ಲೋಕಸಮರ – 2024: ಕಾಂಗ್ರೆಸ್ನ ಅಧೀರ್ ರಂಜನ್ ಚೌಧುರಿ ವಿರುದ್ಧ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕೆ

Kolkata: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕ್ರಿಕೆಟಿಗ ಯೂಸುಫ್ ಪಠಾಣ್ (Yusuf Phatan) ಅವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬರ್ಹಾಂಪೋರ್ನಿಂದ ಕಾಂಗ್ರೆಸ್ನ ಅಧೀರ್ ರಂಜನ್ ಚೌಧುರಿ ವಿರುದ್ಧ ಕಣಕ್ಕಿಳಿದಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 2011 ರ ಜನಗಣತಿಯ ಪ್ರಕಾರ ಮುರ್ಷಿದಾಬಾದ್ ಬಂಗಾಳದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಶೇ.66.28% ಹೊಂದಿದೆ. ಚೌಧರಿ ಅವರು 1999 ರಿಂದ ಬರ್ಹಾಂಪೋರ್ ಕ್ಷೇತ್ರದಿಂದ ಗೆಲ್ಲುತ್ತಿದ್ದಾರೆ. ಇನ್ನು ನಟಿ ರಚನಾ ಬ್ಯಾನರ್ಜಿ (Rachana Banerjee) ಅವರು ಮಾಜಿ ನಟ ಮತ್ತು ಹೂಗ್ಲಿ ಜಿಲ್ಲೆಯ ಹೂಗ್ಲಿ ಕ್ಷೇತ್ರದಿಂದ ಹಾಲಿ ಬಿಜೆಪಿ ಸಂಸದರಾಗಿರುವ ಲಾಕೆಟ್ ಚಟರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಕೆಲವು ವರ್ಷಗಳ ಹಿಂದೆ ಬಿಜೆಪಿ (BJP) ತೊರೆದು ಟಿಎಂಸಿಗೆ ಸೇರ್ಪಡೆಗೊಂಡ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್, 2019 ರಲ್ಲಿ ಬಿಜೆಪಿಯ ಎಸ್ಎಸ್ ಅಹ್ಲುವಾಲಿಯಾ ಗೆದ್ದ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ಬುರ್ದ್ವಾನ್-ದುರ್ಗಾಪುರ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ.

ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

ಕೂಚ್ ಬೆಹರ್ – ಜಗದೀಶ್ ಚಂದ್ರ ಬಸುನಿಯಾ
ಅಲಿಪುರ್ದೂರ್ – ಪ್ರಕಾಶ್ ಚಿಕ್ ಬರೈಕ್ (ರಾಜ್ಯಸಭಾ ಸದಸ್ಯ)
ಜಲ್ಪೈಗುರಿ – ನಿರ್ಮಲ್ ಚಂದ್ರ ರೈ (ಶಾಸಕ)
ಡಾರ್ಜಿಲಿಂಗ್ – ಗೋಪಾಲ್ ಲಾಮಾ
ರಾಯಗಂಜ್ – ಕೃಷ್ಣ ಕಲ್ಯಾಣಿ (Krishna Kalyani)
ಬಲೂರ್ಘಾಟ್ – ಬಿಪ್ಲಬ್ ಮಿತ್ರ (ಸಚಿವ)
ಮಾಲ್ಡಾ ನಾರ್ತ್ – ಪ್ರಸೂನ್ ಬ್ಯಾನರ್ಜಿ (ಮಾಜಿ ಐಪಿಎಸ್ ಅಧಿಕಾರಿ)
ಮಾಲ್ಡಾ ಸೌತ್ – ಶಾನವಾಜ್ ಅಲಿ ರೆಹಾನ್
ಜಂಗಿಪುರ – ಖಲೀಲುರ್ ರೆಹಮಾನ್

