Bengaluru : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (yogi rajanikanth viral news) ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ
ಟೀಕೆಗಳ ಕುರಿತು ಮೌನ ಮುರಿದಿರುವ ನಟ ರಜನಿಕಾಂತ್ (Rajinikanth) ಅವರು, ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರಜನಿಕಾಂತ್ (Rajinikanth) ಅವರು, ನಾನು ಬಾಲ್ಯದಿಂದಲೂ ಸಂತರು , ಸನ್ಯಾಸಿಗಳು, ಗುರುಗಳನ್ನು ಕಂಡರೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವ ಅಭ್ಯಾಸವನ್ನು
ರೂಢಿಸಿಕೊಂಡಿದ್ದೇನೆ. ಯೋಗಿಗಳು ಅಥವಾ ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಅವರ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ನಾನು ಅದನ್ನು ಮಾಡಿದ್ದೇನೆ.
ನನ್ನ ವೈಯಕ್ತಿಕ ಬದುಕಿನಲ್ಲಿ ಯೋಗಿಗಳು ಅಥವಾ ಸನ್ಯಾಸಿಗಳಿಗೆ ವಿಶೇಷವಾದ ಸ್ಥಾನವಿದೆ. ಈ ನನ್ನ ಅಭ್ಯಾಸ ನನಗೆ ಸಾಕಷ್ಟು ಒಳ್ಳೆಯದನ್ನು ಮಾಡಿದೆ. ಈ ಕುರಿತು ಬೇರೆಯವರು ಟೀಕೆ ಮಾಡುವ ಅಗತ್ಯವಿಲ್ಲ.
ಇದು ನನ್ನ ವೈಯಕ್ತಿಕ ಅಭ್ಯಾಸ ಅಥವಾ ನಂಬಿಕೆ. ಈ ನನ್ನ ಅಭ್ಯಾಸ ಬೇರೆಯವರಿಗೆ ನೋವುಂಟು ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ರಜನಿಕಾಂತ್ ಹೇಳಿದ್ದಾರೆ.
ವಿಷವಾದ ಸೂಳೆಕೆರೆ: ಏಷ್ಯಾದ 2ನೇ ಅತಿ ದೊಡ್ಡ ಕೆರೆಗೆ ಬೇಕು ಕಾಯಕಲ್ಪ
ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಜನಿಕಾಂತ್ ಅವರು ತಮ್ಮ ಜೈಲರ್ (Jailer) ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು, ಇದರಲ್ಲಿ ಯುಪಿ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್, ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya) ಭಾಗವಹಿಸಿದ್ದರು. ನಂತರ ರಜನಿಕಾಂತ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ
ಅಖಿಲೇಶ್ ಯಾದವ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ ಅವರ ಪಾದಗಳನ್ನು ಮುಟ್ಟಿ ರಜನಿಕಾಂತ್ ಆಶೀರ್ವಾದ
ಪಡೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧ (yogi rajanikanth viral news) ಅಭಿಪ್ರಾಯಗಳು ವ್ಯಕ್ತವಾಗಿದ್ದರು.

ರಜನಿಕಾಂತ್ ಅವರ ಈ ವಿಡಿಯೋ ಎಲ್ಲೆಡೆ ವೈರಲ್ (Viral) ಆಗುತ್ತಿದ್ದಂತೆ, ವೀಡಿಯೊಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, “ತಿಂಗಳ ಅತಿ ದೊಡ್ಡ ಫೇಸ್ಪಾಮ್ ಮತ್ತು ಕ್ರಿಂಗ್ಫೆಸ್ಟ್ ವೀಡಿಯೊ” ಎಂದು ಹೇಳಿದರೆ,
ಮತ್ತೊಂದು ಟ್ವೀಟ್ನಲ್ಲಿ, “ಏನು ಪತನ..!! 72 ವರ್ಷದ ರಜನಿಕಾಂತ್ 51 ವರ್ಷದ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ್ದಾರೆ. “ಇದು ಆಘಾತಕಾರಿ!” ” ಎಂದು ಬರೆದುಕೊಂಡಿದ್ದಾರೆ.
ಈ ಮದ್ಯೆ ಹಲವಾರು ಜನರು ರಜನಿಕಾಂತ್ ಅವರನ್ನು ಸಮರ್ಥಿಸಿಕೊಂಡಿದ್ದು, ಯುಪಿ (UP) ಮುಖ್ಯಮಂತ್ರಿಯಾಗುವುದರ ಜೊತೆಗೆ ಯೋಗಿಜೀ ಅವರು, ಒರ್ವ ಉನ್ನತ ನಾಥಯೋಗಿ ಮತ್ತು
ಸುಪ್ರಸಿದ್ಧ ಗೋರಖನಾಥ ಮಠ ಪೀಠಾಧಿಪತಿಗಳು. ಅವರ ಪಾದಗಳನ್ನು ಮುಟ್ಟುವುದು ಅವರ ಪರಂಪರೆಗೆ ನೀಡುವ ಗೌರವ” ಎಂದಿದ್ದಾರೆ.