ಬಾದಾಮಿ ದೂರ, ಬೆಂಗಳೂರಿನ ಕ್ಷೇತ್ರಗಳನ್ನು ಆರಿಸಿಕೊಳ್ಳಲು ನಮ್ಮ ತಂದೆಗೆ ಆಸಕ್ತಿ : ಯತೀಂದ್ರ ಸಿದ್ದರಾಮಯ್ಯ

Siddaramaiah

ನಮ್ಮ ತಂದೆಯವರಿಗೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ(Vidhanasabha Election) ಅವರ ಕೊನೆಯ ಚುನಾವಣೆಯಾಗಲಿದೆ. ವಯಸ್ಸಿನ ಕಾರಣದಿಂದ ಬೆಂಗಳೂರಿನಿಂದ(Bengaluru) ಬಾದಾಮಿಗೆ(Badami) ಹೋಗಿ ಬರಲು ಅವರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳನ್ನು ಆರಿಸಿಕೊಳ್ಳಲು ನಮ್ಮ ತಂದೆಯವರಿಗೆ ಹೆಚ್ಚು ಆಸಕ್ತಿ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ತಂದೆಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ರಾಜ್ಯದ ಅನೇಕ ಕ್ಷೇತ್ರಗಳಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ಬಗ್ಗೆಯೂ ಅವರು ಸಂಪೂರ್ಣ ಮಾಹಿತಿ ಹೊಂದಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಉತ್ತಮ ಎಂಬುದು ಅವರಿಗೆ ತಿಳಿದಿದೆ. ಬೇಕಿದ್ದರೆ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡಲು ನಾನು ಸಿದ್ದನಿದ್ದೇನೆ. ತಂದೆಯವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದರು.

ಇನ್ನು ನಾನು ವೃತ್ತಿಯಲ್ಲಿ ವೈದ್ಯನಾದರು, ರಾಜಕೀಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ. ಬಾಲ್ಯದಿಂದಲೂ ಮನೆಯಲ್ಲಿ ತಂದೆಯವರ ಆಡಳಿತ, ಕಾರ್ಯವೈಖರಿಯನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರ ಪ್ರಾಮಾಣಿಕತೆ, ಜನಸೇವೆ ಬಗೆಗೆ ಅವರಿಗಿರುವ ಬದ್ದತೆ ನನಗೆ ಸ್ಪೂರ್ತಿಯಾಗಿದೆ. ಅವರು ಎಂದಿಗೂ ತತ್ವ, ಸಿದ್ದಾಂತರದ ವಿಚಾರದಲ್ಲಿ ರಾಜಿಯಾದವರಲ್ಲ. ಜನಪರ ಹೋರಾಟಗಳ ಮೂಲಕ ರಾಜಕೀಯ ಮಾಡಿದವರು ಎಂದರು.

Exit mobile version