ಬರ್ಹಾಂಪೋರ್ – ಯೂಸುಫ್ ಪಠಾಣ್ (ಭಾರತೀಯ ಕ್ರಿಕೆಟಿಗ)
ಮುರ್ಷಿದಾಬಾದ್ – ಅಬು ತಾಹೆರ್ ಖಾನ್
ಕೃಷ್ಣನಗರ – ಮಹುವಾ ಮೊಯಿತ್ರಾ
ರಣಘಾಟ್ – ಮುಕುತ್ ಮಣಿ ಅಧಿಕಾರಿ (ಬಿಜೆಪಿ ಶಾಸಕ)
ಬಂಗಾವ್ _ ಬಿಸ್ವಜಿತ್ ದಾಸ್
ಬ್ಯಾರಕ್ಪೋರ್ – ಪಾರ್ಥ ಭೌಮಿಕ್ (ಸಚಿವ)
ದಮ್ ದಮ್ – ಸೌಗತ ರಾಯ್ (MP)
ಬರಾಸತ್ – ಕಾಕಲಿ ಘೋಷ್ ದಸ್ತಿದಾರ್ (ಸಂಸದ)
ಬಸಿರ್ಹತ್ – ಹಾಜಿ ನೂರುಲ್ ಇಸ್ಲಾಂ

ಜೋಯನಗರ – ಪ್ರತಿಮಾ ಮೊಂಡಲ್
ಮಥುರಾಪುರ – ಬಾಪಿ ಹಲ್ದಾರ್
ಡೈಮಂಡ್ ಹಾರ್ಬರ್ (Diamond Harbor) – ಅಭಿಷೇಕ್ ಬ್ಯಾನರ್ಜಿ
ಜಾದವ್ಪುರ- ಸಯೋನಿ ಘೋಷ್ (ಯುವ ಟಿಎಂಸಿ ಅಧ್ಯಕ್ಷರು)
ಕೋಲ್ಕತ್ತಾ ದಕ್ಷಿಣ – ಮಾಲಾ ರಾಯ್ (MP)
ಕೋಲ್ಕತ್ತಾ ಉತ್ತರ – ಸುದೀಪ್ ಬಂಡೋಪಾಧ್ಯಾಯ (ಸಂಸದ)
ಹೌರಾ- ಪ್ರಸೂನ್ ಬ್ಯಾನರ್ಜಿ (ಸಂಸದ)
ಉಲುಬೇರಿಯಾ- ಸಜ್ದಾ ಅಹ್ಮದ್
ಶ್ರೀರಾಮಪುರ – ಕಲ್ಯಾಣ್ ಬ್ಯಾನರ್ಜಿ (ಸಂಸದ)

ಹೂಗ್ಲಿ- ರಚನಾ ಬ್ಯಾನರ್ಜಿ (ಚಲನಚಿತ್ರ ತಾರೆ)
ಅರಾಂಬಾಗ್- ಮಿತಾಲಿ ಬಾಗ್
ತಮ್ಲುಕ್ – ದೇಬಂಗ್ಶು ಭಟ್ಟಾಚಾರ್ಯ
ಕಂಠಿ – ಉತ್ತಮ್ ಬಾರಿಕ್
ಘಟಾಲ್ – ದೀಪಕ್ ಅಧಿಕಾರಿ (ಸಂಸದ)
ಜಾರ್ಗ್ರಾಮ್ – ಕಲಿಪಾದ ಸೊರೆನ್
ಮಿಡ್ನಾಪುರ – ಜೂನ್ ಮಲಿಯಾ (MLA)
ಪುರುಲಿಯಾ – ಶಾಂತಿರಾಮ್ ಮಹತೋ
ಬಂಕುರಾ – ಅರೂಪ್ ಚಕ್ರವರ್ತಿ (ಶಾಸಕ)
ಬಿಷ್ಣುಪುರ್ – ಸುಜಾತಾ ಮೊಂಡಲ್ ಖಾನ್ (ಪ್ರಸ್ತುತ ಬಿಜೆಪಿ ಸಂಸದರ ಮಾಜಿ ಪತ್ನಿ)
ಬುರ್ದ್ವಾನ್ – ಡಾ ಶರ್ಮಿಳಾ ಸರ್ಕಾರ್
ಬುರ್ದ್ವಾನ್-ದುರ್ಗಾಪುರ- ಕೀರ್ತಿ ಆಜಾದ್ (ಮಾಜಿ ಕ್ರಿಕೆಟಿಗ)

Exit mobile version