ಮಧುಮೇಹಿಗಳಿಗೆ ಸಕ್ಕರೆಗಿಂತ ಅಪಾಯಕಾರಿ ಈ ಹಣ್ಣುಗಳು..! ಇರಲಿ ಎಚ್ಚರ..!

ಮಧುಮೇಹ ಇರುವವರು ಆಹಾರದಲ್ಲಿ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ (Worst fruits for diabetes) ನೀಡುತ್ತಾರೆ. ಆದರೆ ಕೆಲವು ಹಣ್ಣುಗಳನ್ನು ತಿನ್ನಬಾರದು ಎನ್ನುವ

ಸೂಚನೆ ನೀಡುವುದನ್ನು ಮಾತ್ರ ಮರೆತು ಬೀಡುತ್ತಾರೆ. ಹೌದು, ಹಣ್ಣುಗಳನ್ನು ತಿನ್ನುವುದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಕೆಲವು ಹಣ್ಣುಗಳನ್ನು ಅತಿಯಾಗಿ ಸೇವಿದರೆ

ಅವು ಸಕ್ಕರೆಗಿಂತ ಅಪಾಯಕಾರಿಯಾಗುತ್ತವೆ. ಹೀಗಾಗಿ ಮಧುಮೇಹಿಗಳು ಯಾವ ಹಣ್ಣನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ತಿಳುವಳಿಕೆಯನ್ನು ಹೊಂದುವುದು ಅವಶ್ಯಕವಾಗಿದೆ.

ಕೆಲವು ಹಣ್ಣುಗಳು ಹೆಚ್ಚು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ. ಹೀಗಾಗಿ ಅವುಗಳನ್ನು ತಿನ್ನುವುದು ಸಕ್ಕರೆಗಿಂತ ಹೆಚ್ಚು ಅಪಾಯಕಾರಿ. ಕೆಲವು ಹಣ್ಣುಗಳ GI ಮೌಲ್ಯವು ಹೆಚ್ಚಿದ್ದು, ಅದನ್ನು

ಸೇವಿಸಿದ ತಕ್ಷಣ ರಕ್ತದ ಸಕ್ಕರೆಯು 200 mg/dL ಅನ್ನು ಮೀರಬಹುದು. ಹೀಗಾಗಿ ಮಧುಮೇಹಿಗಳು ಎಚ್ಚರಿಕೆಯಿಂದ ಸೇವನೆ ಮಾಡಬೇಕಾದ ಕೆಲವು ಹಣ್ಣುಗಳ ಮಾಹಿತಿ ಇಲ್ಲಿದೆ ನೋಡಿ.

ಸಮಾಧಿಯಾಯ್ತಾ ಸೌಜನ್ಯಾ ಪ್ರಕರಣ? ಸೌಜನ್ಯ ಸಾವಿಗೆ ನ್ಯಾಯ ಸಿಗೋದು ಮರೀಚಿಕೆಯಾ?

ಬಾಳೆಹಣ್ಣು: ಬಾಳೆಹಣ್ಣು ತಿನ್ನುವುದರಿಂದ ನಾರಿನಂಶ, ಪ್ರೊಟೀನ್ (Protein), ವಿಟಮಿನ್, ಮ್ಯಾಂಗನೀಸ್ (Manganese), ಪೊಟಾಶಿಯಂ ಹೀಗೆ ಹಲವು ಪೋಷಕಾಂಶಗಳು ದೊರೆಯುತ್ತವೆ.

ಆದರೆ NCBI ಅಧ್ಯಯನದ ಪ್ರಕಾರ ಬಾಳೆಹಣ್ಣುಗಳನ್ನು ತಿನ್ನುವುದು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು (Carbohydrates)

ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು (Worst fruits for diabetes) ಹೆಚ್ಚಿಸುತ್ತವೆ.

ಕಲ್ಲಂಗಡಿ ಹಣ್ಣು : ಕಲ್ಲಂಗಡಿ ಹಣ್ಣಿನ GI ಮೌಲ್ಯವು ಸುಮಾರು 72 ಆಗಿದ್ದು, ಇದು ಮಧುಮೇಹಿಗಳಿಗೆ ತುಂಬಾ ಅಪಾಯಕಾರಿಯಾಗಿದೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ಹೆಚ್ಚು ತಿನ್ನಬಾರದು.

ಮಾವು : ಮಾವಿನಹಣ್ಣು ಮಧುಮೇಹ ರೋಗಿಗಳಿಗೆ ಇದು ಉತ್ತಮವಲ್ಲ. ಇದು ನೈಸರ್ಗಿಕ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ, ಹೆಚ್ಚಿನ GI ಮೌಲ್ಯದ ಹೊಂದಿರುವುದರಿಂದ

ಇದನ್ನು ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬಾರದು.

ಖರ್ಜೂರ : ಖರ್ಜೂರದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ, ಒಣಗಿದ ನಂತರ ಅದು ಬಹಳಷ್ಟು ಹೆಚ್ಚಾಗುತ್ತದೆ. ಹೀಗಾಗಿ ಮಧುಮೇಹಿಗಳು ಇದನ್ನು ತಿನ್ನಬಾರದು. ಒಣಗಿದ ದ್ರಾಕ್ಷಿ ತಿನ್ನುವುದರಿಂದ

ರಕ್ತದಲ್ಲಿ ಶೀಘ್ರವಾಗಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.

ಅನಾನಸ್ : ಮಧುಮೇಹ ರೋಗಿಗಳು ಅನಾನಸ್ ಹಣ್ಣನ್ನು ಮಿತವಾಗಿ ತಿನ್ನಬೇಕು.ಈ ಹಣ್ಣನ್ನು ಹೆಚ್ಚು ತಿನ್ನುವುದು ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಹೀಗಾಗಿ

ಅಪರೂಪಕ್ಕೊಮ್ಮೆ ಮಿತವಾಗಿ ಸೇವಿಸಬೇಕು.

ಮಹೇಶ್

Exit mobile version