IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್ : ಕೋಲ್ಕತಾದ ಈಡನ್‌ ಗಾರ್ಡನ್ಸ್‌ ವಿಶ್ವಕಪ್ ಟೂರ್ನಿ ಟಿಕೆಟ್‌ ಬೆಲೆ ಪ್ರಕಟ

Kolkata : (ಜು.11): ಬರೋಬ್ಬರಿ 12 ವರ್ಷಗಳ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (World cup tickets cheaper) ಭಾರತದಲ್ಲಿ ಮತ್ತೊಮ್ಮೆ ಆಯೋಜನೆಗೊಂಡಿದೆ.

ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಜರುಗಲಿದೆ. ಭಾರತವು ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಇದೇ ಮೊದಲ

ಬಾರಿಗೆ ಆತಿಥ್ಯ ವಹಿಸುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿ ದೇಶದ 10 ಸ್ಟೇಡಿಯಂಗಳಲ್ಲಿ ಜರುಗಲಿದ್ದು, ಇದೀಗ ವಿಶ್ವಕಪ್ ಟೂರ್ನಿ ಕೋಲ್ಕತಾದ (Kolkata) ಈಡನ್‌ ಗಾರ್ಡನ್ಸ್‌

(Eden Gardens) ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಗಳ ಟಿಕೆಟ್ ದರ ನಿಗದಿ ಪಡಿಸಲಾಗಿದೆ.

ಸೆಮಿಫೈನಲ್‌ ಸೇರಿ 5 ಪಂದ್ಯಗಳು 63,500 ಆಸನ ಸಾಮರ್ಥ್ಯವಿರುವ ಈ ಕ್ರೀಡಾಂಗಣದಲ್ಲಿ ನಡೆಯಲಿದ್ದು,ಕನಿಷ್ಠ 900 ರೂಪಾಯಿ ಹಾಗೂ ಗರಿಷ್ಠ 3000 ರುಪಾಯಿ ಭಾರತ (India)-ದಕ್ಷಿಣ ಆಫ್ರಿಕಾ

(South Africa) ಪಂದ್ಯಕ್ಕೆ ನಿಗದಿಪಡಿಸಿದೆ. ಸೆಮೀಸ್‌ ಪಂದ್ಯಕ್ಕೂ ಇನ್ನು ಇದೇ ಬೆಲೆ ನಿಗದಿಪಡಿಸಲಾಗಿದೆ. ರುಪಾಯಿ 800ರಿಂದ ಆರಂಭಗೊಂಡು ರುಪಾಯಿ2200 ರ ವರೆಗೆ ಪಾಕಿಸ್ತಾನದ

(Pakistan) 2 ಪಂದ್ಯಗಳ ಟಿಕೆಟೆ ಬೆಲೆ ಇದೆ. ರು.650 ಕನಿಷ್ಠ, 1500 ರು. ಗರಿಷ್ಠ ಬೆಲೆ ಬಾಂಗ್ಲಾದೇಶ (Baangla desh)-ನೆದರ್‌ಲೆಂಡ್ಸ್‌ (Netherland) ಪಂದ್ಯಕ್ಕೆ ನಿಗದಿಪಡಿಸಲಾಗಿದೆ.

ಐಪಿಎಲ್‌ಗಿಂತ ವಿಶ್ವಕಪ್ ಟಿಕೆಟ್‌ ಚೀಪ್‌

2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಪಂದ್ಯಾವಳಿ ಕಳೆದ ಕೆಲ ತಿಂಗಳ ಹಿಂದಷ್ಟೇ ನಡೆದಿತ್ತು ಇನ್ನು ಈ ಪಂದ್ಯಗಳಿಗೆ ಹೋಲಿಸಿದರೆ ತುಂಬಾ ಅಗ್ಗದ ದರವನ್ನು ಏಕದಿನ

ವಿಶ್ವಕಪ್ ಟೂರ್ನಿಯ ಪಂದ್ಯದ ಟಿಕೆಟ್‌ಗಳು ನಿಗದಿ ಪಡಿಸಲಾಗಿದೆ. ಈ ಮೊದಲು 16ನೇ ಆವೃತ್ತಿಯ ಐಪಿಎಲ್(IPL) ಟೂರ್ನಿಯಲ್ಲಿ ಆರ್‌ಸಿಬಿ(RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್

(Chennai super kings) ನಡುವಿನ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinna swamy Stadium) ನಡೆದಿತ್ತು ಈ ಟಿಕೆಟ್‌ಗಳ ಗರಿಷ್ಠ ಬೆಲೆ ಒಟ್ಟು 25,000

ರುಪಾಯಿಗಳವರೆಗೂ (World cup tickets cheaper) ನಿಗದಿಯಾಗಿತ್ತು.

