ಯೋಗ್ಯವಲ್ಲದ ಆಹಾರ ಕ್ರಮ ಹಾಗೂ ಏರುಪೇರಾದ ಜೀವನ ಶೈಲಿಯು ಆರೋಗ್ಯವನ್ನು ಹದಗೇಡಿಸುತ್ತದೆ. ಪ್ರಸ್ತುತ ನಾವು ಧಾವಚಿತದ ಬದುಕನ್ನು ಬದುಕುತ್ತಿದ್ದೇವೆ. ಈ ಧಾವಂತದ ಬದುಕಿಗೆ ಅಥವಾ ಮನುಷ್ಯನ ಜೀವನಕ್ಕೆ ರೋಗನಿರೋಧಕ ಶಕ್ತಿಯ ಅವಶ್ಯಕತೆಯಿದ್ದು, ಅದನ್ನು ಹೇಗೆ ವೃದ್ಧಿಸಿಕೊಳ್ಳುವುದು ಎಂಬ ಪ್ರಶ್ನೆಯು ಎಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನಮ್ಮ ದೇಹಕ್ಕೆ ಇಮ್ಯೂನಿಟಿ ಪವರ್ ಹಾಗೂ ವಿಟಮಿನ್ ಡಿಯ ಅವಶ್ಯಕತೆ ಇದೆ.
ಇಮ್ಯೂನ್ ರಿಯಾಕ್ಷನ್ ಎಂಬುವುದು ನಮ್ಮ ದೇಹದಲ್ಲಿನ ಬಿಳಿ ರಕ್ತಕಣಗಳಿಂದ ನಡೆಯುವ ಪ್ರಕ್ರಿಯೆಯಾಗಿದ್ದು, ಮೂಳೆ ಮಜ್ಜೆಯಲ್ಲಿ ಹುಟ್ಟುತ್ತದೆ. ಹಾಗೆಯೇ ಮ್ಯಾನಿಸೈಟ್ಸ್ ಎಂದು ಕರೆಯಲ್ಪಡುವ ಜೀವಕೋಶಗಳು ದೇಹದ ಮ್ಯಾಕ್ರೋಫೇಜಸ್ ಎಂಬ ಕೋಶಗಳಿಗೆ ಹೊಂದಿಕೆಯಾಗದ ಕಾರಣ, ದೇಹದಲ್ಲಿ ಕಣಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಇಮ್ಯೂನಿಟಿ ಎನ್ನುವುದು ಸಹಜವಾದ ರೋಗ ನಿರೋಧಕ ವ್ಯವಸ್ಥೆಯಾಗಿದೆ.
ಇಮ್ಯೂನಿಟಿ ಮತ್ತು `ವಿಟಮಿನ್ ಡಿ’ಗೆ ಅವಿನಾಭಾವ ಸಂಬAಧವಿದೆ. ಇವುಗಳೆರಡು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಲ್ಲವು. ‘ವಿಟಮಿನ್ ಡಿ’ ಯೂ ಮುಖ್ಯವಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರ ಜತೆಗೆ ವೈರಸ್‌ನ್ನು ತಡೆಗಟ್ಟುವ ಸಾಧನವಾಗಿದೆ. ಆದ್ದರಿಂದ ಇಮ್ಯೂನಿಟಿ ಮತ್ತು ವಿಟಮಿನ್ ಡಿಗಳೆರಡು ರೋಗನಿರೋಧಕ ಹಾರ್ಮೋನ್‌ಗಳಾಗಿ ಕಂಡು ಬರುತ್ತವೆ.
ಮೊಟ್ಟೆ, ಮೀನಿನ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ವಿಟಮಿನ್ ಡಿಯನ್ನು ಪಡೆದುಕೊಳ್ಳಬಹುದು ಆದರೆ ಅದರಿಂದ ಭಾರಿ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ದೇಹಕ್ಕೆ ದೊರಕುವ ನೈಜ ಸಂಪತ್ತೆAದರೆ, ಬೆಳಗ್ಗಿನ ಸೂರ್ಯನ ಬಿಸಿಲು. ಸೂರ್ಯನ ಕಿರಣಗಳು ನಮ್ಮ ಚರ್ಮಕ್ಕೆ ಸೋಕಿದಾಗ ದೇಹದಲ್ಲಿ ವಿಟಮಿನ್ ಡಿಯ ತ್ವರಿತ ಉತ್ಪಾದನೆಯಾಗುತ್ತದೆ. ಮತ್ತು ರಕ್ತಪ್ರವಾಹದಿಂದ ಮೂತ್ರಪಿಂಡಗಳಿಗೆ ರವಾನೆಯಾಗಿ ಸಕ್ರಿಯ ರೂಪಕ್ಕೆ ಬದಲಾಗುತ್ತದೆ. ನಮ್ಮ ಶೇ. ೯೦ರಷ್ಟು ವಿಟಮಿನ್ ಡಿ’ಯು ಸೂರ್ಯ ಕಿರಣಗಳಿಂದ ಲಭಿಸುತ್ತದೆ ಎನ್ನುವುದು ಸಾಬೀತಾಗಿದೆ. ಛಳಿಗಾಲದಲ್ಲಿ ಅನೇಕ ಕಾಯಿಲೆಗಳು ಕಂಡುಬರುವುದರಿAದ
ವಿಟಮಿನ್ ಡಿ’ಯ ಕೊರತೆ ಮನುಷ್ಯನ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅಂಕಿಅಂಶಗಳು ತಿಳಿಸುತ್ತವೆ.
ಕೇವಲ `ವಿಟಮಿನ್ ಡಿ’ಯಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಜತೆಗೆ ಸರಿಯಾದ ಸಮಯಕ್ಕೆ ನಿದ್ದೆ, ಶುಚಿ-ರುಚಿಯಾದ ಆಹಾರವನ್ನು ಸೇವಿಸಿದರೆ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.