ಕರೋನಾ ವೈರಸ್ ಸೋಂಕು ತಡೆಗಟ್ಟಲು ಒಂದಲ್ಲಾ ಒಂದು ಪ್ರಯತ್ನಗಳನ್ನು ಜನರು,ತಜ್ಞರು ಮಾಡುತ್ತಲೆ ಇದ್ದಾರೆ. ಇಂಗ್ಲೀಷ್ ಮೆಡಿಷಿನ್ ಜತೆಗೆ ನಮ್ಮ ಆರ್ಯುವೇದ ಔಷಧ ಉಪಯೋಗಿಸಲು ಕೆಲವರು ಈ ಸೋಂಕಿನ ನಿವಾರಣೆಗೆ ಸಲಹೆ ನೀಡುತ್ತಾರೆ. ಇನ್ನು ಮನೆಯಲ್ಲೆ ಇರುವ ಕೆಲವು ಮನೆ ಮದ್ದುಗಳ ಮೂಲಕ ಕರೋನಾ ವೈರಸ್ ಸೋಂಕು ತಗುಲದಂತೆ ಎಚ್ಚರಿಕೆವಹಿಸಬಹುದು. ಮನೆಯಲ್ಲಿ ಸಿಗುವ ಉಪ್ಪು, ಶುಂಠಿ, ಮೆಣಸು, ಅರಶಿನ ಇಂತಹ ಮನೆಯಲ್ಲಿ ಸಿಗುವ ವಸ್ತುಗಳನ್ನು ಸೇವಿಸುವುದರಿಂದ ಕೂಡ ಈ ಕೋವಿಡ್-19 ಸೋಂಕನ್ನು ತಡೆಯಬಹುದಾಗಿದೆ.
ಭಾರತದಲ್ಲಿ ಬೇರೆ ದೇಶಗಳಷ್ಟು ಕರೋನಾ ಸೋಂಕಿನಿಂದ ಸಾವುಗಳು ಸಂಭವಿಸಿಲ್ಲ. ಕಾರಣ ನಮ್ಮ ಉತ್ತಮ ಆಹಾಯ ಕ್ರಮ ಎಂದರೆ ತಪ್ಪಾಗಲಾರದು. ಹೌದು ನಾವು ಸೇವಿಸುವ ಎಷ್ಟೋ ಆಹಾರಗಳಲ್ಲಿ ರೋಗನಿರೋಧಕ ಶಕ್ತಿಗಳು ಇವೆ. ಇದರಿಂದ ಕರೋನಾ ವೈರಸ್ ಸೋಂಕು ಬರದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಸದ್ಯ ಈಗ ಉಪ್ಪು ನೀರಿನಿಂದ ಈ ಕರೋನಾ ವೈರಸ್ ತಡೆಯಬಹುದು ಎಂಬುದು ತಿಳಿದು ಬಂದಿದೆ. ಹೌದು ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಪ್ರಯತ್ನದಲ್ಲಿ ಉಪ್ಪು ನೀರು ಬಳಕೆ ಕೂಡ ಒಂದಾಗಿದೆ. ನಮ್ಮ ದೇಶದಲ್ಲಿ ಈಗಾಗಲೇ ಅನೇಕರು ನಿಂಬೆ ರಸ ಮತ್ತು ಉಪ್ಪು ಮಿಶ್ರಿತ ನೀರನ್ನು ಕುಡಿಯುವುದು, ಕುಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು, ಅರಿಶಿನ ಮತ್ತು ಶುಂಠಿ, ಹಾಲನ್ನು ಹಾಕಿ ಕಾಷಯ ಮಾಡಿ ಕುಡಿಯುವುದು ಇನ್ನು ಮುಂತಾದ ರೋಗನಿರೋಧಕ ಶಕ್ತಿಯುಳ್ಳ ಮನೆ ಮದ್ದುಗಳನ್ನು ಬಳಕೆ ಮಾಡಿ ಆಯೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇದ್ದಾರೆ.
