ಕರೋನವೈರಸ್ ಹಾವಳಿಯಿಂದಾಗಿ ಪ್ರಧಾನಿ ಮೋದಿಯವರು ಇಂದು ದೇಶವಾಸಿಗಳೊಂದಿಗೆ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಕೆಲ ಸೆಕೆಂಡ್‌ಗಳ ಹಿಂದೆ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದು, ಈ ಮೂಲಕ ಎಲ್ಲರ ಕೂತುಹಲಕ್ಕೆ ತೆರೆಎಳೆದಿದ್ದಾರೆ.
ನಿನ್ನೆ ಈ ಬಗ್ಗೆ ಉಲ್ಲೇಖ ತಮ್ಮ ಟ್ವಿಟರ್ ಆಕೌಂಟ್‌ನಲ್ಲಿ ಮಾಡಿದ್ದ ಪ್ರಧಾನಿ ಮೋದಿಯವರು ನಾಳೆ (ಶುಕ್ರವಾರ) ನಾಳೆ ಬೆಳಗ್ಗೆ 9 ಗಂಟೆಗೆ ನಾನು ದೇಶವಾಸಿಗಳೊಂದಿಗೆ ವಿಶೇಷವಾದ ವಿಡಿಯೋ ಸಂದೇಶವನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದರು, ಹೀಗಾಗಿ ದೇಶದ ಜನತೆ ಇಂದು ಪ್ರಧಾನಿ ಮೋದಿಯವರು ಯಾವ ರೀತಿಯ ಟ್ವಿಟ್ ಮಾಡಲಿದ್ದಾರೆ ಅಂತ ಕಾಯುತ್ತಿದ್ದರು.
ಲಾಕ್ ಡೌನ್ ಜಾರಿಯಾಗಿ ಇಂದಿಗೆ ಒಂಬತ್ತು ದಿವಸವಾಗಿದೆ, ಇದನ್ನು ಇಡೀ ವಿಶ್ವವೇ ಅನುಸರಣೆ ಮಾಡುತ್ತಿದೆ. ಈ ಹಿಂದೆ ಮಾರ್ಚ್ ರಂದು ನೀಡಿದ್ದ ಜನತಾ ಕರ್ಪೂಗೆ ನೀವು ಅಭೂತ ಪೂರ್ವ ಬೆಂಬಲ ನೀಡಿದ್ದೀರಾ. ‘ಈ ಲಾಕ್‌ಡೌನ್ ಎಷ್ಟು ಕಾಲ ಉಳಿಯುತ್ತದೆ ಎಂಬ ಬಗ್ಗೆ ನಿಮ್ಮಲ್ಲಿ ಹಲವರು ಆಶ್ಚರ್ಯ ಪಡುತ್ತಿರಬಹುದು, ಈ ಹೋರಾಟದಲ್ಲಿ ನೀವು ಏಕಾಂಗಿಯಾಗಿ ಭಾವಿಸುತ್ತಿರಬಹುದು, ಆದರೆ ನಾವೆಲ್ಲರೂ ಅದರಲ್ಲಿ ಒಟ್ಟಾಗಿರುತ್ತೇವೆ’ ಅಂತ ಹೇಳಿದರು. ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ನಮ್ಮ ಮಾರ್ಗವನ್ನು ಅನೇಕ ದೇಶಗಳು ಅನುಕರಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ, ನಾನು ನಿಮ್ಮ ಒಂಬತ್ತು ನಿಮಿಷಗಳನ್ನು ಬಯಸುತ್ತೇನೆ. ಎಲ್ಲಾ ದೀಪಗಳನ್ನು ಆಫ್ ಮಾಡಿ ಮತ್ತು ಮೇಣದಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಷ್ ಲೈಟ್‌ಗಳನ್ನು ನಿಮ್ಮ ಮನೆಗಳ ಹೊರಗೆ ಅಥವಾ ಬಾಲ್ಕನಿಗಳಲ್ಲಿ ಬೆಳಗಿಸಿ ಕೊರೊನಾವೈರಸ್‌ಗೆ ಸವಾಲು ಹಾಕಿ ಆಂತ ಹೇಳಿದರು.