Dubai: ಸೋಮವಾರ 13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು (WorldCup Trophy in space) ಬಾಹ್ಯಾಕಾಶದಲ್ಲಿ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಲಾಗಿದೆ.
ಈ ಮೂಲಕ ಯಾವುದೇ ಕ್ರೀಡೆಯ ಮೊದಲ ಟ್ರೋಫಿ ಬಾಹ್ಯಾಕಾಶಕ್ಕೆ ತೆರಳಿದ ಎನಿಸಿಕೊಂಡಿತು. ಅ.5ರಂದು ವಿಶ್ವಕಪ್ ಆರಂಭಗೊಳ್ಳಲಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ಇದರ ಟ್ರೋಫಿ ಟೂರ್ ಸಂಚರಿಸಲಿದೆ.

ಇದರ ಭಾಗವಾಗಿ ಸೋಮವಾರ 1,20,000 ಫೀಟ್ ಎತ್ತರಕ್ಕೆ ಟ್ರೋಫಿಯನ್ನು ಏರ್ ಬಲೂನ್ ಮೂಲಕ ಕಳುಹಿಸಿ ಅನಾವರಣಗೊಳಿಸಲಾಯಿತು. ಐಸಿಸಿ ಸಾಮಾಜಿಕ ತಾಣಗಳಲ್ಲಿ (Social Media)
ಬಾಹ್ಯಾಕಾಶದಲ್ಲೇ ಕ್ಲಿಕ್ಕಿಸಿದ ಟ್ರೋಫಿಯ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಟ್ರೋಫಿ ಟೂರ್ ಇಂಗ್ಲೆಂಡ್ (England), ಫ್ರಾನ್ಸ್, ಪಾಕಿಸ್ತಾನ (Pakistan), ಕುವೈತ್ ಸೇರಿದಂತೆ
ಒಟ್ಟು 18 ರಾಷ್ಟ್ರಗಳಲ್ಲಿ ಸಂಚರಿಸಲಿದ್ದು, ಭಾರತದಲ್ಲಿ ಸೆಪ್ಟೆಂಬರ್ 4ರಂದು (WorldCup Trophy in space) ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್
ಏಕದಿನ ವಿಶ್ವಕಪ್ ಅಧಿಕೃತ ವೇಳಾಪಟ್ಟಿ ಇಂದು ಪ್ರಕಟ
ಇಂದು ಮುಂಬರುವ 13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಮುಂಬೈನಲ್ಲಿ
(Mumbai) ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಕಟಿಸಲಿದೆ. ಟೂರ್ನಿ ಆರಂಭಕ್ಕೆ ಸರಿಯಾಗಿ 100 ದಿನಗಳು ಬಾಕಿ ಇರುವಂತೆ ವೇಳಾಪಟ್ಟಿಯನ್ನು ಐಸಿಸಿಯು (ICC) ಘೋಷಿಸಲಿದೆ. ಟೂರ್ನಿಯ
ತಾತ್ಕಾಲಿಕ ವೇಳಾಪಟ್ಟಿ ಈ ಮೊದಲು ಪ್ರಕಟಗೊಂಡಿತ್ತು. ಬಿಸಿಸಿಐ (BCCI), ಐಸಿಸಿ ಬಹುತೇಕ ಅದೇ ವೇಳಾಪಟ್ಟಿಯನ್ನು ಅಧಿಕೃತಗೊಳಿಸಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಪಂದ್ಯಗಳು ನಡೆಯುವ ಸ್ಥಳಗಳನ್ನು ಬದಲಿಸುವಂತೆ ಮನವಿಯನ್ನು ಸಲ್ಲಿಸಿತ್ತು ಅದನ್ನು ಐಸಿಸಿ ತಿರಸ್ಕರಿದೆ ಎನ್ನಲಾಗಿದೆ. ಹೀಗಾಗಿ ಯಾವುದೇ ಬದಲಾವಣೆಯನ್ನು ತಾತ್ಕಾಲಿಕ
ವೇಳಾಪಟ್ಟಿಯಲ್ಲಿ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅ.5ರಂದು ಟೂರ್ನಿಗೆ ಚಾಲನೆ ಸಿಗಲಿದೆ. ಟೂರ್ನಿಗೆ ಆತಿಥ್ಯವನ್ನು ಬೆಂಗಳೂರು (Bengaluru) ಸೇರಿದಂತೆ 9
ಕ್ರೀಡಾಂಗಣಗಳು ವಹಿಸಲಿದೆ ಎಂದು ತಿಳಿದುಬಂದಿದೆ.
