ಝೀಲ್ಯಾಂಡಿಯಾ’ ಎಂಬ 8ನೇ ಖಂಡ ಪತ್ತೆ: ಸಮುದ್ರದಾಳಕ್ಕೆ ಸೇರಿ ಹೋಗಿದ್ದ ಭೂಮಿಯ ಹೊಸ ಖಂಡ

Zealandia: ಕೋಟ್ಯಂತರ ವರ್ಷಗಳಿಂದಲೂ ನಾವು ವಾಸಿಸುತ್ತಿರುವ ಭೂಮಂಡಲ ವಿಕಾಸ ಆಗುತ್ತಲೇ ಇದೆ. ಭೂಮಿಯ ಮೇಲೆ (Zealandia Earths 8th continent) ಜೀವರಾಶಿಗಳೆಲ್ಲಾ

ಜನನವಾದ ಮೇಲೆ ಅಂತಿಮವಾಗಿ ಮನುಷ್ಯನ ಉಗಮವಾಯ್ತು ಎನ್ನುತ್ತದೆ ವಿಜ್ಞಾನ. ಮನುಷ್ಯ ಬುದ್ಧಿವಂತ ಜೀವಿಯಾಗುವ ಹೊತ್ತಿಗಾಗಲೇ ಭೂಮಿ ಹೊಸ ಆಕಾರವನ್ನೇ ಪಡೆದುಕೊಂಡಿತ್ತು.

ಕಂಡಿದ್ದು 7 ಖಂಡಗಳು ಮಾತ್ರ ಇದೀಗ ಹೊಸ ಖಂಡವೊಂದು ಪತ್ತೆಯಾಗಿದ್ದು, ವಿಶ್ವ ಭೂಪಠಕ್ಕೆ 8ನೇ ಖಂಡ ಸೇರ್ಪಡೆಯಾಗಿದೆ.

ಕೋಟ್ಯಂತರ ವರ್ಷಗಳ ಹಿಂದೆಯೇ ಸಮುದ್ರದ ಆಳದಲ್ಲಿ ಸೇರಿ ಹೋಗಿದ್ದ ಹೊಸ ಖಂಡವೊಂದು ಇದೀಗ ಪತ್ತೆಯಾಗಿದ್ದು, ಶಾಲೆಗಳಲ್ಲಿ ಭೂಗೋಳದ ಪಾಠ ಮಾಡುವಾಗ ಶಿಕ್ಷಕರು ಭೂಮಿಯ

ಮೇಲೆ 7 ಖಂಡಗಳಿವೆ ಅಂತಾ ಹೇಳಿಕೊಟ್ಟಿರುವುದು ನೆನಪಿದೆ ಆದರೆ ನಾವಿರುವ ಭೂಮಿಯ ಮೇಲೆ ಮತ್ತೊಂದು ಖಂಡವಿದ್ದು, ಅದು ಈವರೆಗೂ ಪತ್ತೆ ಆಗಿರಲಿಲ್ಲ.

ವಿಜ್ಞಾನಿಗಳು 8ನೇ ಖಂಡವನ್ನು ಪತ್ತೆ ಮಾಡಿದ್ದು, ಆ ಖಂಡಕ್ಕೆ ‘ಝೀಲ್ಯಾಂಡಿಯಾ’ (Zealandia) ಅಂತಾ ಹೆಸರನ್ನಿಟ್ಟಿದ್ದಾರೆ. ಇನ್ನು ಈ ಹೊಸ ಖಂಡಕ್ಕೆ ಝೀಲ್ಯಾಂಡಿಯಾ ಅನ್ನೋ ಹೆಸರು ಇಟ್ಟಿರುವುದಾದರೂ

ಯಾಕೆ ಮತ್ತು ಇದು ಎಲ್ಲಿದೆ? ಈ 8ನೇ ಖಂಡವನ್ನು ಕಂಡು ಹಿಡಿದಿರುವುದು ಹೇಗೆ? ಕಂಡು ಹಿಡಿದವರು ಯಾರು? ಈ ಎಲ್ಲಾ ಮಾಹಿತಿ ಈ ರೀತಿಯಾಗಿದೆ.

