5 ವರ್ಷದಲ್ಲಿ 166 ಎನ್ಕೌಂಟರ್, 58,648 ಅಪರಾಧಿಗಳ ವಿರುದ್ಧ ಕ್ರಮ, ಕ್ರಿಮಿನಲ್ಗಳ 4,400 ಕೋಟಿ ರೂ.ಆಸ್ತಿ ವಶ : ಯೋಗಿ ಆದಿತ್ಯನಾಥ್

Lucknow : ನಮ್ಮ ಸರ್ಕಾರ ಅಪರಾಧಿಗಳಿಗೆ ಯಾವುದೇ ಅವಕಾಶವನ್ನು (Yogi Adityanath Power) ನೀಡುವುದಿಲ್ಲ. ಅಪರಾಧಿಗಳ ವಿರುದ್ದ ನಮ್ಮ ಸರ್ಕಾರ “ಶೂನ್ಯ ಸಹಿಷ್ಣುತೆಯ”ನೀತಿಯನ್ನು  ಪಾಲಿಸುತ್ತದೆ.

ಯಾವುದೇ ಮುಲಾಜಿಲ್ಲದೇ ಕ್ರಿಮಿನಲ್ಗಳ ವಿರುದ್ದ ನಾವು ಕ್ರಮ ಕೈಗೊಳ್ಳುತ್ತೇವೆ. ಈ ಸರ್ಕಾರದ ಅವಧಿಯಲ್ಲಿ ಅಪರಾಧಿಗಳು ಒಂದೋ ಜೈಲಿನಲ್ಲಿ ಇರುತ್ತಾರೆ ಅಥವಾ ಸಾಯುತ್ತಾರೆ.

ಉತ್ತರಪ್ರದೇಶ (Uttarpradesh) ರಾಜ್ಯದಲ್ಲಿ ಅಪರಾಧಿಗಳನ್ನು ಮುಕ್ತವಾಗಿ ಸಂಚರಿಸಲು ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪೊಲೀಸ್ ಸ್ಮಾರಕ ದಿನದ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ(Yogi Adityanath PowerYogi Adityanath Power) ಐದು ವರ್ಷಗಳ ಅವಧಿಯಲ್ಲಿ 166 ಕ್ರಿಮಿನಲ್ಗಳನ್ನು ಎನ್ಕೌಂಟರ್ ಮಾಡಿದ್ದು,

https://youtu.be/sfkpJuX5qVs ಸಿಹಿ-ಕಹಿ ಸತ್ಯ! ಸ್ವೀಟ್ ಅಲ್ಲ ರೋಗಗಳ ಕೂಟ.

58,648 ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.  ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 807 ಮಂದಿಯನ್ನು ಬಂಧಿಸಲಾಗಿದೆ. ಅದೇ ರೀತಿ ಅಪರಾಧಿಗಳಿಗೆ ಸೇರಿದ 4,400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಅಪರಾಧಿಗಳ ವಿರುದ್ದ ನಮ್ಮ ಈ ಹೋರಾಟದಲ್ಲಿ ಕಳೆದ ಐದು ವರ್ಷಗಳಲ್ಲಿ 13 ಪೊಲೀಸ್ ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 

https://fb.watch/gjAyYd5mEj/ ಸಿಹಿ-ಕಹಿ ಸತ್ಯ! ಸ್ವೀಟ್ ಅಲ್ಲ ರೋಗಗಳ ಕೂಟ.

ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗುವಲ್ಲಿ ಶ್ರಮ ವಹಿಸುತ್ತಿರುವ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪೊಲೀಸರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ.

https://vijayatimes.com/state-govt-responds-to-kantara/

ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಅಗತ್ಯ ನೆರವನ್ನು ಒದಗಿಸುತ್ತೇವೆ ಎಂದು ಯೋಗಿ ಆದಿತ್ಯನಾಥ್ (Yogi Adityanath Power) ಇದೆ ವೇಳೆ ಭರವಸೆ ನೀಡಿದರು.

ಉತ್ತರಪ್ರದೇಶದಲ್ಲಿ ಅಪರಾಧಿಗಳಿಂದ  ವಶಪಡಿಸಿಕೊಳ್ಳಲಾದ 4,400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಮತ್ತು ಬಾಲಕಿಯರಿಗೆ ಶಾಲೆ ನಿರ್ಮಿಸಲು ಬಳಸಿಕೊಳ್ಳುತ್ತೇವೆ. ಈ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಯೋಗಿ ತಿಳಿಸಿದರು.
Exit mobile version