ಡಚ್‌ಗೆ ವೆಸ್ಟ್‌ಇಂಡೀಸ್ ವಿರುದ್ಧ ‘ಸೂಪರ್’ ಜಯ!
ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರೀ ರೋಚಕತೆ ಸೃಷ್ಟಿಸಿದ್ದ ನೆದರ್‌ಲೆಂಡ್ಸ್ (Netherland) ಮತ್ತು ವೆಸ್ಟ್‌ಇಂಡೀಸ್ (West Indies) ವಿರುದ್ಧದ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದೆ.
2 ಬಾರಿ ಚಾಂಪಿಯನ್ ವಿಂಡೀಸ್‌ಗೆ ಇದು ಸತತ 2ನೇ ಸೋಲು.

ಜಿಂಬಾಬ್ವೆಗೆ ಒಟ್ಟು 303 ರನ್ ಗೆಲುವು!
ಜಿಂಬಾಬ್ವೆ (Zinbabwe) ಅಮೆರಿಕ(America) ವಿರುದ್ಧ 304 ರನ್ ಬೃಹತ್ ಗೆಲುವು ಸಾಧಿಸಿದೆ 2ನೇ ಗರಿಷ್ಠ ರನ್ ಅಂತರದಲ್ಲಿ ಪುರುಷರ ಏಕದಿನಲ್ಲಿ ಗೆಲುವು ಎನಿಸಿಕೊಂಡಿತು. ಇತ್ತೀಚೆಗಷ್ಟೇ ,
ಶ್ರೀಲಂಕಾ (Sri Lanka) ವಿರುದ್ಧ 317 ರನ್‌ಗಳಿಂದ ಭಾರತ ಗೆದ್ದಿದ್ದು ಇದೀಗ ದಾಖಲೆಯಾಗಿಯೇ ಉಳಿದಿದೆ. ಸೋಮವಾರದ ಪಂದ್ಯದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ ನಂತರ 6
ವಿಕೆಟ್‌ಗೆ 408 ರನ್ ಗಳಿಸಿತು. ಜಿಂಬಾಬ್ವೆಯ ಮೊದಲ 400 ಮೊತ್ತ ಈ ಏಕದಿನಲ್ಲಿಆಗಿದೆ. ಅಮೆರಿಕ ದೊಡ್ಡ ಗುರಿಯಲ್ಲಿ ಬೆನ್ನತ್ತಿ 104 ರನ್‌ಗೆ ಆಲೌಟಾಯಿತು.
ಸತತ 3 ಪಂದ್ಯದಲ್ಲಿ 5 ವಿಕೆಟ್: ಹಸರಂಗ ದಾಖಲೆ
ಏಕದಿನ ಕ್ರಿಕೆಟ್‌ನಲ್ಲಿ ಸತತ 3 ಪಂದ್ಯಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಸ್ಪಿನ್ನರ್ ಹಾಗೂ ಒಟ್ಟಾರೆ 2ನೇ ಬೌಲರ್ ಎಂದು ಶ್ರೀಲಂಕಾದ ವಾನಿಂಡು ಹಸರಂಗ (Wanindu Hasaranga) ಎನಿಸಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾನುವಾರ 79ಕ್ಕೆ 5 ವಿಕೆಟ್ ಕಿತ್ತು ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಒಮಾನ್ ವಿರುದ್ಧ 13 ರನ್‌ಗೆ, ಯುಎಇ ವಿರುದ್ಧ 24ಕ್ಕೆ 6, 5 ವಿಕೆಟ್ ಪಡೆದಿದ್ದರು. 1990ರಲ್ಲಿ ಸತತ 3 ಪಂದ್ಯಗಳಲ್ಲಿ 5 ವಿಕೆಟ್ ಗೊಂಚಲು ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಪಡೆದಿದ್ದರು.
ರಶ್ಮಿತಾ ಅನೀಶ್