ಪ್ರೀತಿಯಲ್ಲಿ ಹತಾಶರಾಗಿದ್ದವರಿಗೆ ಪ್ರೀತಿ ಹೇಳಿಕೊಟ್ಟ ಯೂತ್‍ಫುಲ್ ಸಿನಿಮಾ ‘ವಾಸಂತಿ ನಲಿದಾಗ’

Sandlwood : ಸಿನಿಮಾ ಅಂದಮೇಲೆ ಎಲ್ಲಾ ರೀತಿಯ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ, ಆದರೆ ಸಿನಿರಸಿಕರು ಕೆಲವು ಸನ್ನಿವೇಶಗಳನ್ನು ಇಷ್ಟ ಪಡುವುದಿಲ್ಲ ಹಾಗೂ ಇನ್ನು ಕೆಲವರು ಇಂತಹದ್ದೆ ಅಂದರೆ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ (Youthful movie Vasanti Nalidaga),

ಲವ್ ಸೀನ್ಸ್, ಕಾಲೇಜು ಸ್ಟೋರಿ ಈ ರೀತಿಯ ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ.ಇದೆಲ್ಲವನ್ನು ಒಳಗೊಂಡಿರುವ ಸಿನಿಮಾ 'ವಾಸಂತಿ ನಲಿದಾಗ'.

ಹೌದು ಈ ಸಿನಿಮಾದ ವಿಶೇಷತೆಯೇ ಇದು, ಒಂದು ಸಿನಿಮಾದಲ್ಲಿ ಎಲ್ಲಾ ರೀತಿಯ ಎಂಟರ್‍ಟೈನ್‍ಮೆಂಟ್ ಇದ್ದರೆ ಸಿನಿಪ್ರಿಯರು (Youthful movie Vasanti Nalidaga) ನೋಡದೆ ಇರಲು ಸಾಧ್ಯವೇ,

ವಾಸಂತಿ ನಲಿದಾಗ’ ಸಿನಿಮಾ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಭರವಸೆಯನ್ನ ಮೂಡಿಸಿದ ಸಿನಿಮಾ ಆಗಿದೆ.

ವಾಸಂತಿ ನಲಿದಾಗ’ ಈಗ ಸ್ಯಾಂಡಲ್‍ವುಡ್‍ನಲ್ಲಿ ಮನೆ ಮಾತಾಗಿರುವ ಸಿನಿಮಾ, ಹೊಸಬರ ಸಿನಿಮಾ ಹೊಸ ಕಥೆ ಸಿನಿಮಾ ನೋಡಿದ ವೀಕ್ಷಕರು ಈ ಸಿನಿಮಾವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೊ ಎಂಬ ಭಯ, ಕುತೂಹಲ ಈ ಸಿನಿಮಾ ತಂಡಕ್ಕು ಇತ್ತು,

ಇದನ್ನೂ ಓದಿ : https://vijayatimes.com/rahul-gandhi-statement/

ಆದರೆ ಸಿನಿಮಾ ನೋಡಿದ ವೀಕ್ಷಕರ ಪ್ರತಿಕ್ರಿಯೆ ಸಿನಿಮಾ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.

ತನ್ನದೆ ಆದ ಕ್ರೇಜ್ ಹುಟ್ಟು ಹಾಕಿಸಿರುವವಾಸಂತಿ ನಲಿದಾಗ’ ಸಿನಿಮಾ ಈಗ 4ನೇ ವಾರಕ್ಕೆ ಕಾಲಿಟ್ಟಿದ್ದು,ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ.

ಈ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ (Sai kumar) ಹಾಗೂ ಸುಧಾರಾಣಿ (Sudharani) ನಾಯಕನ ತಂದೆ ತಾಯಿಯ ಪಾತ್ರ ಮಾಡಿದ್ದು,ತಂದೆಯ ಪಾತ್ರ ಅತ್ಯುತ್ತಮವಾಗಿ ಮೂಡಿಬಂದಿದೆ.

ಮೊದಲೇ ಹೇಳಿದ ಹಾಗೆ ಈ ಸಿನಿಮಾ ಎಲ್ಲ ರೀತಿಯ ಸನ್ನಿವೇಶವನ್ನು ಹೊಂದಿರುವುದರಿಂದ ಮೊದಲು ಈ ಸಿನಿಮಾದಲ್ಲಿ ಎಲ್ಲರ ಗಮನಸೆಳೆದಿದ್ದೆ ತಂದೆ ಮಗನ ಬಾಂಧವ್ಯ,

ಒಬ್ಬ ತಂದೆ ತನ್ನ ಮಗನ ಮೇಲೆ ಇಟ್ಟಿರುವ ಅತೀಯಾದ ಪ್ರೀತಿ, ಕಾಳಜಿ, ನಂಬಿಕೆ, ಭರವಸೆ, ಮಗ ಆಗಿದ್ದರು ಸ್ನೇಹಿತರಂತೆ ಇರುವ ಇವರ ಆತ್ಮಿಯತೆ, ವೀಕ್ಷಕರು ನಾವು ಈ ರೀತಿಯೆ ಇರಬೇಕೆಂಬ ಆಸೆಯಾಗುವಂತೆ ಇವರ ದೃಷ್ಯ ಮೂಡಿಬಂದಿದೆ.