ಅದಕ್ಕೆ ಹೋಲಿಸಿದರೆ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದ ಗರಿಷ್ಠ ಟಿಕೆಟ್ ಬೆಲೆ ಒಟ್ಟು 3000 ಎಂದು ನಿಗದಿ ಪಡಿಸಲಾಗಿದೆ. ಇನ್ನು 5 ವಿಶ್ವಕಪ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ

ಕೂಡಾ ಆತಿಥ್ಯ ವಹಿಸಲಿದ್ದು, ಟಿಕೆಟ್‌ ದರ ಇನ್ನೂ ಕೂಡ ನಿಗದಿ ಪಡಿಸಿಲ್ಲ. ಬೆಂಗಳೂರಿನ(Bengaluru) ಪಂದ್ಯಗಳ ಟಿಕೆಟ್ ದರ ಮಾಹಿತಿ ಇನ್ನು ಸದ್ಯದಲ್ಲೇ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ : ವಿದ್ಯುತ್ ದರ ಏರಿಕೆ ನಂತರ ಮತ್ತೊಂದು ಶಾಕ್ ! ನೀರಿನ ದರ ಶೇ.12-15 ಏರಿಸಲು ಜಲಮಂಡಳಿ ಚಿಂತನೆ

ಸೆಮಿಫೈನಲ್‌ ಪಂದ್ಯಗಳು ಮುಂಬೈ(Mumbai), ಕೋಲ್ಕತಾದಲ್ಲಿ(Kolkata) ನವೆಂಬರ್ 15 ಹಾಗೂ 16ರಂದು ಕ್ರಮವಾಗಿ ಕೋಲ್ಕತಾ ಈಡನ್‌ ಗಾರ್ಡನ್ಸ್‌ನಲ್ಲಿ ಮತ್ತು ಮುಂಬೈನ ವಾಂಖೇಡೆ

ಹಾಗೂ ನಡೆಯಲಿವೆ. ಪಾಕಿಸ್ತಾನ ಒಂದು ವೇಳೆ ಸೆಮೀಸ್‌ ಪ್ರವೇಶಿಸಿದರೆ ಕೋಲ್ಕತಾದಲ್ಲಿ ಆ ತಂಡದ ಪಂದ್ಯ ನಡೆಯಲಿದೆ. ಒಂದು ವೇಳೆ ಭಾರತ ಸೆಮೀಸ್‌ಗೇರಿದರೆ ಆ ಪಂದ್ಯಕ್ಕೆ ಮುಂಬೈ

ಆತಿಥ್ಯ ವಹಿಸಲಿದೆ. ಭಾರತ-ಪಾಕಿಸ್ತಾನ ಒಂದು ವೇಳೆ ಸೆಮೀಸ್‌ನಲ್ಲಿ ಎದುರಾಗುವ ಸಂದರ್ಭ ಬಂದರೆ ಕೋಲ್ಕತಾದಲ್ಲಿ ಆ ಪಂದ್ಯವು ನಡೆಯಲಿದೆ ಎಂದು ಐಸಿಸಿ(ICC) ತಿಳಿಸಿದೆ. ಫೈನಲ್‌

ಪಂದ್ಯ ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ (Ahemadabad) ನಡೆಯಲಿದೆ.

46 ದಿನ, 48 ಪಂದ್ಯ:

ಒಟ್ಟು 10 ತಂಡಗಳು 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ (Tourney) ಪಾಲ್ಗೊಳ್ಳುತ್ತಿದ್ದು,ಒಟ್ಟು 48 ಪಂದ್ಯಗಳು ಫೈನಲ್‌ ಸೇರಿ ನಡೆಯಲಿವೆ. ಭಾರತ,ಅಫ್ಘಾನಿಸ್ತಾನ, ಆಸ್ಟ್ರೇಲಿಯಾ,

ಬಾಂಗ್ಲಾದೇಶ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ತಾನ. ನೇರ ಅರ್ಹತೆಯನ್ನು ಈ 8 ತಂಡಗಳು ಗಿಟ್ಟಿಸಿಕೊಂಡಿದ್ದು, ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಇನ್ನೆರಡು ತಂಡಗಳಾದ

ಶ್ರೀಲಂಕಾ (Srilanka) ಹಾಗೂ ನೆದರ್‌ಲೆಂಡ್ಸ್ (Netherland)ತಂಡಗಳು ಲಗ್ಗೆಯಿಟ್ಟಿವೆ.

ರಶ್ಮಿತಾ ಅನೀಶ್

Exit mobile version