ಈ ಮನೆ ಮದ್ದುಗಳ ಪ್ರಯತ್ನ ದೇಶದ ಗಮನ ಸೆಳೆದಿದೆ ಅದರಲ್ಲು ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕೋವಿಡ್-19 ತಡೆಯುವಲ್ಲಿ ಉಪ್ಪು ನೀರು ಒಂದು ರಾಮಭಾಣ ಎಂಬ ಪ್ರಶ್ನೆ ಮೂಡಿದ್ದು ಇದರ ಬಗ್ಗೆ ಕೆಲ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಎಡಿನ್ ಬರ್ಗ್ ಯೂನಿರ್ವರ್ಸಿಟಿಯ ಒಂದು ತಂಡ ಉಪ್ಪು ನೀರು ಕರೋನಾ ವೈರಸ್ ವಿರುದ್ಧ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನ ನಡೆಸಲು ಮುಂದಾಗಿದ್ದಾರೆ. ಬ್ರಿಟನ್‍ನಲ್ಲಿ ಕೋವಿಡ್-19 ಸೋಂಕು ತಡೆಗೆ ಎನ್‍ಎಚ್‍ಎಸ್ ಈಗಾಗಲೇ ಎರಡು ಆ್ಯಂಟಿ ವೈರಲ್ ಔಷಧಗಳೆಂದು ಸ್ಟಿರೋಯ್ಡ್ ಡೆಕ್ಸಾಮೀಥಾಸೋನ್ ಮತ್ತು ಆ್ಯಂಟಿ ಎಬೋಲಾ ಡ್ರಗ್ ರೆಮ್ಡೆಸಿವಿರ್ ಅನ್ನು ಬಳಸಲು ಒಪ್ಪಿಗೆ ನೀಡಿದೆ. ಆದರೂ ಈ ಔಷಧಗಳಿಂದ ಸೋಂಕು ವಾಸಿಯಾಗುತ್ತದೆ ಎಂದು ಭರವಸೆ ಇಲ್ಲವಾಗಿದೆ.
ಆದ್ದರಿಂದ ಸ್ವಲ್ಪಮಟ್ಟಿಗೆ ಕರೋನಾ ರೋಗ ಲಕ್ಷಣ ಇರುವವರಿಗೆ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸಿ, ಗಂಟಲು ಸ್ವಚ್ಛಗೊಳಿಸುವ ಸಲಹೆಯನ್ನು ವಿಜ್ಞಾನಿಗಳು ಸಹ ನೀಡಲು ಪ್ರಾರಂಭಿಸಿದ್ದಾರೆ. ಜತೆಗೆ ಉಪ್ಪು ನೀರಿನ ಪರಿಣಾಮ ಏನೆಂದು ತಿಳಿಯಲು ಸಂಶೋಧನೆ ಮಾಡುತ್ತಿದ್ದಾರೆ. ಇನ್ನು ಈ ಅಧ್ಯಯನಕ್ಕೆ ಎಡಿನ್ ಬರ್ಗ್ ಆ್ಯಂಟಿ ಲೊಥಿಯಾನ್ಸ್ ವೈರಸ್ ಇಂಟರ್‍ವೆನ್ಯನ್ ಸ್ಟಡಿ(ಇಎಲ್‍ವಿಐಎಸ್) ಎಂದು ಹೆಸರನ್ನು ಇಡಲಾಗಿದೆ. ಈ ಹಿಂದೆಯೆ ಉಪ್ಪುನೀರಿನ ಬಳಕೆಯಿಂದ ಕೆಲವು ರೋಗಗಳ ನಿವಾರಣೆಯಾಗುತ್ತದೆ ಎಂದು ಪ್ರಯೋಗ ನಡೆಸಲಾಗಿತ್ತು. ಉಪ್ಪು ನೀರು ಬಳಕೆಯಿಂದ ಕಫ,ಕೆಮ್ಮು ಮತ್ತು ನೆಗಡಿ ಕಡಿಮೆಯಾತ್ತದೆ ಹಾಗೂ ರಕ್ತಸಂಚಲನವು ಕಡಿಮೆ ಇತ್ತು ಎಂದು ತಿಳಿದುಬಂದಿತ್ತು. ಹೀಗಾಗಿ ಇಂದು ಮತ್ತೆ ಕರೋನಾ ವೈರಸ್ ಸೋಂಕು ತಡೆಗೆ ಮತ್ತು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನ ಮಾಡಲಾಗುತ್ತಿದೆ.