ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಭಾರತ(India) ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ(Independence) ಕೊಡಿಸಲು ಇತಿಹಾಸವನ್ನೇ ಸೃಷ್ಟಿಸಿದ ವೀರ ಯೋಧರನ್ನು(Soldiers) ನಾವು ಸ್ಮರಿಸಲೇಬೇಕು. ಚರಿತ್ರೆಯ ಪುಟದಲ್ಲಿ ಮರೆಯಾದ ಅನೇಕ ಹುತಾತ್ಮರ(Martyrs) ತ್ಯಾಗ, ಬಲಿದಾನದ ಫಲವೇ ಇಂದು ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ರ್ಯ. ಬ್ರಿಟಿಷರಿಂದ(British) ಭಾರತವನ್ನು ಸ್ವತಂತ್ರಗೊಳಿಸಲು ಪ್ರಾಣ ತ್ಯಾಗ ಮಾಡಿದ ವೀರರ ಸಾಲಿನಲ್ಲಿ ಮಕ್ಕಳು ಕೂಡ ಸೇರಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ “ಬಾಜಿ ರಾವತ್”(Baji Rout) ಅವರ ಹೋರಾಟದ ಸಾಹಸಗಾಥೆ ಇಲ್ಲಿದೆ. ಕೇವಲ 12 ವರ್ಷದಲ್ಲಿಯೇ ಹುತಾತ್ಮರಾದ ಇವರ ಕಥೆ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಈ ಮಣ್ಣಿನಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ ಬಾಜಿರಾವ್ ರಾವತ್. ಪ್ರಾಣತ್ಯಾಗ ಮಾಡುವಾಗ ಅವರ ವಯಸ್ಸು ಕೇವಲ ಹನ್ನೆರಡು ವರ್ಷ. ಒರಿಸ್ಸಾದ(Odisha) ಬ್ರಹ್ಮಣಿ ನದಿಯಲ್ಲಿ ಅಂಬಿಗನಾಗಿ(Sailor) ಸೇವೆ ಸಲ್ಲಿಸುತ್ತಿದ್ದ ವ್ತಕ್ತಿಯ ಕಿರಿಯ ಮಗ ಇವರು.

ಚಿಕ್ಕ ವಯಸ್ಸಲ್ಲೇ ಜನರ ಪಕ್ಷ ಬನರ್ ಸೇನಿ ಪ್ರಜಾಮಂಡಲದ ಸಕ್ರಿಯ ಸದಸ್ಯರಾಗಿದ್ದ ಇವರು, ರಾತ್ರಿ ವೇಳೆ ನದಿಯಲ್ಲಿ ಕಾವಲು ಕಾಯುತ್ತಿದ್ದರು. 1938ರ ಅಕ್ಟೋಬರ್ 11 ರಂದು ದೆನ್ಕನಲ್ ಜಿಲ್ಲೆಯ ಭುಬನ್ ಪ್ರದೇಶದ ನೀಲ ಕಾಂತಪುರ ಘಾಟ್ ಸಮೀಪ ಬ್ರಿಟಿಷ್ ಪೊಲೀಸ್(British Police) ಪಡೆ ತಮ್ಮನ್ನು ದೋಣಿ ಮೂಲಕ ನದಿಯ ಆಚೆ ಬದಿಗೆ ಕರೆದೊಯ್ಯುವಂತೆ ಇವರಿಗೆ ಸೂಚಿಸಿದರು. ಬ್ರಿಟಿಷರ ಕ್ರೌರ್ಯದ ಬಗ್ಗೆ ಕೇಳಿ ತಿಳಿದಿದ್ದ ರಾವತ್ ಅವರು, ಹೇಗಾದರೂ ಬ್ರಿಟಿಷರ ಯೋಜನೆಗೆ ಅಡ್ಡಗಾಲು ಹಾಕಬೇಕೆಂದು ಯೋಚಿಸಿದರು.

ಹೀಗಾಗಿ ಬ್ರಿಟಿಷರ ಸೂಚನೆಯನ್ನು ಪಾಲಿಸಲು ರಾವತ್ ಅವರು ಒಪ್ಪಲಿಲ್ಲ. ಆಗ ಕೋಪಗೊಂಡ ಬ್ರಿಟಿಷ್ ಪೊಲೀಸರು, ರಾವತ್ ಮತ್ತು ಇನ್ನಿಬ್ಬರು ಅಂಬಿಗರನ್ನು ಅಮಾನುಷವಾಗಿ ಸ್ಥಳದಲ್ಲೇ ಗುಂಡಿಟ್ಟು ಹತ್ಯೆ ಮಾಡಿದರು. ಹೀಗೆ ಕೇವಲ ಹನ್ನೆರಡು ವಯಸ್ಸಿನಲ್ಲಿಯೇ ಇಷ್ಟೊಂದು ದೇಶ ಪ್ರೇಮ ಹೊಂದಿದ್ದ ಬಾಜಿ ರಾವತ್ ಅವರು, ಈಗಿನ ಮಕ್ಕಳಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ ಎಂಬುದು ಭಾರತೀಯರಿಗೆ ಹೆಮ್ಮೆಯ ಸಂಗತಿ.

Exit mobile version