತೀಯ ವನಿತೆಯರು

Sedgars Park: ಭಾರತ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂಥಾ ಸಾಧನೆ ಮಾಡಿದೆ. ಸೌತ್ ಆಫ್ರಿಕಾದಲ್ಲಿ(South Africa) ನಡೆದ ಚೊಚ್ಚಲ 19 ಹರೆಯದೊಳಗಿನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ(Women’s World cup Tournament) ಭಾರತ ವನಿತೆಯರ ತಂಡ ಚಾಂಪಿಯನ್ (Womens U19 World Cup) ಆಗಿ ಹೊರಹೊಮ್ಮಿದೆ.

ಶೆಫಾಲಿ ವರ್ಮಾ ನಾಯಕತ್ವದ ಭಾರತ ಮಹಿಳಾ ತಂಡ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್(England) ವಿರುದ್ಧ ಹೋರಾಟ ನಡೆಸಿತ್ತು.

ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ವನಿತೆಯರು 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ, ಅಂಡರ್ 19 ಮಹಿಳಾ ವಿಶ್ವಕಪ್ ಟೂರ್ನಿಯ ಟ್ರೋಫಿ ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡ, ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅಬ್ಬರಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಆಯಿತು.

ಲಿಬರ್ಟಿ ಹೀಪ್ 0 ಇಂಗ್ಲೆಂಡ್‌ ತಂಡದ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ಕೇವಲ 4 ರನ್ ಸಿಡಿಸಿ ಔಟಾದರು. ನಮನ್ ಹೋಲ್ಯಾಂಡ್ 10 ರನ್ ಸಿಡಿಸಿ ನಿರ್ಗಮಿಸಿದರು.

16 ರನ್‌ಗಳಿಗೆ ಇಂಗ್ಲಂಡ್ ಪ್ರಮುಖ 3 ವಿಕೆಟ್ ಪತನಗೊಂಡಿತು.

ಇದನ್ನೂ ಓದಿ: ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್

ಸೆರೆನ್ ಸ್ಮೇಲ್ 3 ರನ್ ಸಿಡಿಸಿದರೆ. ರ್ಯಾನಾ ಮೆಕ್‌ಡೋನಾಲ್ಡ್ ಗೇ 19 ರನ್ ಕಾಣಿಕೆ ನೀಡಿದರು. ಕ್ರಿಸ್ ಪಾವ್ಲೇ 2 ರನ್ ಸಿಡಿಸಿ ಔಟಾದರು.

ಎಲೆಕ್ಸಾ ಸ್ಟೋನ್‌ಹೌಸ್ 11, ಜೋಯಿಸ್ ಗ್ರೋವ್ಸ್ 4, ಹನ್ನ ಬೇಕರ್ 0, ಸೋಫಿಯಾ ಸ್ಮೇಲ್ 11 ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ 17. 1 ಓವರ್‌ಗಳಲ್ಲಿ 68 ರನ್ ಸಿಡಿಸಿ ಆಲೌಟ್ ಆಯಿತು.

ಗೆಲುವಿಗೆ 69 ರನ್ ಸುಲಭ ಟಾರ್ಗೆಟ್ ಪಡೆದ ಭಾರತ ವನಿತೆಯರ ಆರಂಭ ಉತ್ತಮವಾಗಿರಲಿಲ್ಲ. ಶೆಫಾಲಿ ವರ್ಮಾ(Shefali Varma)15 ರನ್ ಗೇ ಔಟಾದರು.

ಭಾರತ 16 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಭಾರತದ ಪಾಳಯದಲ್ಲಿ ಆತಂಕ ಎದುರಾಗಲಿಲ್ಲ. ಕಾರಣ ಸುಲಭ ಟಾರ್ಗೆಟ್.

ಶೆಫಾಲಿ ಸ್ಫೋಟಕ ಬ್ಯಾಟಿಂಗ್ (Womens U19 World Cup) ಮೂಲಕ 11 ಎಸೆತದಲ್ಲಿ 15 ರನ್ ಸಿಡಿಸಿದರು. ಇತ್ತ ಶ್ವೇತಾ ಶೆರಾವತ್ 5 ರನ್ ಗೇ ಔಟಾದರು

ಸೌಮ್ಯ ತಿವಾರಿ ಹಾಗೂ ಜಿ ತ್ರಿಷಾ ಜೊತೆಯಾಟ ಟೀಂ ಇಂಡಿಯಾವನ್ನು ಗೆಲವಿನ ಹಾದಿಯಲ್ಲಿ ಮುನ್ನಡೆಸಿತು. ಇಂಗ್ಲೆಂಡ್ ಭಾರತದ ವಿಕೆಟ್ ಕಬಳಿಸಿ ಒತ್ತಡ ಹೇರಲು ಯತ್ನ ನಡೆಸಿತು.

ಆದರೆ ಯಾವುದೂ ಪ್ರಯೋಜನವಾಗಲಿಲ್ಲ. ಜಿ ತ್ರಿಷಾ 24 ರನ್ ಸಿಡಿಸಿ ಔಟಾದರು. ಇತ್ತ ಸೌಮ್ಯ ತಿವಾರಿ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ಭಾರತ 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.

7 ವಿಕೆಟ್ ಗೆಲುವು ದಾಖಲಿಸಿದ ಭಾರತ ಅಂಡರ್ 19 ವನಿತೆರ ತಂಡ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ವನತಿಯೇರಾ ಸಾಧನೆಗೆ ಅಭಿನಂದನಗಳ ಮಹಾಪೂರವೇ ಹರಿದು ಬಂದಿದೆ.

Exit mobile version