• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಸಮಯಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವದಲ್ಲೇ ಅತ್ಯುತ್ತಮ

Bhavya by Bhavya
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಸಮಯಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ವಿಶ್ವದಲ್ಲೇ ಅತ್ಯುತ್ತಮ
0
SHARES
862
VIEWS
Share on FacebookShare on Twitter

Bengaluru: ವಿಶ್ವದಲ್ಲೇ ಅತ್ಯಂತ ಸಮಯಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ (worlds best Punctuality Airport KIA ) ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ

ನಿಲ್ದಾಣ ಸ್ಥಾನ ಪಡೆದುಕೊಂಡಿದ್ದು, ಜುಲೈನಲ್ಲಿ (July) ವಿಮಾನಗಳ ಆನ್-ಟೈಮ್ ನಿರ್ಗಮನವು ಶೇ 87.51ರಷ್ಟು ಆಗಿದ್ದು, ಆಗಸ್ಟ್‌ನಲ್ಲಿ ಶೇ 89.66ರಷ್ಟಾಗಿದ್ದು, ಸೆಪ್ಟೆಂಬರ್‌ನಲ್ಲಿ ಶೇ 88.51 ರಷ್ಟಾಗಿದೆ.

ಕೆಐಎ ಕಳೆದ ಮೂರು ತಿಂಗಳಲ್ಲಿ ಈ ಮೂಲಕ ಜಾಗತಿಕವಾಗಿ ಅತ್ಯಂತ ಸಮಯಪಾಲನೆ (worlds best Punctuality Airport KIA) ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

worlds best Punctuality Airport KIA

ಕೆಂಪೇಗೌಡ (Kempegowda) ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್‌ನ ಆನ್-ಟೈಮ್ ಪರ್ಫಾರ್ಮೆನ್ಸ್ (On Time Performance ) ಮಾಸಿಕ

ವರದಿಯ ಪ್ರಕಾರ, ಜಾಗತಿಕ ವಿಮಾನ ನಿಲ್ದಾಣದ ಶ್ರೇಯಾಂಕದಲ್ಲಿ ಕಳೆದ ಮೂರು ತಿಂಗಳಿಂದ ಅಗ್ರಸ್ಥಾನದಲ್ಲಿದ್ದು, ಈ ಬಗ್ಗೆ 2023ರ ಸೆಪ್ಟೆಂಬರ್​ನಲ್ಲಿ ಸಿರಿಯಮ್ (Cerium) ಸಂಸ್ಥೆ ಅಧ್ಯಯನ ನಡೆಸಿ

ವರದಿ ಸಲ್ಲಿಸಿದೆ. ವರದಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶೇ 88.51ರಷ್ಟು ವಿಮಾನಗಳು ಸೆಪ್ಟೆಂಬರ್‌ನಲ್ಲಿ ಸಮಯಕ್ಕೆ ಸರಿಯಾಗಿ ನಿರ್ಗಮಿಸಿವೆ ಎಂದು ತಿಳಿಸಿದೆ.

ಅಲ್ಲದೆ ಕಳೆದ ಮೂರು ತಿಂಗಳಲ್ಲಿ ಜಾಗತಿಕವಾಗಿ ಐದು ವಿಮಾನ ನಿಲ್ದಾಣಗಳು ಅಗ್ರ ಸ್ಥಾನದಲ್ಲಿವೆ. ಸಾಲ್ಟ್ ಲೇಕ್ ಸಿಟಿಯ (Salt Lake City) ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್​​​​ನ

(Hyderabad) ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೋಲಿಸ್-ಸೇಂಟ್ ಪಾಲ್​ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲ್​ಡೊರಾಡೊ ಅಂತರಾಷ್ಟ್ರೀಯ

ವಿಮಾನ ನಿಲ್ದಾಣ ಅಗ್ರ ಸ್ಥಾನದಲ್ಲಿವೆ.

