Ahmedabad: ಈ ಬಾರಿಯ ವಿಶ್ವಕಪ್ 2023ರಲ್ಲಿ ಇಂಡೋ ಮತ್ತು ಆಸೀಸ್ ಬಹಳ ವರ್ಷಗಳ ನಂತರ (World Cup 2023 Final) ಮತ್ತೆ ಫೈನಲ್ಸ್ ನಲ್ಲಿ ಎದುರಾಳಿಗಳಾಗಿದ್ದು, ನ್ಯೂಜಿಲ್ಯಾಂಡ್
(New Zealand) ಅನ್ನು ಸೆಮಿಫೈನಲ್ ನಲ್ಲಿ (Semi-final) ಸೇಡನ್ನ ತೀರಿಸಿಕೊಂಡ ಭಾರತವು ಭಾನುವಾರ 19ರಂದು ಫೈನಲ್ಸ್ ನಲ್ಲಿ ಆಸ್ರ್ಟೇಲಿಯನ್ನರ (Australia) ವಿರುದ್ಧ
ಲೆಕ್ಕಚುತ್ತ ಮಾಡಿ ವಿಜಯಪತಾಕೆಯನ್ನ ಹಾರಿಸುತ್ತಾರಾ.
ಈ ಬಾರಿಯ ವಿಶ್ವಕಪ್ ನಲ್ಲಿ ಭಾರತದ ಅಭಿಯಾನ ಶುರುವಾಗಿದ್ದು, ಆಸ್ರ್ಟೇಲಿಯಾ ವಿರುದ್ಧ,ಕಿಂಗ್ ಕೊಹ್ಲಿ ಮತ್ತೆ ಕನ್ನಡಿಗ ಕೆ.ಎಲ್ ರಾಹುಲ್ (K L Rahul) ಕಾಂಗರೂಗಳನ್ನ ಅಟ್ಟಾಡಿಸಿದ್ದರು. ಅಲ್ಲದೆ,
ಈ ಪಂದ್ಯದಲ್ಲಿ ಭಾರತ 6 ವಿಕೇಟ್ ಗಳ ರೋಚಕ ಗೆಲುವು ದಾಖಲಿಸಿತ್ತು. ಆದರೆ ಫೈನಲ್ಸ್ ವಿಚಾರಕ್ಕೆ ಬಂದಾಗ ಈ ಎರಡು ತಂಡಗಳದ್ದು, 20 ವರ್ಷಗಳ ನಂತರದ ಕಾದಾಟವಾಗಿದೆ.
2003ರಲ್ಲಿ ಜೋಹಾನ್ಸ್ಬರ್ಗ್ (Johannesburg) ನಲ್ಲಿ ನಡೆದ ಫೈನಲ್ಸ್ ನಲ್ಲಿ ಟಾಸ್ ಗೆದ್ದ ಸೌರವ್ ಗಂಗೂಲಿ ಪಡೆ ಇದೇ ಕಾಂಗರೂಗಳ ವಿರುದ್ಧ 125 ರನ್ಗಳ ಸೋಲನ್ನ ಅನುಭವಿಸಿದ್ದರು.
ಈಗ ಈ ಸೇಡನ್ನ ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದ್ದು, 8ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಆಸ್ರ್ಟೇಲಿಯಾ, 7 ಬಾರಿಯ ಫೈನಲ್ನಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ
ಇದೀಗ 6ನೇ ಟ್ರೋಫಿ (World Cup 2023 Final) ಮೇಲೆ ಕಣ್ಣಿಟ್ಟಿದೆ.
ಇನ್ನು ಭಾರತ 4ನೇ ಬಾರಿ ಫೈನಲ್ಸ್ ಗೆ (Final) ಹೆಜ್ಜೆ ಇಡುತ್ತಿದ್ದು,ಇದಕ್ಕೂ ಮೊದಲೇ ಆಡಿದ್ದ 3 ಫೈನಲ್ ಪಂದ್ಯಗಳಲ್ಲಿ 1983, 2011ರ ಚಾಂಪಿಯನ್ಸ್ ಆಗಿದ್ದರು. ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ
ಭಾರತ ಸತತ 10 ಪಂದ್ಯಗಳನ್ನೂ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಸಹ ಸತತ 8 ಪಂದ್ಯಗಳನ್ನು ಗೆದ್ದಿದೆ.
ನವೆಂಬರ್ 19 ರಂದು ಅಹಮದಾಬಾದ್ನ (Ahmedabad) ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ (Narendra Modi Cricket Stadium) ಸಜ್ಜಾಗಿದ್ದು, ಉಭಯ ತಂಡಗಳ ಫೈನಲ್
ಕಾಳಗವನ್ನು ವೀಕ್ಷಿಸಲು ಇಡೀ ವಿಶ್ವವೇ ಕಾದು ಕುಳಿತಿದೆ. ಇನ್ನು ಭಾರತದ ಗೆಲುವಿಗಾಗಿ ಎಲ್ಲೆಡೆ ಪೂಜಾ ಹವನಗಳು ನಡೆಯುತ್ತಿದೆ.
ಇದನ್ನು ಓದಿ: ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ್ದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್
- ಭವ್ಯಶ್ರೀ ಆರ್ ಜೆ