ನ್ಯೂಜಿಲೆಂಡ್ (New Zealand) ದೇಶವು ಒಂದು ದ್ವೀಪ ರಾಷ್ಟ್ರವಾಗಿದ್ದು, ಈ ದೇಶ ನೋಡಲು ಮಾತ್ರ ತುಂಬಾ ಚಿಕ್ಕದಾಗಿದೆ ಆದರೆ ಈ ದೇಶದ ಸುತ್ತಲೂ ಹರಡಿರುವ ಸಮುದ್ರದ ಕೆಳ ಭಾಗದಲ್ಲಿ ಅತಿ

ದೊಡ್ಡ ಭೂ ಭಾಗ ಇದೆ. ಈ ಭೂ ಭಾಗ ಯಾರ ಗಮನಕ್ಕೂ ಬಂದಿರಲಿಲ್ಲ. ಪ್ರಪಂಚದಲ್ಲಿ ಇರುವುದು 7 ಖಂಡಗಳು ಮಾತ್ರ ಅಲ್ಲ, 8ನೇ ಖಂಡವು ಕೂಡ ಇದೆ ಅಂತಾ ತಜ್ಞರು ವಾದ ಮಾಡ್ತಿದ್ರು.

ತಜ್ಞರ ಈ ವಾದಕ್ಕೆ ಸಾಕ್ಷಿ ಇರಲಿಲ್ಲ. ಆದರೆ (Zealandia Earths 8th continent) ಇದೀಗ ಪುರಾವೆ ಸಿಕ್ಕಿದೆ.

ಈ ದೇಶದ ಸಮುದ್ರದ ತಳದಲ್ಲಿ ಇರುವ ಬಂಡೆಗಳು ಹಾಗೂ ಇಲ್ಲಿನ ಮಣ್ಣಿನ ಮಾದರಿ ಸಂಗ್ರಹ ಮಾಡಿ ಅಧ್ಯಯನ ನಡೆಸಿದಾಗ ಇದು ಬಹಳ ಹಿಂದೆ ದೊಡ್ಡ ಭೂ ಭಾಗ ಆಗಿತ್ತು ಅಂತಾ ಪತ್ತೆ

ಮಾಡಲಾಗಿದೆ.ಆಫ್ರಿಕಾ (Africa) ಖಂಡದ ಮಡಗಾಸ್ಕರ್ ದ್ವೀಪಕ್ಕಿಂತಾ 6 ಪಟ್ಟು ಈ ಝೀಲ್ಯಾಂಡಿಯಾ ಅನ್ನೋ ಖಂಡ ದೊಡ್ಡದಾಗಿದೆ. ಆದರೆ, ಈ ಖಂಡ ಸಮುದ್ರದಲ್ಲಿ ಮುಳುಗಿಹೋಗಿದ್ದು,

ಖಂಡದ 94% ಭಾಗ ನೀರಿನ ಒಳಗೆ ಇದೆ.

ಝೀಲ್ಯಾಂಡಿಯಾ ಖಂಡದ ಎತ್ತರದ ಪ್ರದೇಶಗಳು ಮಾತ್ರ ನೀರಿನ ಮೇಲೆ ಕಾಣುತ್ತಿದ್ದು, ಈ ಎತ್ತರದ ಪ್ರದೇಶವೇ ಇಂದಿನ ನ್ಯೂಜಿಲೆಂಡ್ ದೇಶವಾಗಿದೆ. ಈ ದೇಶವು ಝೀಲ್ಯಾಂಡಿಯಾ ದ್ವೀಪದ 6% ಮಾತ್ರ

ಇದ್ದು ಮಿಕ್ಕ ಭೂ ಭಾಗವೆಲ್ಲಾ ಸಮುದ್ರದ ಆಳದಲ್ಲೇ ಇದೆ. ಭೂಮಿಯ ಮೇಲಿರುವ ಅತಿ ದೊಡ್ಡ ಖಂಡಗಳ ಪೈಕಿ ಏಷ್ಯಾ ಖಂಡ ಮೊದಲನೆಯದಾಗಿದ್ದು, ಜನಸಂಖ್ಯೆಯಲ್ಲೂ ಏಷ್ಯಾ (Asia) ಖಂಡ ದೊಡ್ಡದು.

ಭಾರತ ಕೂಡಾ ಏಷ್ಯಾ ಖಂಡದಲ್ಲೇ ಇದೆ.

ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ (Europe), ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕಾ ಖಂಡಗಳು ಈವರೆಗೂ ಅಸ್ತಿತ್ವದಲ್ಲಿ ಇದ್ದವು. ಇದೀಗ ಈ ಪಟ್ಟಿಗೆ ಝೀಲ್ಯಾಂಡಿಯಾ ಅನ್ನೋ

8ನೇ ಹೊಸ ಖಂಡ ಸೇರ್ಪಡೆ ಆಗಿದೆ.

ಇದನ್ನು ಓದಿ :ಕಪ್ಪು ಬಣ್ಣದ ಬುರ್ಖಾ ಧರಿಸಿ ವಿಭಿನ್ನವಾಗಿ ಪ್ರತಿಭಟನೆಗೆ ಇಳಿದ ವಾಟಾಳ್ ನಾಗರಾಜ್

Exit mobile version