ಈ ವಿಮಾನ ನಿಲ್ದಾಣಕ್ಕೆ ಸೆಪ್ಟೆಂಬರ್‌ನಲ್ಲಿ ಶೇ 79.46 ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ಬರುತ್ತಿವೆ. ಏವಿಯೇಷನ್ ಅನಾಲಿಟಿಕ್ಸ್ (Aviation Analytics) ಸಂಸ್ಥೆಯು ವಿಮಾನ ನಿಲ್ದಾಣಗಳನ್ನು

ನಾಲ್ಕು ವಿಭಿನ್ನ ವರ್ಗಗಳಲ್ಲಿ ವರ್ಗೀಕರಿಸಿದೆ. ಜಾಗತಿಕ ವಿಮಾನ ನಿಲ್ದಾಣ (25-40 ಮಿಲಿಯನ್ ಆಸನಗಳು), ದೊಡ್ಡ ವಿಮಾನ ನಿಲ್ದಾಣ (25-40 ಮಿಲಿಯನ್ ಆಸನಗಳು), ಮಧ್ಯಮ ವಿಮಾನ ನಿಲ್ದಾಣ

(15-25 ಮಿಲಿಯನ್ ಆಸನಗಳು), ಸಣ್ಣ ವಿಮಾನ ನಿಲ್ದಾಣ (5-15 ಮಿಲಿಯನ್ ಆಸನಗಳು).

worlds best Punctuality Airport KIA

ಕೆಂಪೇಗೌಡ ವಿಮಾನ ನಿಲ್ದಾಣವು ಕೂಡ ದೊಡ್ಡ ವಿಮಾನ ನಿಲ್ದಾಣದ ಪಟ್ಟಿಯಲ್ಲಿ ಸೇರಿದ್ದು, ಇದು ಕಳೆದ ಮೂರು ತಿಂಗಳುಗಳಲ್ಲಿ ಉನ್ನತ ಮಟ್ಟದ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ. ಕೆಐಎ

(KIA) ದೇಶದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, 2022-2023 ಅವಧಿಯಲ್ಲಿ, ಇದು ಸುಮಾರು 31.91 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ. ರಾಜೀವ್ ಗಾಂಧಿ

ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೆಪ್ಟೆಂಬರ್‌ಗೆ ದೊಡ್ಡ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಮಧ್ಯಮ ಮತ್ತು ಸಣ್ಣ ವಿಮಾನ ನಿಲ್ದಾಣಗಳ ವಿಭಾಗಗಳಲ್ಲಿ ಅಗ್ರ ಐದು ಸ್ಥಾನಗಳಲ್ಲಿ ಯಾವುದೇ ಭಾರತೀಯ ವಿಮಾನ ನಿಲ್ದಾಣಗಳು ಇಲ್ಲ. ವಿಶ್ವದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ವಾಯುಯಾನ

ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಸೌಲಭ್ಯಗಳನ್ನು ಒಳಗೊಂಡಂತೆ ಜಾಗತಿಕವಾಗಿ ಹೆಚ್ಚಿನ ದೇಶಗಳಿಗಿಂತ ಭಾರತವು ಕಳೆದ ದಶಕದಲ್ಲಿ ಹೆಚ್ಚಿನ ವಿಮಾನ

ನಿಲ್ದಾಣಗಳನ್ನು ನಿರ್ಮಿಸಿದೆ.

ನವೆಂಬರ್ 2022 ರಲ್ಲಿ DGCAಯ ಮಾಹಿತಿಯ ಪ್ರಕಾರ, 115 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಕಳೆದ ವರ್ಷವೂ ಬೆಂಗಳೂರಿನ (Bengaluru)

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಸಮಯಪಾಲನೆಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿದ್ದವು.

ಇದನ್ನು ಓದಿ: ಬೆಂಗಳೂರಿನಲ್ಲಿಅಗರಬತ್ತಿ ಕಾರ್ಖಾನೆಗೆ ಬೆಂಕಿ: ಅತ್ತಿಬೆಲೆ ಬೆಂಕಿ ಅವಘಡ ಮಾಸುವ ಮುನ್ನವೇ ಮತ್ತೊಂದು ಬೆಂಕಿ ದುರಂತ

  • ಭವ್ಯಶ್ರೀ ಆರ್.ಜೆ
Tags: AirportbengaluruKarnatakakempegowdainternationalairportKIAPunctualityWorld

Related News

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್

April 17, 2026
ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ
ಪ್ರಮುಖ ಸುದ್ದಿ

ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ

April 17, 2026
ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್
ಪ್ರಮುಖ ಸುದ್ದಿ

ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್

April 17, 2026
ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ
ದೇಶ-ವಿದೇಶ

ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ

April 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.