ಇನ್ನು ನಾಯಕನಾಗಿ ರೋಹಿತ್ ಶ್ರೀಧರ್(Rohit Sridhar) ರವರು ನಟಿಸಿದ್ದು ತಮ್ಮ ಮೊದಲನೆ ಸಿನಿಮಾದಲ್ಲೆ ಜನ ಮೆಚ್ಚುಗೆಯನ್ನ ಗಳಿಸಿದ್ದಾರೆ,

ಈ ಸಿನಿಮಾದಲ್ಲಿ ರೋಹಿತ್ ಶ್ರೀಧರ್ ರವರು ಸಂಜು’ ಪಾತ್ರವನ್ನು ಮಾಡಿದ್ದು ಇವರಿಗೆ ನಾಯಕಿಯರಾಗಿ ಜೀವಿತಾ ವಶಿಷ್ಟ ಮತ್ತು ಭಾವನ ಶ್ರೀನಿವಾಸ್ ಈ ಚಿತ್ರದಲ್ಲಿ ನಟಿಸಿದ್ದಾರೆ.

https://youtu.be/xapQwnX0GIo ಬೆಂಗಳೂರಿನ ‘ಕಿಲ್ಲರ್ ರಸ್ತೆ’ ಗುಂಡಿಗಳ ವಿಚಿತ್ರ ಕಥೆ.

ಒಂದು ಸುಂದರ ಪ್ರೇಮ ಕಥೆಯಾಗಿರುವ ಈ ಸಿನಿಮಾ ನಿರಾಶೆ ಹೊಂದಿರುವ ಪ್ರತಿಯೊಬ್ಬ ಪ್ರೇಮಿಗು ಹೊಸ ಬದುಕನ್ನು ರೂಪಿಸುವ ಧೈರ್ಯವನ್ನು ಭರವಸೆಯನ್ನು ನೀಡಿದೆ.

ಸಿನಿಮಾದಲ್ಲಿ ನಾಯಕ ಪ್ರೀತಿಯಲ್ಲಿ ಮೋಸ ಹೋದಾಗ ಹತಾಶೆಯಾಗದೆ ಯಾವ ರೀತಿ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾನೆ ಅನ್ನೊದನ್ನು ಧನಾತ್ಮಕವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ,

ಇದರಿಂದ ಯುವಕರಿಗೆ ಹೊಸ ಸಂದೇಶವನ್ನು ಈ ಸಿನಿಮಾ ನೀಡಿದೆ.

ಚಿತ್ರದಲ್ಲಿ 2ನೇ ನಾಯಕಿಯಾಗಿ ಭಾವನಾ ಶ್ರೀನಿವಾಸ್ವಾಸಂತಿ’ ಎಂಬ ಪಾತ್ರವನ್ನ ಮಾಡಿದ್ದು ಬಡತನದಲ್ಲಿರುವ ಜವಾಬ್ದಾರಿಯುತ ಹುಡುಗಿಯಾಗಿರುತ್ತಾಳೆ,

ಸಿನಿಮಾದಲ್ಲಿ ನಾಯಕನ ಜೊತೆಗೆ ಇವರ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಇನ್ನು ಖಳನಟನ ಪಾತ್ರದಲ್ಲಿ ನಟಿಸಿರು

‘ಧನಂಜಯ್‘(Dhananjay) ತಮ್ಮದೆ ಆದ ನಟನೆಯಲ್ಲಿ ಜನಮನ ಗಳಿಸಿದ್ದಾರೆ. ಸಿನಿಮಾದಲ್ಲಿ ಇವರ ಲುಕ್ ತುಂಬಾನೆ ಸ್ಟೈಲಿಶ್ ಆಗಿ ಇದ್ದು, ಖಳನಟ ಹೀಗೂ ಇರ್ತಾರ ಎಂದು ಬೆರಗಾಗುವಂತೆ ಇವರ ಪಾತ್ರ ಮೂಡಿ ಬಂದಿದೆ.

ಇನ್ನು ಸಿನಿಮಾದಲ್ಲಿ ಹಾಸ್ಯ ನಟನಾಗಿ ಸಾಧೂಕೋಕಿಲ(Sadhukokila) ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,

ಇದನ್ನೂ ಓದಿ : https://vijayatimes.com/health-minister-statement/

ಇವರಿಗೆ ಜೊತೆಯಾಗಿ ವಿನೋದ್ ಗೊಬ್ರಗಾಲ, ಮಂಜುಪಾವಗಡ ನಡಿಸಿದ್ದು, ಚಿತ್ರದಲ್ಲಿನ ಹಾಸ್ಯವು ಜನರಲ್ಲಿ ನಗುವನ್ನು ತಂದಿದೆ. ಶ್ರೀ ಗುರು ಸಂಗೀತ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿರುವ ಎಲ್ಲಾ ಹಾಡುಗಳು ವೀಕ್ಷಕರಿಗೆ ಇಷ್ಟವಾಗಿದೆ.

ರವೀಂದ್ರ ವೆಂಶಿ (Ravindra Venshi) ರವರು ನಿರ್ದೇಶಿಸಿದ ಈ ಸಿನಿಮಾ ಈಗ ನಾಲ್ಕನೆ ವಾರದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಸ್ಯಾಂಡಲ್‍ವುಡ್ನಲ್ಲಿ ಹೊಸ ಭರವಸೆಯನ್ನ ಹುಟ್ಟು ಹಾಕಿಸಿ ಮುನ್ನುಗ್ಗುತ್ತ ಇದೆ.

Exit mobile version