ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!

Yathnal

ಬಿಜೆಪಿ(BJP) ಪಕ್ಷಕ್ಕೆ ಡಿ.ಕೆ.ಶಿವಕುಮಾರ್(DK Shivkumar) ಅವರಂತ ಕಳ್ಳರ ಅವಶ್ಯಕತೆಯಿಲ್ಲ.

ವಿಜಯಪುರ(Vijayapura) ಜಿಲ್ಲೆಯಲ್ಲೂ ಅಂತಹ ಇಬ್ಬರು ಕಳ್ಳರು ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yathnal) ಹೇಳಿದರು. ವಿಜಯಪುರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ, ಇಡಿ, ಸುಪ್ರೀಂಕೋರ್ಟ್, ಸಿಬಿಐನಂತ ಸ್ವಾಯತ್ತ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡುತ್ತವೆ. ಹೀಗಾಗಿ ಡಿ.ಕೆ.ಶಿವಕುಮಾರ್(DK Shivkumar) ಮೇಲೆ ಇಡಿ ಚಾರ್ಚ್‍ಶೀಟ್ ಸಲ್ಲಿಸಿರುವುದಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ.

ಈ ಹಿಂದೆ ಬಿಜೆಪಿ ನಾಯಕ ಜಿ.ಎಂ.ಸಿದ್ದೇಶ್ವರ್, ಪ್ರಭಾಕರ ಕೋರೆ ಮನೆ ಮೇಲೂ ಇಡಿ ದಾಳಿ ನಡೆಸಿತ್ತು. ಅನೇಕ ಬಿಜೆಪಿ ನಾಯಕರ ಮೇಲೂ ಇಡಿ ದಾಳಿ ನಡೆಸಿದೆ. ನಾಳೆ ನನ್ನ ವಿರುದ್ದವೂ ಲೋಪ ಕಂಡು ಬಂದಲ್ಲಿ ನನ್ನ ಮನೆ ಮೇಲೂ ದಾಳಿ ನಡೆಸಬಹುದು. ಹೀಗಾಗಿ ಇದಕ್ಕೆಲ್ಲಾ ರಾಜಕೀಯ ಬೆರೆಸುವುದು ಒಳ್ಳೆಯದಲ್ಲ ಎಂದು ಇಡಿ ಕಾರ್ಯವನ್ನು ಶ್ಲಾಘಿಸಿದರು. ಇನ್ನು ಡಿಕೆಶಿ ಅವರಂತ ಕಳ್ಳರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷದ ಸಿದ್ದಾಂತ ಎಲ್ಲಿ ಉಳಿಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಲೂಟಿ ಮಾಡಿರುವ ವಿಜಯಪುರ ಜಿಲ್ಲೆಯ ಇಬ್ಬರೂ ಕಳ್ಳರು ಈಗ ಬಿಜೆಪಿ ಸೇರಲು ಮುಂದಾಗಿದ್ದಾರೆ.

ಹೀಗಾದಲ್ಲಿ ಪಕ್ಷಕ್ಕಾಗಿ ದುಡಿದವರು ಎಲ್ಲಿ ಹೋಗಬೇಕು. ಮೇಲಿನವರು ಇಂತವರನ್ನು ಪಕ್ಷಕ್ಕೆ ಕರೆತಂದರೆ ಕಾರ್ಯಕರ್ತರು ಎಲ್ಲಿ ಹೋಗಬೇಕೆಂದು ವರಿಷ್ಠರನ್ನು ಪ್ರಶ್ನಿಸುತ್ತೇನೆ ಎಂದರು. ಇನ್ನು ವಿಜಯಪುರದಲ್ಲಿ ಅಣ್ಣ ಕಾಂಗ್ರೆಸ್‍ನಲ್ಲಿದ್ದು, ಸೋನಿಯಾ ಗಾಂಧಿಗಾಗಿ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ. ಇತ್ತ ತಮ್ಮ ನರೇಂದ್ರ ಮೋದಿಯವರಿಗಾಗಿ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ. ಇಂತವರಿಗೆ ಪಕ್ಷದಲ್ಲಿ ಅವಕಾಶ ನೀಡದೇ,

ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂದು ಪರೋಕ್ಷವಾಗಿ ಶಿವಾನಂದ ಪಾಟೀಲ್ ಮತ್ತು ಅವರ ಸಹೋದರ ವಿಜುಗೌಡ ಪಾಟೀಲ್‍ರನ್ನು ಕುಟುಕಿದರು.

Exit mobile version