ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌!

Yadgiri: ಕರ್ನಾಟಕದಲ್ಲಿ (Karnataka) ಮುಂದಿನ ಸಲ ನಾನೇ ಸಿಎಂ(CM) ಆಗ್ತಿನಿ, ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagowda Patila Yatnal) ಅವರ ಹೇಳಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಯಾದಗಿರಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಯತ್ನಾಳ್, ಕರ್ನಾಟಕದಲ್ಲಿ (Karnataka) ನಾನು ಬರ್ತೀನಿ, ಸಿಎಂ ಆಗ್ತೀನಿ ಎಂದಿದ್ದಾರೆ. ಯಾರಾದ್ರೂ ಮುಖ್ಯಮಂತ್ರಿ ಆಗ್ತೀನಿ ಅಂತಾ ಅಂಗಿ ಹೊಲಿಸಿಕೊಂಡು ಕುಂತಾರ ಕುಳಿತುಕೊಳ್ಳಲಿ ಅಂತ ತಮ್ಮ ರಾಜಕೀಯ ವಿರೋಧಿಗಳಿಗೆ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್‌ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಇವರ ಪುತ್ರನೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈಸೂರು-ಕೊಡಗು(Mysore-Kodagu) ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಯತ್ನಾಳ್, ನನಗೆ ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರದಿಂದ ಆಯ್ಕೆ ಕೊಟ್ಟಿದ್ದರು. ನನಗೆ ಕೇಂದ್ರ ಮಂತ್ರಿ ಮಾಡುತ್ತೇನೆ ಅಂದರೂ ನಿಲ್ಲುವುದಿಲ್ಲ ಅಂದಿದ್ದೇನೆ. ನಾನು ದೆಹಲಿಗೆ ಹೋದರೆ ಇಲ್ಲಿ ಅಪ್ಪ-ಮಗನ ರಾಜ್ಯ ನಡೆಯುತ್ತದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.ಯಾರು ಏನೇ ಪಿತೂರಿ ಮಾಡಿದರೂ ನಾವು ಕಿತ್ತೂರ್ ರಾಣಿ ಚೆನ್ನಮ್ಮ ವಂಶಸ್ಥರು. ನಾವು ಯಾರಿಗೂ ಅಂಜೋದಿಲ್ಲ. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ . ಲೋಕಸಭೆ ಚುನಾವಣೆ(Lok Sabha Elections) ಬಳಿಕ ನಮ್ಮ ಪಕ್ಷದ ಹೊಂದಾಣಿಕೆ ಲೀಡರ್ ಗಳ ಅಂತ್ಯ ಆಗುತ್ತೆ ಎಂದು ಯತ್ನಾಳ್‌ ಹೇಳಿದ್ದಾರೆ.

Exit mobile version